- ಶಾಲಾ ಕಾಲೇಜುಗಳಲ್ಲಿ ಸಂಚಾರ ಜಾಗೃತಿ ಕಾರ್ಯಕ್ರಮಕ್ಕೆ ಚಿಂತನೆ
ದಾವಣಗೆರೆ: ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳ ಚಲಾಯಿಸಲು ಅವಕಾಶ ನೀಡಬೇಡಿ ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಪ್ರತಿ ಮನೆಗಳಲ್ಲಿ ಎರಡು, ಮೂರು ವಾಹನಗಳಿರುತ್ತವೆ. ಅಪ್ರಾಪ್ತ ವಯಸ್ಸಿನ ಮಕ್ಕಳು ನೆಪ ಹೇಳಿ ವಾಹನ ತೆಗೆದುಕೊಂಡು ರಸ್ತೆಗೆ ಬರುವುದು ಸರ್ವೆ ಸಾಮಾನ್ಯ ಆಗುತ್ತಿದೆ. ಪೋಷಕರೂ ಅಪ್ರಾಪ್ತ ಮಕ್ಕಳಿಗೆ ಯಾವುದೇ ರೀತಿಯ ವಾಹನಗಳ ಚಾಲನೆಗೆ ಪ್ರೋತ್ಸಾಹಿಸಬಾರದು ಎಂದರು.ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸಂಚಾರ ನಿಯಮ ಕುರಿತು ಅರಿವು ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರೊಂದಿಗೆ ಸಮಾಲೋಚಿಸಿ ಕ್ರಮ ಜರುಗಿಸಲಾಗುವುದು ಎಂದರು.
ವಾಹನಗಳನ್ನು ಚಾಲನೆ ಮಾಡುವಾಗ ಮೊಬೈಲ್ ಬಳಸುವುದನ್ನು ಅಥವಾ ಮಾತನಾಡದೇ ವಾಹನ ರಸ್ತೆ ಬದಿ ನಿಲ್ಲಿಸಿ ಮಾತನಾಡಬೇಕು. ರಸ್ತೆಗಳಲ್ಲಿ ಸೂಚಿಸಲಾದ ವೇಗಮಿತಿಯನ್ನು ಮಾತ್ರ ಕಾಯ್ದುಕೊಂಡು ಟ್ರಾಫಿಕ್ ದೀಪಗಳು ಮತ್ತು ರಸ್ತೆ ಗುರುತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಮನವಿ ಮಾಡಿದರು.
- - -