ಆರೋಗ್ಯ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಿ

KannadaprabhaNewsNetwork |  
Published : Feb 05, 2024, 01:49 AM IST
೪ಕೆಎಲ್‌ಆರ್-೭ಕೋಲಾರದ ಅಂಜುಮಾನ್ ವಿದ್ಯಾಸಂಸ್ಥೆಯ ಆವರಣದಲ್ಲಿ ಎ.ಜನೈದಿಯಾ ಚಿಶ್ತಿಯಾ ಸಂಘಟನೆಯಿಂದ ಕಲ್ಬುರ್ಗಿಯ ದಿ||ತಾಜ್ ಬಾಬಾ ಹೆಸರಿನಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಿಸಿದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರಗಳು ಯಶಸ್ವಿನಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿದಂತೆ ಅನೇಕ ಸೇವೆಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯವಂತ ಪ್ರಜೆಗಳಾಗಬೇಕು. ಸರ್ಕಾರದ ಆರೋಗ್ಯ ಯೋಜನೆಗಳನ್ನು ಬಳಸಿಕೊಳ್ಳಿ

ಕನ್ನಡಪ್ರಭ ವಾರ್ತೆ ಕೋಲಾರ

ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಅಂಜುಮಾನ್ ವಿದ್ಯಾಸಂಸ್ಥೆಯ ಆವರಣದಲ್ಲಿ ಎ.ಜನೈದಿಯಾ ಚಿಶ್ತಿಯಾ ಸಂಘಟನೆಯಿಂದ ಕಲ್ಬುರ್ಗಿಯ ದಿ.ತಾಜ್ ಬಾಬಾ ಹೆಸರಿನಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷದ ವಿತರಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

3 ತಿಗಳಿಗೊಮ್ಮೆ ಆರೋಗ್ಯ ತಪಾಸಣೆ

ಪ್ರತಿಯೊಬ್ಬ ಮನುಷ್ಯ ಆರೋಗ್ಯವಾಗಿರಲು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು, ಸರ್ಕಾರಗಳು ಯಶಸ್ವಿನಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿದಂತೆ ಅನೇಕ ಸೇವೆಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯವಂತ ಪ್ರಜೆಗಳಾಗಬೇಕು ಎಂದರು.

ಸಮಾಜದಲ್ಲಿ ಸಾರ್ವಜನಿಕರು ನಮ್ಮಂತರ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಹಣ, ಜಮೀನು, ಬಂಗಲೆ ಕೊಡಿ ಅಂತ ಕೇಳಲ್ಲ ಅವರು ಕೇಳೋದು ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಕೊಡಿ ಅಂತ ಮಾತ್ರ. ರೋಗ್ಯದ ಕಾಳಜಿ ಇರೋದರಿಂದ ನಗರದ ಸಮಗ್ರ ಅಭಿವೃದ್ಧಿಗಾಗಿ ಸರಕಾರದಿಂದ ವಿಶೇಷ ಅನುದಾನ ತರಲಾಗಿದೆ ಎಂದರು.

ಮಾದರಿ ನಗರವನ್ನಾಗಿಸಲು ಯೋಜನೆ

ಮುಂದೆ ನಗರವನ್ನು ಮಾದರಿ ನಗರವಾಗಿ ಮಾಡಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಸರಕಾರ ಸಿದ್ದವಿದೆ ಶುದ್ದ ಕುಡಿಯುವ ನೀರು ಉತ್ತಮ ರಸ್ತೆಗಳು ಚರಂಡಿ ಸ್ವಚ್ಚತೆಗೆ ಅಧ್ಯತೆ ನೀಡಲಾಗುತ್ತದೆ ಎಂದರು.

ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಆಧುನಿಕತೆ ಬೆಳದಂತೆ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ, ಆರೋಗ್ಯಕ್ಕಾಗಿಯೇ ಕಾಂಗ್ರೆಸ್ ಸರಕಾರವು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿನ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಗೆ ೧೦ ಕೋಟಿ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೨.೫೦ ಕೋಟಿ, ಹಾಗೂ ಕ್ಯಾಲನೂರಿಗೆ ೪ ಸೇರಿದಂತೆ ಸುಮಾರು ೨೫ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.

ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

ತಾಜ್ ಬಾಬಾ ಸಂಸ್ಥೆಯ ಹಜ್ ಬಾಬಾ ಮಾತನಾಡಿ, ಈ ಶಿಬಿರದ ತಪಾಸಣೆಯಲ್ಲಿ ಭಾಗವಹಿಸಿದ ರೋಗಿಗಳು ನಗರದ ವಿಂಗ್ಸ್ ಇ.ಟಿ.ಸಿ.ಎಂ, ವಂಶೋದಯ, ನಾರಾಯಣ ಹಾಸ್ಪಿಟಲ್, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಚೌಡೇಶ್ವರಿ ಸೇರಿಂದತೆ ಇನ್ನೂ ಹಲವಾರು ಆಸ್ಪತ್ರೆಗಳು ಪಾಲ್ಗೊಳ್ಳಬಹುದು ಎಂದರು.

ಮಾಜಿ ಸಚಿವ ನಿಸಾರ್ ಅಹಮದ್, ತಾಜ್ ಬಾಬಾ ಸಂಸ್ಥೆಯ ಸಿರಾಜ್ ಬಾಬಾ, ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ನಗರಸಭೆ ಸದಸ್ಯರಾದ ಅಂಬರೀಷ್, ಅಫ್ಸರ್, ತಾಲೂಕು ಆರೋಗ್ಯ ಅಧಿಕಾರಿ ನಾರಾಯಣಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ