ಸರ್ಕಾರಿ ನೌಕರರ ಸಂಘದ ಸುದ್ದಿಗೋಷ್ಠಿಯಲ್ಲಿ ಎಂ.ಬಿ.ಮಂಜುನಾಥ್
ಪಟ್ಟಣದ ಮಲ್ಲೇಶ್ವರದಲ್ಲಿ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸರ್ವಸದಸ್ಯರ ವಾರ್ಷಿಕ ಮಹಾಸಭೆ ಡಿ. 14 ರಂದು ನಡೆಯಲಿದೆ ಎಂದು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ. ಮಂಜುನಾಥ್ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಅಂದು ಶ್ರೀ ಸ್ವರ್ಣಾಂಬ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಪ್ರತೀ ವರ್ಷದಂತೆ ಸಂಘ ಈ ಬಾರಿಯೂ 10-12 ನೇ ತರಗತಿಯಲ್ಲಿ ಶೇ. 90 ಅಂಕ ಗಳಿಸಿದವರಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸುವರು. ಸಂಘದ ಜಿಲ್ಲಾ ಅಧ್ಯಕ್ಷ ದೇವೇಂದ್ರ, ಅಜ್ಜಂಪುರ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ಬಿಇಒ ಎಂ.ಎಚ್. ತಿಮ್ಮಯ್ಯ, ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಹ್ರುದ್ದೀನ್ ಚೋಪ್ದಾರ್ ಭಾಗವಹಿಸಲಿದ್ದಾರೆ ಎಂದರು. ವಾಣಿಜ್ಯ ಮಳಿಗೆಗಳಿಂದ ಬರುವ ಬಾಡಿಗೆ ಹಣದಿಂದ ಯೋಜನೆ ಹಾಕಿಕೊಂಡು ನೌಕರರ ಹಾಗೂ ಸಾರ್ವಜನಿಕ ವಲಯದಲ್ಲಿ ಸಂಘ ಸಾಮಾಜಿಕ ಸಹಕಾರ ಕೆಲಸಗಳಲ್ಲಿ ಮುಂಚೂಣಿಯಲ್ಲಿದೆ. ಸಂಘದ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ತೊಡಗುವಂತೆ ಕಿವಿಮಾತು ಹೇಳಿದರು. ಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ವೈ.ಬಿ.ಹನುಮಂತಪ್ಪ, ರಾಜ್ಯ ಪರಿಷತ್ ಸದಸ್ಯ ಸುರೇಶ್.ಬಿ, ಟಿ.ಎಂ.ರಾಜಶೇಖರ್ ಖಜಾಂಚಿ, ಕಾರ್ಯದರ್ಶಿ ಸಿ.ಎಂ.ರುದ್ರೇಶ್, ಎಂ.ಎಚ್.ಧರ್ಮರಾಜ್,ರಾಜು ಎಸ್ ಒಡೆಯರ್, ಕೆ.ಆರ್.ಸುರೇಶ್,ಪ್ರಮೀಳಾ ಎ.ಆರ್, ಭೈರೇಗೌಡ,ಜಗದೀಶ್ ಬಿ.ಜೆ.ಡಾ.ಹೇಮಂತ್ ಕುಮಾರ್, ತೇಜಸ್ವಿನಿ, ಭಾರತಿ ಎಂ.ಜೆ ಮತ್ತಿತರರು ಇದ್ದರು. 10ಕೆಕೆಡಿಯು1 ಕಡೂರು ತಾಲೂಕು ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಎಂ.ಬಿ.ಮಂಜುನಾಥ್ ಮತ್ತಿತರರು ಇದ್ದರು.