ಇಳಕಲ್ಲ ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ಸ್ನೇಹ ಸಂಸ್ಥೆ ಹಾಗೂ ಹಿರೇಶಿವನಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಸಮುದಾಯ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಇಳಕಲ್ಲತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ಸ್ನೇಹ ಸಂಸ್ಥೆ ಹಾಗೂ ಹಿರೇಶಿವನಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಸಮುದಾಯ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರ ಉದ್ದೇಶಿಸಿ ಸಮುದಾಯ ಆರೋಗ್ಯ ಅಧಿಕಾರಿಯಾದ ಸೀಮಾ ಅವಟಿ ಮಾತನಾಡಿ, ಇತ್ತೀಚ್ಚಿಗೆ ಜನರು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ನಿಮಗೆ ತಿಳಿದಿದೆ. ೩೦ವರ್ಷ ಮೇಲ್ಪಟ್ಟವರಿಗೆ ಬಿಪಿ ಶುಗರ್ ಹಾಗೂ ಮಧುಮೇಹ ,ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು, ಇದರ ಜೊತೆಗೆ ಕ್ಯಾನ್ಸರ್, ಮಧುಮೇಹ, ಹೃದಯ ರಕ್ತನಾಳ ಸಂಬಂಧಿಸಿದ ಹಾಗೂ ಧನುರ್ವಾಯು ರೋಗಗಳ ತಡೆಗಟ್ಟುವಿಕೆಗೆ ಆರೋಗ್ಯ ಇಲಾಖೆಯ ವತಿಯಿಂದ ಹೆಚ್ಚೆಚ್ಚು ಅರಿವು ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಜನರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಸ್ನೇಹ ಸಂಸ್ಥೆಯ ತಾಲೂಕು ಸಂಯೋಜಕ ಕೆ. ಗೋಣಿಬಸಪ್ಪ ಮಾತನಾಡಿ, ಸ್ನೇಹ ಸಂಸ್ಥೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಂಡು ಸಾಧ್ಯವಾದಷ್ಟು ಔಷಧಿಗಳನ್ನು ಖರೀದಿಸಿ ವೈದ್ಯರ ಸಲಹೆಗಳ ಮೂಲಕ ಜನರಿಗೆ ವಿತರಣೆ ಮಾಡಲಾಗುತ್ತದೆ ಎಂದರು, ಕಾರ‍್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಾದ ಅನುಸೂಯ ಹಿರೇಮಠ ಹಾಗೂ ಸ್ನೇಹ ಸಂಸ್ಥೆಯ ಸಿಬ್ಬಂದಿ ಭರಮಪ್ಪ ಸಂಗಮದ ಹಾಗೂ ಗ್ರಾಮದ ಜನರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.