ಹೆಣ್ಣುಮಕ್ಕಳ ಕಾಳಜಿ ಸಮಾಜದ ಕರ್ತವ್ಯ: ಮಕ್ಕಳ ಕಲ್ಯಾಣ ಸಮಿತಿಯ ಜಯಶೀಲ

KannadaprabhaNewsNetwork |  
Published : Dec 09, 2025, 12:15 AM IST
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆ ಸಮೀಪ ನೂತನವಾಗಿ ಪ್ರಾರಂಭಗೊಂಡ ನೆಮ್ಮದಿ ಫೌಂಡೇಷನ್ ಉದ್ಘಾಟನಾ ಸಮಾರಂಭವನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಯಶೀಲ ನೆರವೇರಿಸಿದರು | Kannada Prabha

ಸಾರಾಂಶ

ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ಲೈಂಗಿಕ ದೌರ್ಜನ್ಯದಿಂದ ಬಳಲುವವರಿಗೆ ನ್ಯಾಯಸಮ್ಮತವಾದ ನೆರವು ಕಲ್ಪಿಸುವುದು ನಾಗರೀಕ ಸಮಾಜದ ಮೂಲ ಕರ್ತವ್ಯ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜಯಶೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆ ಮತ್ತು ಲೈಂಗಿಕ ದೌರ್ಜನ್ಯದಿಂದ ಬಳಲುವವರಿಗೆ ನ್ಯಾಯಸಮ್ಮತವಾದ ನೆರವು ಕಲ್ಪಿಸುವುದು ನಾಗರೀಕ ಸಮಾಜದ ಮೂಲ ಕರ್ತವ್ಯ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಜಯಶೀಲ ಹೇಳಿದರು.

ನಗರದ ಮಲ್ಲಂದೂರು ರಸ್ತೆ ಸಮೀಪ ನೂತನವಾಗಿ ಪ್ರಾರಂಭಗೊಂಡ ನೆಮ್ಮದಿ ಫೌಂಡೇಷನ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಹೆಣ್ಣುಮಕ್ಕಳ ರಕ್ಷಣೆ, ಮಕ್ಕಳ ಆರೋಗ್ಯ ಹಾಗೂ ಅಗತ್ಯವಿರುವ ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಸೇರಿದಂತೆ 50 ಅಂಶಗಳನ್ನು ಒಳಗೊಂಡಿರುವ ನೆಮ್ಮದಿ ಪೌಂಢೇಷನ್ ಕಾರ್ಯ ಶ್ಲಾಘನೀಯವಾಗಿದ್ದು ತಮ್ಮ ಕಲ್ಯಾಣ ಸಮಿತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಇತ್ತೀಚಿನ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಪದ್ಧತಿಗಳು ಪ್ರಕರ ಣಗಳು ಜಿಲ್ಲೆಯಲ್ಲಿ ಹೆಚ್ಚಳಗೊಳ್ಳುತ್ತಿವೆ. ಇದನ್ನು ನೇರವಾಗಿ ಕಡಿವಾಣಕ್ಕೆ ತರಲು ಪ್ರಜ್ಞಾವಂತ ಸಮಾಜವು ಪುಟಿದೇಳಬೇಕು. ಅಲ್ಲದೇ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಶಿಕ್ಷಣವಂತರಾಗಿಸಿ ಸಮಾಜದ ಆಸ್ತಿ ಮಾಡಬೇಕು ಎಂದು ಸಲಹೆ ನೀಡಿದರು.

ಒಳ್ಳೆಯ ನಿರ್ಧಾರದಡಿ ಸ್ಥಾಪಿತಗೊಂಡ ಸಂಸ್ಥೆ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದ ಹೆಮ್ಮೆಯ ಸಂಗತಿ. ವಿಶೇಷವಾಗಿ ಗ್ರಾಮಿಣ ಮಟ್ಟದ ಮಕ್ಕಳಿಗೆ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಕಲ್ಯಾಣ ಸಮಿತಿ ಸದಾ ಸನ್ನದ್ಧವಾಗಿದೆ. ಪಾಲಕರು, ಮಗಳ ಜವಾಬ್ದಾರಿ ಕಳೆದುಕೊಳ್ಳಲು ವಯಸ್ಸಿಗೂ ಮುನ್ನ ಮದುವೆಗೆ ಮುಂದಾದರೆ ಎರಡು ಕುಟುಂಬದ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಸಿದರು.

ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಮಾತನಾಡಿ ಹೆಣ್ಣುಮಕ್ಕಳ ಜವಾಬ್ದಾರಿ ಮೇಲೆ ಅಧಿ ಕಾರಿ ವೃಂದ, ನಾಗರೀಕ ಸಮಾಜ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಹೆಣ್ಣಿನಂತೆ ಗಂಡುಮಕ್ಕಳಿಗೆ ಸರಿ ಸಮಾನವಾಗಿ ನಿಗಾವಹಿಸಿದರೆ ಭವಿಷ್ಯದ ಹಾದಿಯಲ್ಲಿ ತಪ್ಪಲು ಎಂದಿಗೂ ಸಾಧ್ಯವಿಲ್ಲ ಎಂದರು.

ಬ್ರಹ್ಮಕಮಾರಿ ಸಂಸ್ಥೆಯ ಅಮೃತಾ ಮಾತನಾಡಿ, ನೆಮ್ಮದಿ ಎಂಬುದು ಹಣಕೊಟ್ಟರೆ ಬರುವುದಿಲ್ಲ. ಆಧ್ಯಾತ್ಮದಿ ಂದ ಗಳಿಸಿಕೊಳ್ಳುವುದು. ಪರಮಾತ್ಮನ ಜ್ಞಾನ, ಪ್ರತಿನಿತ್ಯದ ಯೋಗಾಭ್ಯಾಸವು ಮಾನವ ಬದುಕಿನಲ್ಲಿ ಶಾಂತಿ, ನೆಮ್ಮದಿ ಕರುಣಿಸಿ ಸುಖವಾಗಿ ಬಾಳಬಹುದು ಎಂದು ಹೇಳಿದರು.

ನೆಮ್ಮದಿ ಫೌಂಡೇಷನ್ ಅಧ್ಯಕ್ಷ ಶಿವಪ್ರಕಾಶ್ ಮಾತನಾಡಿ, ರೋಗನಿರೋಧಕಶಕ್ತಿ, ಕಣ್ಣಿನ ಆರೈಕೆ, ತಾಯ್ತನ, ಮಕ್ಕಳ ಆರೈಕೆ ಮತ್ತು ಸಾಂಕ್ರಾಮಿಕ ರೋಗಗಳ ಆರೋಗ್ಯ ಮತ್ತು ಜಾಗೃತಿ ಶಿಬಿರಗಳನ್ನು ಆಯೋಜಿಸಿ ವಿವಿಧ ವೈದ್ಯಕೀಯ ಸೇವೆಗಳನ್ನು ಒದಗಿಸುವುದೇ ಮೂಲಧ್ಯೇಯ ಎಂದರು.

ಡಿವೈನ್ ಹೆಲ್ತ್ ಕೇರ್ ಸೆಂಟರ್‌ನ ರೇಖಾ, ದಸಂಸ ಮಹಿಳಾ ಸಂಚಾಲಕಿ ಭಾರತಿ ಉಮೇಶ್‌ರಾಜ್, ಪೌಂಡೇಷನ್ ಉಪಾಧ್ಯಕ್ಷೆ ನಾಗರಾತ್ನ, ಕಾರ್ಯದರ್ಶಿ ಶಾಂತಕುಮಾರ್, ಸದಸ್ಯ ಜ್ಯೋತಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತ ಕಟ್ಟಡ
ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ