ವೈದ್ಯಕೀಯ ಶಿಬಿರದ ಸದುಪಯೋಗ ಪಡಿಸಿಕೊಳ್ಳಿ: ನಾಗರಾಜ ಛಬ್ಬಿ

KannadaprabhaNewsNetwork |  
Published : Feb 08, 2024, 01:33 AM IST
ಛಬ್ಬಿ | Kannada Prabha

ಸಾರಾಂಶ

ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದಲ್ಲಿ, ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ಕಲಘಟಗಿ: ಗ್ರಾಮೀಣ ಜನರ ಹಾಗೂ ಬಡವರ ಆರೋಗ್ಯದ ದೃಷ್ಟಿಯಿಂದ ಸಂಸದ ಪ್ರಹ್ಲಾದ ಜೋಶಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಆಯೋಜಿದ್ದಾರೆ. ತಾವೆಲ್ಲರೂ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ವಿಪ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.

ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದಲ್ಲಿ, ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಲಾದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶಿಬಿರದಲ್ಲಿ ಹೃದಯ ಕಾಯಿಲೆ, ಕಣ್ಣಿನ ತಪಾಸಣೆ, ಸ್ತ್ರೀ ರೋಗ, ಎಲುಬು ಮತ್ತು ಕೀಲು, ಚಿಕ್ಕ ಮಕ್ಕಳ ತಜ್ಞರು ಸೇರಿದಂತೆ ವಿಶೇಷ ತಜ್ಞರಿದ್ದು ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಶಿಬಿರದಲ್ಲಿ ಡಾ. ಅಮಿತ್ ಸತ್ತೂರ, ಡಾ. ಶ್ರೀನಿವಾಸ ಜೋಶಿ, ಡಾ. ಮೂಲ್ಕಿ ಪಾಟೀಲ, ಡಾ. ಆನಂದ ವರ್ಮಾ, ಆಯುಶ್ ವಿಭಾಗದ ಡಾ. ರವೀಂದ್ರ ಸೇರಿದಂತೆ ಪ್ರಖ್ಯಾತ ವೈದ್ಯರು ತಪಾಸಣೆ ನಡೆಸಿದರು. ಎಂ.ಎಂ. ಜೋಶಿ ಆಸ್ಪತ್ರೆ ತಂಡ ಕಣ್ಣು ಪರೀಕ್ಷೆ, ಡಾ. ಜೀವಣ್ಣವರ ಆಸ್ಪತ್ರೆ ತಂಡ, ಹೃದಯರೋಗ, ಶುಗರ್ ಮತ್ತು ಬಿಪಿ ಸೇರಿದಂತೆ ವಿವಿಧ ಪರೀಕ್ಷೆ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವರಗೇರಿ ಗ್ರಾಪಂ ಅಧ್ಯಕ್ಷೆ ಅನಸವ್ವ ಕಾಮಧೇನು ವಹಿಸಿದ್ದದರು. ಸಾನಿಧ್ಯವನ್ನು ತಾವರಗೇರಿ ಸಿದ್ದಾರೂಡಮಠದ ನಿರ್ಗುಣಾನಂದ ಸ್ವಾಮಿಗಳು ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹೊನ್ನಿಹಳ್ಳಿ, ಗುರುನಾಥಗೌಡ್ರ ಬಸನಗೌಡ್ರ, ಮೌನೇಶ ರಾ. ಬಡಿಗೇರ, ಗ್ರಾ ಪಂ ಉಪಾಧ್ಯಕ್ಷ ಮಮತಾ ತಿಪ್ಪಣ್ಣವರ, ಭಾರತಿ ಕ. ಪುಟ್ಟಪ್ಪನವರ,

ಚನ್ನಬಸಪ್ಪ ತಿಪ್ಪಣ್ಣವರ, ಶೇಖಪ್ಪ ದ್ಯಾವಪ್ಪನವರ, ಶರಣಪ್ಪ ಮಡಿವಾಳರ, ಕಲ್ಲಪ್ಪ ಪುಟ್ಟಪ್ಪನವರ, ಬಸವರಾಜ ಹೊನ್ನಿಹಳ್ಳಿ, ಕಿರಣ ಪಾಟೀಲಕುಲಕರ್ಣಿ, ಮದನ ಕುಲಕರ್ಣಿ, ಸೇರಿದಂತೆ ತಾವರಗೇರಿ ಗ್ರಾಪಂ ಸದಸ್ಯರು, ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ತಾವರಗೇರಿ, ಬಮ್ಮಿಗಟ್ಟಿ, ಮುಕ್ಕಲ್ಲ, ಬೆಲವಂತರ, ಬೀರವಳ್ಳಿ, ಜಿನ್ನೂರ ಗ್ರಾಮಸ್ಥರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!