ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಅಪಘಾತ ಸಂತ್ರಸ್ತರಿಗೆ ಪಿಎಂ-ರಾಹತ್ (ಎನ್‌ಎಚ್‌ಎ) ಯೋಜನೆಯಡಿ ಚಿಕಿತ್ಸೆ ಹಾಗೂ ನೆರವು ದೊರೆಯುತ್ತಿರುವ ಕುರಿತು ಪರಿಶೀಲನೆ ಸಂಬಂಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಪಘಾತದಲ್ಲಿ ಗಾಯಗೊಂಡವರ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ದಾಖಲಾತಿ ಅಥವಾ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಗಾಯಾಳುವನ್ನು ಚಿಕಿತ್ಸೆಯಿಂದ ವಂಚಿಸಬಾರದು. ಅಗತ್ಯವಿದ್ದಲ್ಲಿ ದಾಖಲೆಗಳ ನಿರೀಕ್ಷೆಯಿಲ್ಲದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿಕೊಂಡು ತುರ್ತು ಚಿಕಿತ್ಸೆಯನ್ನು ಆರಂಭಿಸಬೇಕು ಎಂದರು.ಯೋಜನೆಯಡಿ ಅರ್ಹ ರಸ್ತೆ ಅಪಘಾತ ಸಂತ್ರಸ್ತರಿಗೆ ಉಚಿತ ನಗದು ರಹಿತ ಚಿಕಿತ್ಸೆ ಹಾಗೂ ತುರ್ತು ನಿಗಾ ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಪಘಾತದ ನಂತರದ ಅತ್ಯಂತ ನಿರ್ಣಾಯಕ ಅವಧಿಯಲ್ಲಿ ಗಾಯಾಳುಗಳಿಗೆ ತ್ವರಿತ ವೈದ್ಯಕೀಯ ನೆರವು ದೊರೆಯುವಂತೆ ಆಸ್ಪತ್ರೆಗಳು ಸಿದ್ಧವಾಗಿರಬೇಕು. ಖಾಸಗಿ ಆಸ್ಪತ್ರೆಗಳು ಪಿಎಂ-ರಾಹತ್ ಯೋಜನೆಯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯೋಜನೆಯಡಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ಅನಗತ್ಯ ವಿಳಂಬ, ಶುಲ್ಕದ ಬೇಡಿಕೆ ಅಥವಾ ಸಂತ್ರಸ್ತರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಯೋಜನೆಯಡಿ ನಿಗದಿಪಡಿಸಿರುವ ಚಿಕಿತ್ಸಾ ವಿಧಾನ, ದಾಖಲೆ ನಿರ್ವಹಣೆ ಹಾಗೂ ಆನ್‌ಲೈನ್‌ನಲ್ಲಿ ಅಗತ್ಯ ಮಾಹಿತಿಯ ನಮೂದನ್ನು ನಿಯಮಾನುಸಾರ ಕೈಗೊಳ್ಳಬೇಕು ಎಂದರು.
ರಸ್ತೆ ಅಪಘಾತ ಸಂತ್ರಸ್ತರ ಜೀವ ರಕ್ಷಣೆಯೇ ಮುಖ್ಯವಾಗಿದ್ದು, ಹಣ ಅಥವಾ ದಾಖಲೆಗಳ ಕೊರತೆಯಿಂದ ಚಿಕಿತ್ಸೆ ವಿಳಂಬವಾಗಬಾರದು. ಈ ಯೋಜನೆಯ ಸೌಲಭ್ಯ ಅರ್ಹರಿಗೆ ತ್ವರಿತವಾಗಿ ತಲುಪುವಂತೆ ಎಲ್ಲ ಸಂಬಂತ ಇಲಾಖೆಗಳು ಹಾಗೂ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.