ಕನ್ನಡಪ್ರಭ ವಾರ್ತೆ ದಾವಣಗೆರೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಒಳ ಪಂಗಡದ ಹೆಸರಿನಲ್ಲಿ ಹಂಚಿ ಹೋದ ಸಮುದಾಯವನ್ನು ಸರ್ಕಾರಕ್ಕಿಂತ ಮೊದಲೇ ಅಭಾವೀಮದಿಂದ ಆನ್‌ಲೈನ್ ಸಮೀಕ್ಷೆ ಕೈಗೊಂಡು, ವೀರಶೈವ ಲಿಂಗಾಯತರ ನಿಖಿರ ಜನಸಂಖ್ಯೆಯನ್ನು ಸರ್ಕಾರಕ್ಕೆ ಮಂಡಿಸಲಿ ಎಂದರು.
ಸ್ವಾರ್ಥವನ್ನು ಬದಿಗಿಟ್ಟು, ವೀರಶೈವ ಲಿಂಗಾಯತರು ಒಂದಾಗಿ, ಸಮಾಜ ಸಂಘಟನೆಗೆ ಮುಂದಾಗಬೇಕು. ವೀರಶೈವರ ಶತೃಗಳು ವೀರಶೈವರು. ಲಿಂಗಾಯತರ ಶತೃಗಳು ಲಿಂಗಾಯತರಾಗಿದ್ದಾರೆ. ಈ ಮೂಲಕ ಸಮುದಾಯದ ಅಧಃಪತನಕ್ಕೆ ವೀರಶೈವರು, ಲಿಂಗಾಯತರೇ ಕಾರಣ. ಮಹಾಸಭಾದಿಂದ ಸಮಾಜ ಒಗ್ಗೂಡಿಸಲು ದೀಪ ಹಚ್ಚುವ ಕೆಲಸ ಮಾಡಲಾಗಿದೆ. ಈ ದೀಪಗಳನ್ನು ಸಮಾಜದ ಕಟ್ಟಕಡೆಯ ಮನೆಗೂ ತಲುಪಿಸುವ ಕೆಲಸ ಮುಖಂಡರಿಂದ ಆಗಬೇಕು. ಶಾಮನೂರು ಶಿವಶಂಕರಪ್ಪ ಸಮಾಜದ ಆಧಾರ ಸ್ತಂಭವಾಗಿ ನಿಂತಿದ್ದಾರೆ. ಮೀಸಲಾತಿಗೆ ಭದ್ರ ಬುನಾದಿ ಹಾಕಿದ್ದೇ ಸಿರಿಗೆರೆ ಬೃಹನ್ಮಠದ ಶಿಷ್ಯರಾಗಿದ್ದ ಮೈಸೂರು ಬಸವಯ್ಯನವರು. ಮೈಸೂರು ಅರಸರ ಆಪ್ತ ಕುಟುಂಬವರಾಗಿದ್ದ ಬಸವಯ್ಯ ಸಲಹೆಯಂತೆ ಮಿಲ್ಲರ್ ಸಮಿತಿ ರಚಿಸಿ, ಮೀಸಲಾತಿಯನ್ನು ಜಾರಿಗೆ ತಂದವರು ಮೈಸೂರು ಮಹಾರಾಜರು. ಎಲ್ಲರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದ ಸಮಾಜ ನಮ್ಮದು ಎಂದು ಅವರು ತಿಳಿಸಿದರು.ಸಾನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಸಮಾಜದ ಮುಂದೆ ನಾನು ಸಣ್ಣವನೆಂದು ತೋರಿಸಿಕೊಟ್ಟ ಹಾನಗಲ್ ಕುಮಾರಸ್ವಾಮಿಗಳು. ನಮ್ಮವರೇ ಮಕ್ಕಳ ಮದುವೆ ಮಾಡಬೇಕು, ದೀಕ್ಷೆ ನೀಡುವಂತಾಗಬೇಕೆಂಬ ಸದುದ್ದೇಶದಿಂದ, ದೂರದೃಷ್ಟಿಯಿಂದ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಕಟ್ಟಿದರು. ಸಮಾಜದ ಬಗ್ಗೆ ಚಿಂತನೆ ಮಾಡಿದ್ದ ಹಾನಗಲ್ ಕುಮಾರ ಸ್ವಾಮಿಗಳ ಕನಸು ಕಂಡಂತೆ ಅದನ್ನು ಸಾಕಾರಗೊಳಿಸುವ ಕೆಲಸವನ್ನು ಅಭಾವೀಮ ಮಾಡುತ್ತಿದೆ ಎಂದರು.
ಲಿಂಗಾಯತ, ವೀರಶೈವ ಬೇರೆ ಬೇರೆಯೆಂದು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದಾಗ ಕಲ್ಲು ಬಂಡೆಯಂತೆ ಸಮಾಜದ ಪರವಾಗಿ ಗಟ್ಟಿಯಾಗಿ ನಿಂತವರು ಶಾಮನೂರು ಶಿವಶಂಕರಪ್ಪ. ಒಂದೊಮ್ಮೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪನಂತಹವರು ಅಧ್ಯಕ್ಷರಾಗದೇ ಇದ್ದರೆ ಸಮಾಜದ ಸ್ಥಿತಿ ಏನಾಗುತ್ತಿತ್ತೋ ಊಹಿಸುವುದೂ ಕಷ್ಟ ಸಾಧ್ಯಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಭಗವಂತ ಕೂಬಾ, ಪ್ರಧಾನ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ಎಸ್.ವೀರಣ್ಣ, ಎಸ್.ಎಸ್.ಗಣೇಶ, ಅಣಬೇರು ರಾಜಣ್ಣ, ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಬಿ.ಸಿ. ಉಮಾಪತಿ, ಸಚ್ಚಿದಾನಂದಮೂರ್ತಿ, ಶಾಸಕರಾದ ಡಿ.ಜಿ.ಶಾಂತನಗೌಡ, ಬಿ.ಪಿ.ಹರೀಶ, ಬಸವರಾಜ ವಿ.ಶಿವಗಂಗಾ, ಅಮರೇಗೌಡ ಬಯ್ಯಾಪುರ, ಭರತ್ ರೆಡ್ಡಿ, ಶರಣ ಬಸಪ್ಪ ಕುಂದಕೂರು, ಜಿ.ಎಸ್. ಪಾಟೀಲ್, ಸಿ.ಸಿ. ಪಾಟೀಲ್, ಅಲ್ಲಮಪ್ರಭು, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಡಾ.ಎ.ಎಚ್.ಶಿವಯೋಗಿಸ್ವಾಮಿ, ಎಸ್.ಎಸ್. ಪಾಟೀಲ್, ರಾಣಿ ಸತೀಶ, ನಿವೃತ್ತ ಡಿಜಿಪಿ ಶಂಕರ್ ಬಿದರಿ ಇತರರು ಇತರರು ಇದ್ದರು.............................
ಶ್ರೀ ವಚನಾನಂದ ಸ್ವಾಮೀಜಿ, ಹರಿಹರದ ಪಂಚಮಸಾಲಿ ಪೀಠ.