ದೇವನಹಳ್ಳಿ: ಗ್ರಾಮೀಣ ಭಾಗದ ಜನಸಾಮಾನ್ಯರು ಯಾವುದೇ ರೋಗಗಳನ್ನು ನಿರ್ಲಕ್ಷ್ಯ ಮಾಡದೆ ಉಲ್ಭಣಗೊಳ್ಳುವ ಮುನ್ನವೇ ಸೂಕ್ತ ಚಿಕಿತ್ಸೆ ಪಡಿಸಿಕೊಂಡರೆ ಗುಣಮುಖರಾಗಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಸಂಚಾರ ಚಿಕಿತ್ಸೆ ವಾಹನ ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸಂಚರಿಸಲಿದ್ದು ಎರಡು ದಿನ ಮೊದಲೇ ಪಂಚಾಯಿತಿಗಳ ಪಿಡಿಒಗಳು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕೆಂದು ಸಚಿವರು ತಿಳಿಸಿದರು.
ಸಂಚಾರ ಚಿಕಿತ್ಸಾ ವಾಹನದಲ್ಲಿ ತಜ್ಞ ವೈದ್ಯರಿಂದ ರೋಗಿಯ ತಪಾಸಣೆ ಘಟಕ, ರೋಗ ನಿರ್ಣಯ ಸೇವೆಗಳಾದ ಎಕೋ, ಎಕ್ಸರೇ, ಅಲ್ಟ್ರಾ ಸೌಂಡ್, ಮ್ಯಾಮೋ ಗ್ರಾಮ್ ವಿಭಾಗಗಳಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್, ತಹಸೀಲ್ದಾರ್ ಶಿವರಾಜ್, ಡಿಎಚ್‌ಒ ಡಾ.ಕೃಷ್ಣಮೂರ್ತಿ, ಟಿ ಹೆಚ್‌ಒ ಡಾ. ಸಂಜಯ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ , ಬಯಪ ಅಧ್ಯಕ್ಷ ಶಾಂತಕುಮಾರ್, ಸದಸ್ಯರಾದ ಪ್ರಸನ್ನಕುಮಾರ್, ಕೆ.ಸಿ.ಮಂಜುನಾಥ್ ಅಲ್ಲದೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಸಚಿವ ಕೆ.ಹೆಚ್.ಮುನಿಯಪಪ್ ಚಾಲನೆ ನೀಡಿದರು.