ಕಾರ್ಮಿಕರ ಆರೋಗ್ಯದ ಕಾಳಜಿ ಇರಲಿ: ಡಾ. ಎನ್.ಟಿ. ಶ್ರೀನಿವಾಸ್

KannadaprabhaNewsNetwork |  
Published : Jun 09, 2025, 12:24 AM IST
ಕೂಡ್ಲಿಗಿ ತಾಲೂಕು ಹೊಸಹಳ್ಳಿ ಸಮೀಪದ ಬೆಳಗಟ್ಟೆ ಗ್ರಾಪಂ ವ್ಯಾಪ್ತಿಯ ಹುಲಿಕುಂಟೆ ಗ್ರಾಮದ ಅರಣ್ಯದಲ್ಲಿನ ಗೋಕಟ್ಟೆಯಲ್ಲಿನ ಹೂಳು ಏತ್ತುವ ಕಾಮಗಾರಿ ಸ್ಥಳಕ್ಕೆ ಕೂಡ್ಲಿಗಿ  ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೇಟಿ ನೀಡಿದರು. ಈ ವೇಳೆ ತಾಪಂ ಇಒ ನರಸಪ್ಪ, ಅಧ್ಯಕ್ಷೆ ಸಣ್ಣೋಬಮ್ಮ ಓಬಯ್ಯ, ಪಿಡಿಒ ಹನುಮಂತಪ್ಪ, ಕಾರ್ಯದರ್ಶಿ ನಾಗರಾಜ ಇದ್ದರು. | Kannada Prabha

ಸಾರಾಂಶ

ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಅವರ ಆರೋಗ್ಯ ಸುರಕ್ಷತೆಯ ಕಾಳಿಜಿ ವಹಿಸುವುದು ಅಧಿಕಾರಿಗಳ ಕರ್ತವ್ಯ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಸೂಕ್ತ ಕೆಲಸ ಮತ್ತು ಸಕಾಲಕ್ಕೆ ಕೂಲಿ ಹಣ ನೀಡುವುದಷ್ಟೇ ಅಧಿಕಾರಿಗಳ ಕೆಲಸವಲ್ಲ. ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು ಮತ್ತು ಅವರ ಆರೋಗ್ಯ ಸುರಕ್ಷತೆಯ ಕಾಳಿಜಿ ವಹಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹಿರಿಯ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಹೊಸಹಳ್ಳಿ ಸಮೀಪದ ಬೆಳಗಟ್ಟೆ ಗ್ರಾಪಂ ವ್ಯಾಪ್ತಿಯ ಹುಲಿಕುಂಟೆ ಗ್ರಾಮದ ಅರಣ್ಯದಲ್ಲಿನ ಗೋಕಟ್ಟೆಯಲ್ಲಿನ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದರು.

ಉದ್ಯೋಗ ಖಾತ್ರಿ ಯೋಜನೆಯು ದೇಶದ ಕಾರ್ಮಿಕರ ಪಾಲಿಗೆ ಮಹತ್ವದ ಯೋಜನೆಯಾಗಿದ್ದು, ಇಲ್ಲಿ ಕೆಲಸ ಮಾಡುವ ಗ್ರಾಮೀಣ ಜನರಿಗೆ ರೈತರಿಗೆ, ಕಾರ್ಮಿಕರಿಗೆ ವರದಾನವಾಗಿದೆ. ಅಲ್ಲದೆ, ಆರ್ಥಿಕ ವರ್ಷದಲ್ಲಿ 100 ದಿನಗಳ ವರೆಗೆ ಮಾನವ ದಿನಗಳನ್ನು ಹೆಚ್ಚಳ ಮಾಡಿದ್ದು ಜತೆಗೆ ಕೂಲಿ ಹಣ ಹೆಚ್ಚು ಮಾಡಿದೆ. ಖಾತ್ರಿ ಯೋಜನೆ ಸಮರ್ಪಕವಾಗಿ ಬಳಸಿಕೊಂಡು ಮಕ್ಕಳ ವಿಧ್ಯಾಬ್ಯಾಸಕ್ಕೆ ಮತ್ತು ದೈನಂದಿನ ಜೀವನಕ್ಕೆ ಸಹಕಾರಿಯಾಗುವಂತೆ ಬಳಸಿಕೊಳ್ಳಬೇಕು ಅಲ್ಲದೆ, ಬಿಸಲಿನ ತಾಪ ಹೆಚ್ಚಾಗಿರುವುದರಿಂದ ಸರ್ಕಾರವು ಕಾರ್ಮಿಕರ ಆರೋಗ್ಯ ಕಾಳಜಿ ವಹಿಸಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪಿಡಿಒಗಳು ಸ್ಥಳೀಯ ಆರೋಗ್ಯ ಸಿಬ್ಬಂದಿಯ ಸಹಕಾರದೊಂದಿಗೆ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಬೇಕು, ಆರೋಗ್ಯ ತಪಾಸಣೆಯ ಮಾಡಿಸಿರುವ ಬಗ್ಗೆ ಸೂಕ್ತ ವರದಿ ಸಲ್ಲಿಸಬೇಕೆಂದು ತಿಳಿಸಿದರು. ನಂತರ ಎಲ್ಲಾ ಕಾರ್ಮಿಕರಿಗೆ ಬೆಳಗಟ್ಟೆ ಆರೋಗ್ಯ ಕೇಂದ್ರ ಸಿಬ್ಬಂದಿಗಳಿಂದ ಆರೋಗ್ಯ ತಪಾಸಣೆ ಮಾಡಲಾಯಿತು.

ಈ ಸಂದರ್ಭ ಕೂಡ್ಲಿಗಿ ತಾಪಂ ಇಒ ನರಸಪ್ಪ, ಬೆಳ್ಳಗಟ್ಟೆ ಗ್ರಾಪಂ ಅಧ್ಯಕ್ಷೆ ಸಣ್ಣೋಬಮ್ಮ ಓಬಯ್ಯ, ತಾಪಂ ಮಾಜಿ ಸದಸ್ಯ ಎನ್.ಪಿ. ಮಂಜುನಾಥ, ಪಿಡಿಒ ಹನುಮಂತಪ್ಪ, ಕಾರ್ಯದರ್ಶಿ ನಾಗರಾಜ, ಜೆಇ ಬಸವರಾಜಸ್ವಾಮಿ, ವೀರೇಶ್, ಬೆಳಗಟ್ಟೆ ಆರೋಗ್ಯ ಕೇಂದ್ರದ ಸಿಬ್ಬಂದಿ, ಡಿಇಒ ನರಸಿಂಹ, ನಾಗರಾಜ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ