ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನಗರಸಭೆ ಸಭಾಭವನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಗರಸಭೆ ಸಾಮಾನ್ಯ ನಿಧಿ ಹಾಗೂ ರಾಜ್ಯ ಹಣಕಾಸು ಯೋಜನೆಯಡಿ ೯೭ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿ,
ಹೊಲಿಗೆ ಯಂತ್ರ ಬದಲಿಗೆ ಮುಂದಿನ ದಿನಗಳಲ್ಲಿ ಈ ಭಾಗದ ಮುಖ್ಯ ಕಸಬಾದ ನೇಕಾರರಿಗೆ ಸಂಬಂಧಿಸಿದ ಸಾಮಗ್ರಿಗಳ ಅವಶ್ಯತೆಯಿದೆ. ಮಹಿಳೆಯರು ತಮ್ಮ ಬೇಡಿಕೆ ಸಲ್ಲಿಸಿದಲ್ಲಿ ನಗರಸಭೆಯಿಂದ ಒದಗಿಸುವುದಾಗಿ ಭರವಸೆ ನೀಡಿದರು.ಕಳೆದೆರಡು ವರ್ಷಗಳಿಂದ ಒಂದೂ ಮನೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ತೇರದಾಳ ಕ್ಷೇತ್ರದ ಜನತೆಗೆ ಮನೆಗಳ ಅವಶ್ಯವಿದೆ. ಇದರ ಬಗ್ಗೆ ಬಜೆಟ್ ಕಲಾಪದಲ್ಲಿ ಸರ್ಕಾರಕ್ಕೆ ಒತ್ತಡ ಹೇರುತ್ತೇನೆ ಎಂದು ಹೇಳಿದರು.
ನಗರಾಧ್ಯಕ್ಷೆ ವಿದ್ಯಾ ದಭಾಡಿ ಮಾತನಾಡಿ, ಪೌರ ಕಾರ್ಮಿಕರ ವೇತನ ನಗರಸಭೆಯಿಂದಲೇ ನೀಡಲಾಗುತ್ತಿದೆ. ಇದರಿಂದ ಆಡಳಿತಾತ್ಮಕ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಹೆಚ್ಚಿನ ಅನುದಾನ ಇಲ್ಲವೆ ಪೌರ ಕಾರ್ಮಿಕರಿಗೆ ನೇರ ವೇತನ ಒದಗಿಸಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಸುಮಾರು ೫೦ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಕಸ ನಿರ್ವಹಣೆಗೆ ಬೇಕಾಗುವ ಸಾಮಗ್ರಿ ವಿತರಿಸಲಾಯಿತು.
ನಗರಸಭಾಧ್ಯಕ್ಷೆ ವಿದ್ಯಾ ದಭಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಸ್ಥಾಯಿ ಸಮಿತಿ ಚೇರಮನ್ ಅರುಣ ಬುದ್ನಿ, ಪೌರಾಯುಕ್ತ ಜಗದೀಶ ಈಟಿ ಸೇರಿದಂತೆ ನಗರಸಭಾ ಸದಸ್ಯರು ಹಾಗು ಫಲಾನುಭವಿಗಳು ಉಪಸ್ಥಿತರಿದ್ದರು.