ವಿಕಲಚೇತನರ ಆರೋಗ್ಯ ಬಗ್ಗೆ ಕಾಳಜಿ ವಹಿಸಿ

KannadaprabhaNewsNetwork |  
Published : Nov 02, 2026, 03:45 AM IST
ಹೂವಿನಹಡಗಲಿಯಲ್ಲಿ ವಿಕಲಚೇತನರಿಗೆ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಆಯೋಜಿಸಲಾಗಿತ್ತು.  | Kannada Prabha

ಸಾರಾಂಶ

ಪ್ರತಿ ವರ್ಷ ಇದೇ ತರಹ ಶಿಬಿರ ಸ್ಥಳೀಯವಾಗಿ ವಿಕಲಚೇತನರಿಗೆ ಅನುಕೂಲವಾಗುವಂತೆ ಏರ್ಪಡಿಸಲಾಗುತ್ತದೆ.

ಹೂವಿನಹಡಗಲಿ: ಶಾಲೆಗಳಲ್ಲಿ ಓದುತ್ತಿರುವ ವಿಶೇಷ ಅಗತ್ಯತೆಯಳ್ಳ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯಿಂದ ಸೊಪ್ಪಿನ ವೀರಮ್ಮ ಸಹಿಪ್ರಾ ಶಾಲೆಯಲ್ಲಿ ತಾಲೂಕಿನ 1 ರಿಂದ 12ನೇ‌ ತರಗತಿಗಳಲ್ಲಿ, ವಿದ್ಯಾಭ್ಯಾಸ ಮಾಡುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗಾಗಿ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಇದೇ ತರಹ ಶಿಬಿರ ಸ್ಥಳೀಯವಾಗಿ ವಿಕಲಚೇತನರಿಗೆ ಅನುಕೂಲವಾಗುವಂತೆ ಏರ್ಪಡಿಸಲಾಗುತ್ತದೆ. ಇದರ ಸಂಪೂರ್ಣ ಸದುಪಯೋಗಪಡಿಸಿಕೊಂಡು ಅವಶ್ಯಕ ಸಾಧನ ಸಲಕರಣೆ ಪಡೆಯಲು ಪೋಷಕರಿಗೆ ಸೂಚಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ ಮಾತನಾಡಿ, ಬೇರೆ ರಾಜ್ಯಗಳಿಂದ ಅಲಿಂಕೋ ಸಂಸ್ಥೆಯ ಸಿಬ್ಬಂದಿ ನಮ್ಮ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಇಂತಹ ಶಿಬಿರ ಏರ್ಪಡಿಸುವುದರಿಂದ ಬಡವ-ಮಧ್ಯಮ ವರ್ಗದ ಉತ್ತಮ ಗುಣಮಟ್ಟದ ಸಾಧನ ವಿತರಿಸಲಾಗುತ್ತಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಬಸವರಾಜ, ಹೊನ್ನಪ್ಪಗೌಡರ, ಬಿಐಇಆರ್‌ಟಿ ಸರ್ವೇಶ್, ಯಲ್ಲಮ್ಮ, ಕೊಟ್ರಮ್ಮ, ಎಂ.ಆರ್.ಡಬ್ಲ್ಯೂ ಮಂಜುನಾಥ ಬಿ, ವಿ.ಆರ್.ಡಬ್ಲ್ಯೂ.ಶಿವರಾಜ್, ಹಾಲೇಶ್, ಪಾಂಡು ನಾಯ್ಕ, ಚಂದ್ರಪ್ಪ, ಮಂಗಳಾ, ಕಚೇರಿ ಸಿಬ್ಬಂದಿ ಮೃತ್ಯುಂಜಯ, ಸಮೀರ್ ಗುತ್ತಿ, ಮಧುಸೂದನ್ ಮತ್ತಿತರರು ಹಾಜರಿದ್ದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಾ. ಸಂದೀಪ, ಡಾ. ಮಂಜುಳಾ, ಡಾ. ರೇಖಾ, ಡಾ.ಕೀರ್ತಿ ತಪಾಸಣೆ ಮಾಡಿ ಅರ್ಹರಿಗೆ ಸಾಧನ ಸಲಕರಣೆಗಳ ಶಿಫಾರಸು ಮಾಡಿದರು. ಅಲಿಂಕೋ ಸಂಸ್ಥೆಯ ತಂತ್ರಜ್ಞ ರವಿಕುಮಾರ್ ಮಾತನಾಡಿ, ಅರ್ಹರಿಗೆ ಅವಶ್ಯಕ ಸಾಧನ ಆಯ್ಕೆ ಮಾಡಿ ಗಣಕೀರಣ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ವಿಶೇಷ ಅಗತ್ಯತೆಯಳ್ಳ ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡದಲ್ಲಿ ಸಚಿವರ ಕಾರಿಗೆ ಡೀಸಿ ಡ್ರೈವರ್‌ !
ಮೊದಲ ಸ್ವದೇಶಿ ಬುಲೆಟ್‌ ರೈಲಿನ ನಿರ್ಮಾಣ ಬೆಂಗಳೂರಲ್ಲಿ ಆರಂಭ