ಕುಡಿಯುವ ನೀರಿಗೆ ತೊಂದರೆ ನಿವಾರಣೆಗೆ ಕ್ರಮವಹಿಸಿ

KannadaprabhaNewsNetwork |  
Published : Aug 08, 2026, 01:30 AM IST
ಸಭೆ ಫೋಟೋ | Kannada Prabha

ಸಾರಾಂಶ

ಭದ್ರಾ ನೀರನ್ನು ಕುಡಿಯುವ ನೀರಿನ ತೊಂದರೆಯಾಗದಂತೆ ಸರಬರಾಜು ಮಾಡಲು ಬೇಕಾದ ಕ್ರಮ ಕೈಗೊಳ್ಳಲು ಪೂರಕವಾದ ಸಮಗ್ರ ವರದಿಯನ್ನು ಕೂಡಲೇ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು (ಕಡೂರು)

ಭದ್ರಾ ನೀರನ್ನು ಕುಡಿಯುವ ನೀರಿನ ತೊಂದರೆಯಾಗದಂತೆ ಸರಬರಾಜು ಮಾಡಲು ಬೇಕಾದ ಕ್ರಮ ಕೈಗೊಳ್ಳಲು ಪೂರಕವಾದ ಸಮಗ್ರ ವರದಿಯನ್ನು ಕೂಡಲೇ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಡೂರಿನಲ್ಲಿ ಶುಕ್ರವಾರ ಬೆಳೆ ಹಾಗೂ ಕೆರೆಗಳ ಪರಿಸ್ಥಿತಿ ಬಗ್ಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಕಡೂರು ತಾಲೂಕಿನಲ್ಲಿ ಪರಿವೀಕ್ಷಣೆ ನಡೆಸಿದ ಸಮಯದಲ್ಲಿ ಬರ ಪರಿಸ್ಥಿತಿ ಇರುವುದು ಗಮನಕ್ಕೆ ಬಂದಿದೆ. ಕೆರೆಗಳಲ್ಲಿ ನೀರಿಲ್ಲ ದಂತಾಗಿದೆ. ಮಳೆ ಬಾರದೆ ಬಿತ್ತನೆ ಕಾರ್ಯ ನಡೆದಿಲ್ಲ. ಮಳೆ ಬಾರದೇ ಇದ್ದರೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆಯೂ ಕೂಡಲೇ ವರದಿ ತಯಾರಿಸಬೇಕು. ಜೊತೆಗೆ ಮೇವಿನ‌ ಕೊರತೆಯಾಗದಂತೆ ಬೇಕಾದ ಕ್ರಮ ತುರ್ತಾಗಿ ಕೈಗೊಳ್ಳಬೇಕು. ಯಾವುದೇ ಸಮಸ್ಯೆಯಿದ್ದರೂ ಶಾಸಕರೊಡನೆ ಚರ್ಚಿಸಿ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಭಧ್ರಾ ನದಿ ನೀರು ನೀಡಲು ಹಲವಾರು ಕಡೆ ಜನರು ಒತ್ತಾಯಿಸಿ ದ್ದಾರೆ. ಈ ವಿಚಾರವಾಗಿ ಜಲಸಂಪನ್ಮೂಲ‌ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ‌ ಮಾತನಾಡಿದ್ದೇನೆ. ಇಲಾಖಾ ಕಾರ್ಯ ದರ್ಶಿ ಗೌರವ್ ಗುಪ್ತಾ ಜತೆಗೂ ಮಾತನಾಡಿದ್ದೇನೆ. ಅತೀ ಶೀಘ್ರದಲ್ಲೆ ಕುಡಿಯುವ ನೀರಿಗೆ ಭಧ್ರಾ ನೀರು ಒದಗಿಸುವ ಕುರಿತು ತೀರ್ಮಾನವಾಗಲಿದೆ ಎಂದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ ಮಲೆನಾಡು ಭಾಗದಲ್ಲಿ ಬರ ಪ್ರಮಾಣ ಕಡಿಮೆಯಿದೆ. ಅಲ್ಲಿ ನೆರೆ ಮತ್ತು ಬರ ಎರಡನ್ನೂ ಪರಿಗಣಿಸಲಾಗಿದೆ. ಕಡೂರಿನ ಬರದ ಪರಿಸ್ಥಿತಿ ಪರಿ ಗಣಿಸಿ ಹೆಚ್ಚು ಅನುದಾನ ನೀಡಬೇಕು. ಕಡೂರಿನಲ್ಲಿ‌ಮೆಸ್ಕಾಂ ಉಪವಿಭಾಗವಿದೆ.ಇಲ್ಲಿ‌ವಿದ್ಯುತ್ ಪರಿವರ್ತಕಗಳ ದಾಸ್ತಾನು ಇಲ್ಲ. ಟಿ.ಸಿ.ಸುಟ್ಟರೆ ಅದನ್ನು ಬೇಗ ಬದಲಾಯಿಸಲು ಪೂರಕ ಲಭ್ಯ ಪರಿವರ್ತಕಗಳ ದಾಸ್ತಾನಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕ್ಷೇತ್ರದಲ್ಲಿ ಹಲವೆಡೆ ಬರವಿದೆ. ಇನ್ನೂ ಮಳೆಗಾಲ ಇದೆಯಾದರೂ ಮಳೆ ಬಾರ ದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಈಗಲಾದರೂ ವರುಣನ ಕೃಪೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠ ಜಿತೇಂದ್ರ ದಯಾಮ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಶಾಸಕರಾದ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಭಧ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಗ್ಯಾರಂಟಿ ಅಬುಷ್ಠಾನ ಸಮಿತಿ ಜಿಲ್ಲಾ ಧ್ಯಕ್ಷ ಶಿವಾನಂದಸ್ವಾಮಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಇದ್ದರು.- ಬಾಕ್ಸ್----ವಿಧವಾ ವೇತನ, ವೃದ್ದಾಪ್ಯ ವೇತನ ಸೇರಿ ಹಲವು ವೇತನಗಳನ್ನು ಪಡೆಯಲು ₹32 ಸಾವಿರ ವಾರ್ಷಿಕ ಆದಾಯ ಮಿತಿ ನೀಡಿದ್ದಾರೆ. 29 ಸಾವಿರಕ್ಕೂ ಹೆಚ್ಚು ಜನರ ಆದಾಯ ಪ್ರಮಾಣ ಪತ್ರ ರದ್ದು ಪಡಿಸಲಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಬರುವ ಹಣವನ್ನು ಆದಾಯ ಎಂದು ಪರಿಗಣಿಸಿದ್ದಾರೆ. ನರೇಗಾ ಅಥವಾ ವಿಬಿರಾಮ್‌ ಜಿ ಯೋಜನೆಯಡಿ 100 ದಿನ ಕೆಲಸ ಮಾಡಿದರೆ ಆ ಹಣವೇ 38 ಸಾವಿರವಾಗುತ್ತದೆ. ಸರ್ಕಾರದ ಯೋಜನೆಗಳಿಂದ ಬರುವ ಹಣ ಆದಾಯ ಎಂದು ಪರಿಗಣಿಸ ಲಾಗದು. ಹೀಗಾಗಿ ಸಾವಿರಾರು ಜನರು ವೇತನಗಳಿಂದ ವಂಚಿತರಾಗಿದ್ದಾರೆ.

ಜಿಲ್ಲೆಯಲ್ಲಿ 86 ಸಾವಿರ ಜನರ ವೇತನ ರದ್ದು ಮಾಡಲಾಗಿದೆ. ಹೀಗಾದರೆ ನಾವು ಜನರ ಬಳಿ ಹೋಗಲು ಸಾಧ್ಯವೇ? ಈ ಅನ್ಯಾಯ ಸರಿಪಡಿಸಬೇಕು. ಮಾನವೀಯ ನೆಲೆಯಲ್ಲಿ ಅರ್ಹರಿಗೆ ಮತ್ತೆ ವೇತನ ನೀಡಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಮನ ಹರಿಸಬೇಕು.ಸಚಿವರು ಸಹ ಇದರತ್ತ ಗಮನ ಹರಿಸಬೇಕು ಎಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.

ಅಸಮಾಧಾನಗೊಂಡ ಸಚಿವರು ಯಾವ ಮಾನದಂಡದ ಮೇಲೆ ಇಷ್ಟು ಜನರ ವೇತನ ರದ್ದು ಮಾಡಿದ್ದೀರಿ? 86 ಸಾವಿರ ಜನರ ವೇತನ ರದ್ದಾಗಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ರದ್ದು ಮಾಡಲು ಯಾವುದೇ ಪೂರಕ ದಾಖಲೆ ಇದೆಯೇ? ನಿಜಕ್ಕೂ ಅನರ್ಹರಾಗಿದ್ದರೆ ರದ್ದು ಮಾಡಲು ಅಭ್ಯಂತರವಿಲ್ಲ. ಯಾವರೀತಿ ಜನರಿಗೆ ನ್ಯಾಯ ಕೊಡಿಸುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡ ಸಚಿವರು. ಈ ಕುರಿತು ಸಂಬಂಧಿಸಿದ ಸಚಿವರೊಡನೆ ಮಾತನಾಡುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ಉಪವಾಸ ಸತ್ಯಾಗ್ರಹ: ಸಚಿವ ಅಜಯ್ ಸಿಂಗ್ ಭರವಸೆ
ಎರಡು ದಿನ ಬರ ಪರಿಸ್ಥಿತಿ ಪರಿಶೀಲನೆ, ಸಭೆ