ಮನೆಗಳ ಮುಂಭಾಗ ಕಾಡಾನೆ ಉಪಟಳ

KannadaprabhaNewsNetwork |  
Published : Jun 09, 2025, 12:20 AM IST
ಮನೆಗಳ ಮುಂಭಾಗ ಕಾಡಾನೆ ಉಪಟಳ  | Kannada Prabha

ಸಾರಾಂಶ

ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಮಲೆ ಮಹದೇಶ್ವರ ಬೆಟ್ಟದ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಒಂಟಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಇಲ್ಲಿನ ನಿವಾಸಿಗಳು ಭಯ ಭೀತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಮಲೆ ಮಹದೇಶ್ವರ ಬೆಟ್ಟದ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಎನ್ನದೆ ಒಂಟಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಇಲ್ಲಿನ ನಿವಾಸಿಗಳು ಭಯ ಭೀತರಾಗಿದ್ದಾರೆ.

ಹಲಸಿನ ಮರಗಳಿಗೆ ಹಾನಿ:

ಮಲೆಮಾದೇಶ್ವರ ವನ್ಯಜೀವಿ ಅರಣ್ಯ ಪ್ರದೇಶದಿಂದ ದಿನನಿತ್ಯ ಒಂಟಿ ಕಾಡಾನೆ ಕೀರನ ಹೋಲ ಗ್ರಾಮದ ಮಾದ ತಂಬಡಿ ಅವರಿಗೆ ಸೇರಿದ ಮನೆಯ ಸಮೀಪದಲ್ಲಿರುವ ಹಲಸಿನ ಮರಗಳನ್ನು ದಿನನಿತ್ಯ ತಿಂದು ಹಾನಿ ಉಂಟು ಮಾಡುತ್ತಿದೆ. ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ ಎಂದು ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಯ ಭೀತರಾದ ಗ್ರಾಮಸ್ಥರು:

ದಿನನಿತ್ಯ ಈ ಭಾಗದಲ್ಲಿರುವ ಹಲಸಿನ ಹಣ್ಣಿನ ಮರಗಳನ್ನು ಹುಡುಕಿಕೊಂಡು ಬರುತ್ತಿರುವ ಗಜರಾಜನ ಉಪಟಳದಿಂದ ಬೆಳೆ ಹಾನಿ ಜೊತೆಗೆ ಗ್ರಾಮದ ನಿವಾಸಿಗಳು ಸಹ ಭಯದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಕಾಡಾನೆ ಉಪಟಳ ತಪ್ಪಿಸುವಂತೆ ಹಲವು ಬಾರಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದೆ ಇರುವುದರಿಂದ ಮುಂದೆ ಜೀವ ಹಾನಿ ಅನಾಹುತ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ:

ಮಲೆಮಾದೇಶ್ವರ ಬೆಟ್ಟ ಸುತ್ತಲಿನ ಅರಣ್ಯದ ಹೆಚ್ಚಿನ ಗ್ರಾಮಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಹಲವು ದಿನಗಳಿಂದ ಆನೆ ಹೋಲ ಹಾಗೂ ಕೀರನ ಹೋಲ ವಿವಿಧ ಗ್ರಾಮಗಳ ಸುತ್ತಲಿನ ಅರಣ್ಯದಂಚಿನ ಗ್ರಾಮಗಳಲ್ಲಿ ಇರುವ ಹಲಸು ಹಾಗೂ ತೆಂಗಿನ ಗಿಡಗಳನ್ನು ತಿಂದು ಹಾಳು ಮಾಡುತ್ತಿದೆ. ಜೊತೆಗೆ ಹಗಲಿನಲ್ಲಿಯೇ ಕಾಡಾನೆ ಮನೆಯ ಮುಂಭಾಗವೇ ಬರುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಷ್ಟ ಉಂಟಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಡಾನೆ ಗ್ರಾಮಗಳತ್ತ ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮದ ಮಾದತಂಬಡಿ ನಿವಾಸಿಗಳು ಒತ್ತಾಯಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ