ಸೈಬರ್‌ ಅಪರಾಧ ತಡೆಯಲು ಮುನ್ನೆಚ್ಚರಿಕೆ ವಹಿಸಿ

KannadaprabhaNewsNetwork |  
Published : Feb 19, 2025, 12:48 AM IST
೧೮ಕೆಎಲ್‌ಆರ್-೯ಕೋಲಾರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಅಪರಿಚಿತ ಕರೆಗಳು ಸ್ವೀಕರಿಸಬೇಡಿ , ಸೇವ್ ಮಾಡಬೇಡಿ, ಮೇಸೇಜ್‌ಗಳಿಗೆ ರಿಪ್ಲೇ ಮಾಡಬೇಡಿ, ನಿಮ್ಮ ಪರಿಚಿತರ ಸಂಖ್ಯೆಗಳನ್ನು ಮಾತ್ರ ಸೇವ್ ಮಾಡಿ ಕರೆಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಳ್ಳಿ, ವಿಡಿಯೋ ಕಾಲ್ಸ್‌ಗಳ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ, ಏನಾದರೂ ಅನುಚಿತ ಕರೆಗಳು, ವಿಡಿಯೋಗಳು, ಬೆದರಿಕೆ, ಹೂಡಿಕೆಗೆ ಆಮಿಷಗಳನ್ನು ಒಡ್ಡುವುದು ಇತ್ಯಾದಿಗಳ ಕುರಿತು ಸಹಾಯವಾಣಿ ೧೯೩೦ ಸಂಖ್ಯೆಗೆ ಕರೆ ಮಾಡಿ

ಕನ್ನಡಪ್ರಭ ವಾರ್ತೆ ಕೋಲಾರಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಮೂಲಕ ಸಮಾಜದ ಮನೆ ಮನೆಗೂ ತಲುಪುವಂತಾಗುವ ದಿಸೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ತಿಳಿಸಿದರು.ನಗರದ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಅಪರಿಚಿತರಿಗೆ ಮೊಬೈಲ್‌ ನೀಡಬೇಡಿ

ಸಾರ್ವಜನಿಕರು ಇಂತಹ ಪ್ರಕರಣಗಳಿಂದ ಜಾಗೃತರಾಗಲು ಕಾರ್ಯಾಗಾರಗಳು ಅಂದೋಲದ ಮಾದರಿಯಲ್ಲಿ ಮನೆ, ಮನೆಗೂ ತಲುಪುವಂತಾಗಲು ಪೂರಕವಾಗಲಿದೆ. ಮೊಬೈಲ್ ಬಳಕೆ ಪ್ರಜ್ಞಾಪೂರ್ವಕವಾಗಿ ಬಳಸಬೇಕು, ಅಪರಿಚಿತರ ಕೈಗೆ ಮೊಬೈಲ್ ನೀಡಬಾರದು, ಅಪರಿಚಿತ ಪೋನ್ ಮತ್ತು ವಿಡಿಯೋ ಕರೆಗಳನ್ನು ಸ್ವೀಕರಿಸಬೇಡಿ, ಓ.ಟಿ.ಪಿ. ಸಂಖ್ಯೆಗಳನ್ನು ನಿಮ್ಮ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ತಿಳಿಸಬೇಡಿ, ಮುಖ್ಯವಾಗಿ ಹೆಣ್ಣು ಮಕ್ಕಳು ಮೊಬೈಲ್ ಕುರಿತು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲವಾದಲ್ಲಿ ಅನೇಕ ತೊಂದರೆಗಳಿಗೆ ಸಿಲುಕುವಿರಿ ಎಂದರು.

ಕಳೆದ ಒಂದು ವರ್ಷದಲ್ಲಿ ೩ ಲಕ್ಷ ಪ್ರಕರಣಗಳು ಮೊಬೈಲ್ ದುರ್‍ಬಳಿಕೆಯ ವಂಚನೆಯ ಪ್ರಕರಣಗಳ ದೂರುಗಳು ನೊಂದಣಿಯಾಗಿದೆ, ಈ ಪೈಕಿ ಶೇ.೭೦ ಪ್ರಕರಣಗಳು ಯುವತಿಯರ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿದೆ, ಉಳಿದ ೩೦ ಯುವಕರಿಗೆ ಹಾಗೂ ಇತರರಿಗೆ ಸಂಬಂಧಿಸಿದ್ದಾಗಿದೆ. ವಾಟ್ಸ್‌ಆಪ್, ಇನ್ಸಾಟ್ರಗ್ರಾಮ್, ಫೇಸ್ ಬುಕ್, ಟ್ವೇಟರ್, ಮುಂತಾದುವುಗಳ ಮೂಲಕ ಅಪರಿಚಿತರು ಪರಿಚಯ ಮಾಡಿಕೊಂಡು ನಿಮ್ಮನ್ನು ದುರ್‍ಬಳಿಸಿಕೊಂಡು ಅನಾಹುತಗಳಿಗೆ ಕಾರಣರಾಗುತ್ತಾರೆ ಎಂದು ಕಿವಿಮಾತು ತಿಳಿಸಿದರು.

ಅಪರಿಚಿತ ಕರೆ ಸ್ವೀಕರಿಸಬೇಡಿ

ಅಪರಿಚಿತ ಕರೆಗಳು ಸ್ವೀಕರಿಸಬೇಡಿ , ಸೇವ್ ಮಾಡಬೇಡಿ, ಮೇಸೇಜ್‌ಗಳಿಗೆ ರಿಪ್ಲೇ ಮಾಡಬೇಡಿ, ನಿಮ್ಮ ಪರಿಚಿತರ ಸಂಖ್ಯೆಗಳನ್ನು ಮಾತ್ರ ಸೇವ್ ಮಾಡಿ ಕರೆಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಳ್ಳಿ, ವಿಡಿಯೋ ಕಾಲ್ಸ್‌ಗಳ ಬಗ್ಗೆ ಹೆಚ್ಚು ಜಾಗೃತಿ ಅಗತ್ಯ, ಏನಾದರೂ ಅನುಚಿತ ಕರೆಗಳು, ವಿಡಿಯೋಗಳು, ಬೆದರಿಕೆ, ಹೂಡಿಕೆಗೆ ಆಮಿಷಗಳನ್ನು ಒಡ್ಡುವುದು ಇತ್ಯಾದಿಗಳ ಕುರಿತು ಸಹಾಯವಾಣಿ ೧೯೩೦ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ ಎಂದು ತಿಳಿಸಿದರು.ಕನ್ನಡದಲ್ಲೇ ಉತ್ತರಿಸಿ

ಅಪರಿಚಿತರು ಇಂಗ್ಲೀಷ್, ಹಿಂದಿ ಸೇರಿದಂತೆ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಕನ್ನಡದಲ್ಲಿಯೇ ಉತ್ತರಿಸಿ ಏನೇ ಕೇಳಿದರೂ ನೇರವಾಗಿ ಭೇಟಿ ಮಾಡಲು ಮನೆಗೆ ಬನ್ನಿಗೆ ಎಂದು ಕರೆಯಿರಿ, ಹಣವನ್ನು ವರ್ಗಾವಣೆಗೆ ಆನ್‌ಲೈನ್ ಕಡಿಮೆ ಬಳಸಿ ೫ ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವರ್ಗಾಯಿಸಬೇಕಾದರೆ ಬ್ಯಾಂಕ್ ವ್ಯವಸ್ಥಾಪಕರಿಗೆ ವಿವರ ನೀಡಿ, ಹಣ ಹೂಡಿಕೆಗಳಿಗೆ ಆಮಿಷ ಒಳಪಡಿಸಿ ೧ ಸಾವಿರ ದಿಂದ ಪ್ರಾರಂಭಿಸಿ ನಿಮಗೆ ಎರಡ್ಮ್ಮೂರು ಪಟ್ಟು ಕೊಟ್ಟು ಕೊನೆಗೆ ನಿಮ್ಮ ಬಳಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಸ್ವಿಚ್ ಹಾಫ್ ಮಾಡಿ ಕೊಂಡು ನಾಪತ್ತೆಯಾಗುತ್ತಾರೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಸೈಬರ್ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಜಗದೀಶ್ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌