ದೇವರ ಮುಂದೆ ಪ್ರಮಾಣ ಮಾಡುವುದರಿಂದ ಪ್ರಾಮಾಣಿಕತೆ ಸಾಬೀತಾಗದು: ಜೆಡಿಎಸ್ ಮುಖಂಡರ ವಾಗ್ದಾಳಿ

KannadaprabhaNewsNetwork |  
Published : Nov 12, 2026, 01:45 AM IST
11ಎಚ್ಎಸ್ಎನ್14 :  | Kannada Prabha

ಸಾರಾಂಶ

ಶಿವಲಿಂಗೇಗೌಡರ ರಾಜಕೀಯ ಜೀವನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಬೆಂಬಲವಾಗಿ ನಿಂತಿದ್ದರು. ೨೦೦೨ರಲ್ಲಿ ಬಾಗೇಶಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದು ಜೆಡಿಎಸ್ ನಾಯಕರು. ೨೦೦೪ರ ಚುನಾವಣೆಯ ಸೋಲಿನ ಬಳಿಕವೂ ರಾಜಕೀಯವಾಗಿ ಬೆಂಬಲ ನೀಡಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ನೆರವಾದವರನ್ನೇ ಇಂದು ಟೀಕಿಸುತ್ತಿರುವುದು ಕೃತಘ್ನ ರಾಜಕಾರಣಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜಕೀಯವಾಗಿ ಬೆಳೆಸಿದವರನ್ನೇ ಮರೆತು ನಂಬಿಕೆ ದ್ರೋಹ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು, ಹಾಸನಾಂಬೆ ದೇವಿಯ ಹೆಸರಿನಲ್ಲಿ ಪ್ರಮಾಣ ಮಾಡುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಬಾರದು ಎಂದು ಅರಸೀಕೆರೆ ಜೆಡಿಎಸ್ ಮುಖಂಡ ಕೆ.ಟಿ. ಕೇಶವಮೂರ್ತಿ ಹಾಗೂ ಗಂಗಾಧರ್ ಇತರರು ವಾಗ್ದಾಳಿ ನಡೆಸಿದರು.

ನಗರ ಖಾಸಗಿ ಹೊಟೇಲೊಂದರಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ಕಚೇರಿಯ ಪಿಎ ಮತ್ತು ಮಧ್ಯವರ್ತಿ ನಡುವಿನ ವಾಟ್ಸ್‌ಆಪ್ ಸಂಭಾಷಣೆ ಪ್ರಸ್ತಾಪಿಸಿ ತನಿಖೆಗೆ ಒತ್ತಾಯಿಸಿದರು. ಚಾಟ್‌ನಲ್ಲಿ ಸಚಿವರು ಸೇರಿದಂತೆ ಹಲವು ಅಧಿಕಾರಿಗಳ ಹೆಸರುಗಳಿವೆ ಎಂಬ ಆರೋಪ ಕೇಳಿಬಂದಿದೆ. ತಾವು ತಪ್ಪು ಮಾಡಿಲ್ಲವೆಂದಾದರೆ ಸಚಿವರು ಸ್ವತಃ ದೂರು ನೀಡಿ ತನಿಖೆಗೆ ಅವಕಾಶ ಮಾಡಿಕೊಡಲಿ. ತನಿಖೆಗೂ ಮುನ್ನವೇ ಆರೋಪಗಳನ್ನು ಸುಳ್ಳು ಎಂದು ತೀರ್ಮಾನಿಸುವ ಅಧಿಕಾರ ಅವರಿಗಿದೆಯೇ ಎಂದು ಪ್ರಶ್ನಿಸಿದರು.

ಶಿವಲಿಂಗೇಗೌಡರ ರಾಜಕೀಯ ಜೀವನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಅವರು ಬೆಂಬಲವಾಗಿ ನಿಂತಿದ್ದರು. ೨೦೦೨ರಲ್ಲಿ ಬಾಗೇಶಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದು ಜೆಡಿಎಸ್ ನಾಯಕರು. ೨೦೦೪ರ ಚುನಾವಣೆಯ ಸೋಲಿನ ಬಳಿಕವೂ ರಾಜಕೀಯವಾಗಿ ಬೆಂಬಲ ನೀಡಿದ್ದರು. ಅರಸೀಕೆರೆ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ನೆರವಾದವರನ್ನೇ ಇಂದು ಟೀಕಿಸುತ್ತಿರುವುದು ಕೃತಘ್ನ ರಾಜಕಾರಣಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಜೆಡಿಎಸ್ ತೊರೆಯುವುದಿಲ್ಲ ಎಂದು ದೇವೇಗೌಡರ ಸಮ್ಮುಖದಲ್ಲಿ ಹಾಗೂ ಮಗನ ಮೇಲೆ ಪ್ರಮಾಣ ಮಾಡಿದ್ದವರು ಬಳಿಕ ಪಕ್ಷ ತೊರೆದಿದ್ದು, ಹಣ ಪಡೆದಿಲ್ಲ ಎಂದು ದೇವಿಯ ಮುಂದೆ ಪ್ರಮಾಣ ಮಾಡುವ ಸಚಿವರು, ಸಚಿವ ಸ್ಥಾನ ಪಡೆಯಲು ಯಾವುದೇ ಹಣ ನೀಡಿಲ್ಲ ಎಂಬುದನ್ನೂ ಪ್ರಮಾಣ ಮಾಡಿ ಹೇಳಲಿ ಎಂದು ಸವಾಲು ಹಾಕಿದರು.

ದೇವೇಗೌಡರು ಅನಾರೋಗ್ಯದಲ್ಲಿದ್ದಾಗ ಅವರನ್ನು ಭೇಟಿ ಮಾಡದಿರುವುದು, ಹಾಸನಾಂಬೆ ಉತ್ಸವಕ್ಕೆ ಆಹ್ವಾನಿಸಲು ತೆರಳಿದಾಗಲೂ ಆಹ್ವಾನಿಸದಿರುವುದು ಸಚಿವರ ಕೃತಜ್ಞತೆಯ ಮನೋಭಾವವನ್ನು ತೋರಿಸುತ್ತದೆ. ತಮ್ಮನ್ನು ಬೆಳೆಸಿದ ಹಿರಿಯ ನಾಯಕರ ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸದಿರುವುದು ವಿಷಾದನೀಯ ಎಂದರು.

ಕಾಂಗ್ರೆಸ್‌ನಲ್ಲಿಯೂ ಶಿವಲಿಂಗೇಗೌಡರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಜಿಲ್ಲೆಯ ಆಡಳಿತದಲ್ಲಿ ಸಚಿವರ ಹಿಡಿತದ ಬಗ್ಗೆಯೂ ಪ್ರಶ್ನೆಗಳು ಮೂಡಿವೆ. ಆರೋಪ- ಪ್ರತ್ಯಾರೋಪಗಳ ಬದಲಿಗೆ ವಾಟ್ಸ್‌ ಆ್ಯಪ್ ಸಂಭಾಷಣೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು. ಅಧಿಕಾರ ಮತ್ತು ಸ್ವಾರ್ಥಕ್ಕಿಂತ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಬಸವಲಿಂಗಪ್ಪ, ಎನ್.ಎಂ. ಶೇಖರಪ್ಪ, ವತ್ಸಲ ಶೇಖರಪ್ಪ, ಸತೀಶ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌