ಜನತಾ ನ್ಯಾಯಾಲಯದ ಸದುಪಯೋಗ ಪಡೆಯಿರಿ: ಶಿವಾಜಿ ನಲವಡೆ

KannadaprabhaNewsNetwork |  
Published : Mar 19, 2024, 12:51 AM IST
ರಾಷ್ಟ್ರೀಯ ಲೋಕ ಅದಾಲತ | Kannada Prabha

ಸಾರಾಂಶ

ವಿಜಯಪುರದಲ್ಲಿ ಈಚೆಗೆ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ, ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಹಲವಾರು ಪ್ರಕರಣಗಳ ಪೈಕಿ ಒಟ್ಟು 11,557 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಿ ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಕರೆ ನೀಡಿದರು.

ರಾಷ್ಟ್ರೀಯ ಲೋಕ ಅದಾಲತ್‌ ನಡೆಸಿ ಮಾತನಾಡಿ, ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಹಲವಾರು ಪ್ರಕರಣಗಳ ಪೈಕಿ ಒಟ್ಟು 11,557 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಅವುಗಳಲ್ಲಿ ಆಸ್ತಿ ಇಬ್ಭಾಗ ಕೋರಿದ 169 ದಾವೆಗಳು, 227 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 125 ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ 63 ಪ್ರಕರಣಗಳು, ರಾಜೀಯಾಗಬಹುದಾದ 78 ಕ್ರಿಮಿನಲ್ ಪ್ರಕರಣಗಳು ಹಾಗೂ 518 ಅಮಲ್ಜಾರಿ ಪ್ರಕರಣಗಳು ಸೇರಿವೆ ಎಂದು ಮಾಹಿತಿ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಸ್. ಕುಂದರ್ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸಾರ್ವಜನಿಕರು ಶೀಘ್ರ ನ್ಯಾಯ ಪಡೆದು ಪರಸ್ಪರ ಸೌರ್ಹಾದತೆಯಿಂದ ಸಮಾಜದಲ್ಲಿ ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ನ್ಯಾಯಾಧೀಶ ರಾಮಾ ನಾಯಕ್, ಸುಭಾಸ ಸಂಕದ, ಸತೀಶ್ ಎಲ್.ಪಿ, ಮಂಜುನಾಥ ಸಂಗ್ರೇಶಿ, ಮದ್ವೇಶ ದಬೇರ್, ಸುಭಾಷ ಬಂದು ಹೊಸಕಲ್ಲೆ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಎಂ. ಜಿಪರೆ, ಪದ್ಮಶ್ರೀ ಎ.ಮುನ್ನೋಳಿ, ಮಲ್ಲಿಕಾರ್ಜುನ ಎ.ಅಂಬಲಿ, ಕೆ. ಉಮಾ, ಲೋಕೇಶ ಹವಳೆ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಯಮಕನಮರಡಿ, ಸ್ಮಿತಾ ಎಂ. ಮಾಲಗಾಂವೆ, ಚಂದ್ರಕಾಂತ, ಮಾದೇಶ ಎಂ.ವಿ, ಚಾಂದನಿ ಜಿ.ಯು ಹಾಗೂ ಸಂಧಾನಕಾರ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ, ಡಿ.ಬಿ.ಮಠದ, ಆರ್.ಎಸ್. ಯಳಸಂಗಿಮಠ, ವಿ.ಜಿ. ಕುಲಕರ್ಣಿ, ಜೆ.ವಿ. ಖುದಾನಪುರ, ಜಾವೀದ್ ಗುಡಗುಂಟಿ, ದೀಪಾ ಬಿರಾದಾರ, ಅಶೋಕ.ಎಚ್.ಜೈನಾಪೂರ, ಜಯಶ್ರೀ ಮಠಪತಿ, ಬಿ.ಎಂ.ಅವತಾಡೆ, ಆರ್.ಕೆ ಪಾಟೀಲ್, ಜೆ.ಎಂ. ಭೂಸಗೊಂಡ, ರಾಹುಲ್ ನಾಯಕ್, ಎಸ್.ಎಸ್. ಇನಾಮದಾರ, ಬಸವರಾಜ ಎಂ.ಎಂ, ಬಿ.ಕೆ.ಮಠ, ಯಲ್ಲಪ್ಪ ಬಡಿಗೇರ, ಎಂ.ಸಿ. ಲೋಗಾವಿ ಅವರು ಸಂಧಾನಕಾರ ವಕೀಲರಾಗಿ ಪ್ರಕರಣದ ರಾಜೀ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್‌ಗಾಗಿ ಆಟೋ ಚಾಲಕರ ಯುದ್ಧ! - ಬಂಕ್‌ಗಳ ಮುಂದೆ ರಾತ್ರಿ ಇಡೀ ಜಾಗರಣೆ
ಆಟೋ ಗ್ಯಾಸ್‌ಗೆ ರಾತ್ರಿಯಿಡೀ ಜಾಗರಣೆ