ಜಗಳೂರಿಗೆ ಬಸ್ ಡಿಪೋಗೆ ಆಗ್ರಹಿಸಿ ದಾವಣಗೆರೆಗೆ ಪಾದಯಾತ್ರೆ

KannadaprabhaNewsNetwork |  
Published : Dec 17, 2024, 12:46 AM IST
16 ಜೆ.ಜಿ.ಎಲ್. 1) ಜಗಳೂರು ಪಟ್ಟಣದಲ್ಲಿ   ಎಸ್ ಆರ್ ಟಿಸಿ ಡಿಪೋ ಸ್ಥಾಪಿಸಲು ಒತ್ತಾಯಿಸಿ ಮಂಗಳವಾರ ದಾವಣಗೆರೆ ಕೆಎಸ್ ಆರ್ ಟಿಸಿ ಡಿಸಿ ಕಛೇರಿಗೆ ಮುತ್ತಿಗೆ ಹಾಕುವ ಸಂಬಂಧ ಪಾದಯಾತ್ರೆಗೆ ಬೆಂಬಲಿಸಿ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. | Kannada Prabha

ಸಾರಾಂಶ

ಜಗಳೂರು ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಸ್ಥಾಪಿಸಲು ಒತ್ತಾಯಿಸಿ ಮಂಗಳವಾರ ದಾವಣಗೆರೆ ಕೆಎಸ್‌ಆರ್‌ಟಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಸಂಬಂಧ ನಡೆದ ಪಾದಯಾತ್ರೆ ಬೆಂಬಲಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

- ಪಾದಯಾತ್ರೆಗೆ ಸಂಘಟನೆಗಳ ಸಾಥ್‌ ।

- ಇಂದು ಕೆಎಸ್‌ಆರ್‌ಟಿಸಿ ಡಿಸಿ ಕಚೇರಿಗೆ ಮುತ್ತಿಗೆ- - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಸ್ಥಾಪಿಸಲು ಒತ್ತಾಯಿಸಿ ಮಂಗಳವಾರ ದಾವಣಗೆರೆ ಕೆಎಸ್‌ಆರ್‌ಟಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವ ಸಂಬಂಧ ನಡೆದ ಪಾದಯಾತ್ರೆ ಬೆಂಬಲಿಸಿ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಪ್ರಮುಖ ಬೀದಿಗಳ ಮೂಲಕ ಅಂಬೇಡ್ಕರ್ ವೃತ್ತ ಮುಂಭಾಗ ಜಮಾಯಿಸಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಲಾಯಿತು. ಅನಂತರ ಪ್ರಗತಿಪರ ಸಂಘಟನೆಗಳ ಮುಖಂಡರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ರೈತ ಸಂಘಟನೆ ಹಿರಿಯ ಮುಖಂಡ ಬಸವರಾಜಪ್ಪ ಗಡಿಮಾಕುಂಟೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ವಿದ್ಯಾರ್ಥಿಗಳು, ಮಹಿಳೆ, ದಲಿತಪರ ಹಾಗೂ ರೈತ ಸಂಘಟನೆಗಳು ದಶಕಗಳ ಕಾಲ ಬಸ್ ಡಿಪೋ ಸ್ಥಾಪನೆಗೆ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರ್ಕಾರಗಳು ಜಾಗ ನಿಗದಿಪಡಿಸುವ ಭರವಸೆ ನೀಡಿ, ಮೂಗಿಗೆ ತುಪ್ಪ ಹಚ್ಚಿವೆ ಎಂದು ಟೀಕಿಸಿದರು.

ತಾಲೂಕಿನಲ್ಲಿ ಬಡ ಕೂಲಿ ಕಾರ್ಮಿಕರು, ಎಸ್ಸಿ/ಎಸ್ಟಿ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಹಣ ಭರಿಸಲಾಗದೇ ಪರದಾಡುತ್ತಿದ್ದಾರೆ. ಸರ್ಕಾರಿ ಬಸ್‌ಗಳಿಲ್ಲದೆ, ಖಾಸಗಿ ಬಸ್, ಆಟೋ ಗೂಡ್ಸ್‌ ವಾಹನಗಳಲ್ಲಿ ಸಂಚರಿಸುವಂತಾಗಿದೆ. ಆರ್ಥಿಕ ಹೊರೆಯೂ ಆಗುತ್ತಿದೆ. ಈ ಹಿನ್ನೆಲೆ ಶೀಘ್ರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ವಕೀಲ ಆರ್. ಓಬಳೇಶ್ ಮಾತನಾಡಿದರು. ಎಸ್‌ಎಫ್‌ಐ, ಎಎಸ್‌ಎಫ್‌ಐ, ಕರನಾಡು ನವನಿರ್ಮಾಣ ವೇದಿಕೆ, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕರವೇ, ಪತ್ರಕರ್ತರ ಸಂಘಗಳು, ಕಸಾಪ, ಮಾನವ ಬಂದುತ್ವ ವೇದಿಕೆ ಸೇರಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರಗತಿಪರ ಹೋರಾಟಗಾರರಾದ ಸತೀಶ್ ಮಲೆಮಾಚಿಕೆರೆ, ಎಚ್.ಎಂ. ಹೊಳೆ ಮಹಾಲಿಂಗಪ್ಪ, ಅನಂತರಾಜ್‌, ಧನ್ಯಕುಮಾರ್ ರಾಜಪ್ಪ, ಮಂಜುನಾಥ್, ನಾಗರಾಜ್, ಮಲ್ಲಿಕಾರ್ಜುನ್‌, ವಕೀಲ ಅಂಜಿನಪ್ಪ, ಸತ್ಯಮೂರ್ತಿ, ಪೂಜಾರ ಸಿದ್ದಪ್ಪ, ಪಪಂ ಸದಸ್ಯ ಲುಕ್ಮಾನ್ ಖಾನ್, ಕುಬೇರಪ್ಪ, ಪಲ್ಲಾಗಟ್ಟೆ ಸುಧಾ, ಓಬಣ್ಣ, ಚೌಡಮ್ಮ, ಶಾಹಿನಾಬೇಗಂ, ಬಸವರಾಜ್, ಹನುಮಂತಪ್ಪ, ಜೀವನ್, ವಕೀಲ ಅಂಜಿನಪ್ಪ, ಪ್ರವೀಣ್, ಸೂರಜ್ಜ, ಚಿರಂಜೀವಿ, ಜಯಲಕ್ಷ್ಮಿ, ದೊಣೆಹಳ್ಳಿ ತಿಪ್ಪಣ್ಣ, ಲೋಕೇಶ್ ಇತರರು ಇದ್ದರು.

- - - -16ಜೆ.ಜಿ.ಎಲ್.1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ