ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಆಯುರ್ವೇದಿಕ್ ಕಾಲೇಜಿನ ಲಿಖಿತಾ (22) ಎಂಬ ವಿದ್ಯಾರ್ಥಿನಿ ಬಿಎ ಎಂಎಸ್ ಮುಗಿಸಿ ಇಂಟರ್ನಶಿಪ್ ವ್ಯಾಸಂಗ ಮಾಡುತ್ತಿದ್ದು ಈ ವಿದ್ಯಾರ್ಥಿನಿ ಪ್ರಾಧ್ಯಾಪಕರೊಂದಿಗಿನ ಸಂಬಂಧದ ಕುರಿತು ಸುಳ್ಳು ಅಪಪ್ರಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಮಾಜದಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣ ಮಾಡುವುದು ಎಂತಹ ಭೀಕರ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಈ ಘಟನೆ ಕೈಗನ್ನಡಿಯಾಗಿದೆ. ಮತ್ತೆ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಜಿಲ್ಲಾಡಳಿತ ಇವರಿಗೆ ಕಾನೂನು ರೀತಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.ಈ ವೇಳೆ ಜಿಲ್ಲಾ ಸಂಚಾಲಕ ಸಂಜಯ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ, ನಿಹಾರಿಕ, ನಗರ ಸಹ ಕಾರ್ಯದರ್ಶಿ ರಾಘವೇಂದ್ರ, ಕನಕರಾಜ್ ಕೋಡಿಹಳ್ಳಿ, ಮೇಘನ, ಅಕ್ಷತ, ರಾಜೇಶ್ ಕುಮಾರ್, ಜಯರಾಜ್, ಜಯಂತ್, ಮಲ್ಲಿಕಾರ್ಜುನ್ ಇನ್ನಿತರರು ಉಪಸ್ಥಿತರಿದ್ದರು.