ಪ್ರವಾಸಿ ತಾಣವಾಗಿ ತಲಕಾಯಲಬೆಟ್ಟ

KannadaprabhaNewsNetwork |  
Published : Aug 12, 2024, 01:00 AM IST
ಶ್ರಾವಣ ಮಾಸದ ಮೊದಲ ಶನಿವಾರ ಶ್ರೀ ವೆಂಕಟರಮಣಸ್ವಾಮಿ ದರ್ಶನ ಸಚಿವ ಕೆ.ಎಚ್.ಮುನಿಯಪ್ಪ | Kannada Prabha

ಸಾರಾಂಶ

ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಸುಮಾರು 100 ಎಕರೆ ಇದೆ. ಅದರಲ್ಲಿ ಉತ್ತಮವಾದ ಪ್ರವಾಸಿ ತಾಣವನ್ನು ನಿರ್ಮಿಸಿ ಪ್ರವಾಸಿಗರು ಉಳಿದುಕೊಂಡು ಬೆಳಗಿನ ಜಾವ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು, ಎರಡನೇ ಹಂತದಲ್ಲಿ ಆ ಕಾರ್ಯ ಪ್ರಾರಂಭಿಸಲಾಗುವುದು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ಇತಿಹಾಸ ಪ್ರಸಿದ್ದ ತಲಕಾಯಲ ಬೆಟ್ಟದಲ್ಲಿ ಭೂನೀಳಾ ಸಮೇತ ಶ್ರೀ ವೆಂಕಟರಮಣಸ್ವಾಮಿಯ ದೇವಾಲಯದ ನವೀಕರಣ ಮಾಡಲು ಈಗಾಗಲೇ ದೇವಸ್ಥಾನದ ಸಮಿತಿ ತಯಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ತಾಲೂಕಿನ ತಲಕಾಯಲ ಬೆಟ್ಟ ಗ್ರಾಮದಲ್ಲಿ ಶ್ರಾವಣ ಮಾಸದ ಮೊಲನೇ ಶನಿವಾರ ಇತಿಹಾಸ ಪ್ರಸಿದ್ಧ ಭೂನೀಳಾ ಸಮೇತ ಶ್ರೀ ವೆಂಕಟರಮಣಸ್ವಾಮಿಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇವಾಲಯಕ್ಕೆ ದಿನದಂದ ದಿನಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿರುವುದರಿಂದ ಇಲ್ಲಿನ ದೇವಸ್ಥಾನದ ನಕ್ಷೆ ಮತ್ತು ಅಂದಾಜು ವೆಚ್ಚವನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದರು.

ಪ್ರವಾಸಿತಾಣಕ್ಕೆ ಬೇಡಿಕೆ

ದೇವಸ್ಥಾನ ಸಂಪೂರ್ಣ ಅಭಿವೃದ್ಧಿ ಕೆಲಸ ಆದ ನಂತರ ಎರಡನೇ ಹಂತದಲ್ಲಿ ಅದರ ಬಗ್ಗೆ ಗಮನ ನೀಡಲಾಗುವುದು. ಮೊದಲು ದೇವಸ್ಥಾನ ಕಾಮಗಾರಿ ಪ್ರಾರಂಭವಾಗಲಿ. ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಸುಮಾರು 100 ಎಕರೆ ಇದೆ. ಅದರಲ್ಲಿ ಉತ್ತಮವಾದ ಪ್ರವಾಸಿ ತಾಣವನ್ನು ನಿರ್ಮಿಸಿ ಪ್ರವಾಸಿಗರು ಉಳಿದುಕೊಂಡು ಬೆಳಗಿನ ಜಾವ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು, ಎರಡನೇ ಹಂತದಲ್ಲಿ ಆ ಕಾರ್ಯ ಪ್ರಾರಂಭಿಸೋಣ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್ ಸ್ವಾಮಿ, ದೇವಾಲಯದ ಅಧ್ಯಕ್ಷ ಡಿ.ಪಿ. ನಾಗರಾಜ್ , ರಾಯಪ್ಪನಹಳ್ಳಿ ಅಶ್ವತ್ ನಾರಾಯಣರೆಡ್ಡಿ, ಶ್ರೀನಿವಾಸರೆಡ್ಡಿ, ರಾಧಮ್ಮ , ಗೋಪಾಲ ರೆಡ್ಡಿ, ಎಂ.ಪಿ ರವಿ,ಮಂಜುಳ ಪಾಂಡುರಂಗ, ಡಿ.ವಿ ಶ್ರೀರಂಗಪ್ಪ, ಸಾದಲಿ ಗೋವಿಂದರಾಜು, ಸೀತಾರಾಮ್, ಗ್ಯಾಸ್ ದ್ಯಾವಪ್ಪ , ಶ್ರೀನಿವಾಸ್, ಎನ್ ಟಿ.ಆರ್ ನರಸಿಂಹ ಆಹಾರ ಇಲಾಖೆಯ ಅಧಿಕಾರಿಗಳು, ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ