೪೦ ಪ್ಲಸ್ ಮಿಷನ್ ಕಾರ್ಯಕ್ರಮ ಬಳಸಿಕೊಳ್ಳಿ: ಎಸ್.ಡಿ. ಮುಡೆಣ್ಣವರ

KannadaprabhaNewsNetwork |  
Published : Feb 11, 2026, 02:45 AM IST
ಎಸ್.ಎಸ್.ಎಲ್.ಸಿ. ಫಲಿತಾಂಶದ ಅಭಿವೃದ್ಧಿಗಾಗಿ ತಾಲೂಕಿನ ೨೦ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮುಂಡಗೋಡ ಪಟ್ಟಣದಲ್ಲಿ ಪ್ರೇರಣಾ ಶಿಬಿರ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಶಿಕ್ಷಣ ಇಲಾಖೆ ಆರು ವಿಷಯಗಳ ಕುರಿತು ತಯಾರಿಸಿದ ನೀಲ ನಕ್ಷೆಯಂತೆ ಅಭ್ಯಾಸ ಮಾಡಿ ೪೦ ಪ್ಲಸ್ ಮಿಷನ್ ಎನ್ನುವ ವಿಶಿಷ್ಟವಾದ ಕಾರ್ಯಕ್ರಮವನ್ನು ಬಳಸಿಕೊಂಡರೆ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ.

ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ

ಕನ್ನಡಪ್ರಭ ವಾರ್ತೆ ಮುಂಡಗೋಡ

ಶಿಕ್ಷಣ ಇಲಾಖೆ ಆರು ವಿಷಯಗಳ ಕುರಿತು ತಯಾರಿಸಿದ ನೀಲ ನಕ್ಷೆಯಂತೆ ಅಭ್ಯಾಸ ಮಾಡಿ ೪೦ ಪ್ಲಸ್ ಮಿಷನ್ ಎನ್ನುವ ವಿಶಿಷ್ಟವಾದ ಕಾರ್ಯಕ್ರಮವನ್ನು ಬಳಸಿಕೊಂಡರೆ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣವರ ಹೇಳಿದರು.

ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಅಭಿವೃದ್ಧಿಗಾಗಿ ಮುಂಡಗೋಡ ತಾಲೂಕಿನ ೨೦ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎಲ್.ಬಿ.ಎ ಆಧಾರಿತ ಪ್ರಶೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಬರಲು ಸಾಧ್ಯ. ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಶಾಲೆ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸಬೇಕು. ಉಳಿದ ೩೬ ದಿನಗಳಲ್ಲಿ ದಿನಕ್ಕೆ ಒಂದು ಅಂಕದ ಪ್ರಶ್ನೆಗಳನ್ನು ಓದಿಕೊಂಡರೆ ೪೦ ಅಂಕಗಳನ್ನು ಪಡೆಯುವುದು ಬಹಳ ಸರಳವಾಗುತ್ತದೆ. ಶಾಲೆಯಲ್ಲಿ ಹೇಳಿದಂತೆ ಅಭ್ಯಾಸ ಮಾಡಿದರೆ ಹೆಚ್ಚು ಫಲಿತಾಂಶ ಬರುತ್ತದೆ ಆ ನಿಟ್ಟಿನಲ್ಲಿ ಓದಿ ಉತ್ತಮ ಫಲಿತಾಂಶ ಗಳಿಸುವಂತೆ ಮಕ್ಕಳಿಗೆ ಕರೆ ನೀಡಿದರು.

ತಾಲೂಕಾ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ನಾಗರಾಜ ನಾಯ್ಕ, ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರಾಂಶುಪಾಲ ಪರಶುರಾಮ ಕೇಶಪ್ಪನಟ್ಟಿ ಮಾತನಾಡಿದರು.

ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎನ್. ಕುಲಕರ್ಣಿ, ಮತ್ತು ಕನ್ನಡ ವಿಷಯದ ಸಂಪನ್ಮೂಲ ಶಿಕ್ಷಕರಾದ ವಾಸುದೇವ ಮಡ್ಲಿ ಮುಂತಾದವರಿದ್ದರು.

ರಮೇಶ ಪವಾರ ನಿರೂಪಿಸಿದರು. ಬಿ.ಕೆ. ಬಡಗೇರ ಸ್ವಾಗತಿಸಿದರು. ಸುನೀಲ್ ಲಮಾಣಿ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ಡಾ. ಅನ್ನದಾನಿ ಮೇಟಿ
ಮುರ್ಕವಾಡ ಗ್ರಾಮದೇವಿ ಜಾತ್ರೆ: ವೈಭವದ ಹೊನ್ನಾಟ ಸಂಪನ್ನ