ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : May 24, 2025, 12:06 AM ISTUpdated : May 24, 2025, 12:07 AM IST
23ಎಚ್ಎಸ್ಎನ್17 : ಹೊಳೆನರಸೀಪುರದ ಪತ್ರಕರ್ತರ ಭವನದಲ್ಲಿ ತಾ. ಕುರುಬರ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮಾಹಿತಿ ಕುರಿತು ಸುದ್ದಿಗೋಷ್ಠಿ ಆಯೋಜನೆ ಮಾಡಲಾಗಿತ್ತು. ದಾಶರಥಿ, ಪುಟ್ಟರಾಜು, ಉಮೇಶ್ ಇದ್ದರು | Kannada Prabha

ಸಾರಾಂಶ

ಕುರುಬರ ಸಂಘ ಮತ್ತು ತಾ. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾಲುಮತ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪ - ೨೦೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ ೮೦ % ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನವೋದಯ ಪ್ರವೇಶ ಪರೀಕ್ಷೆ ೨೦೨೫ನೇ ಸಾಲಿನಲ್ಲಿ ಉತ್ತೀರ್ಣರಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ೨೦೨೪ನೇ ಸಾಲಿನಲ್ಲಿ ಐಟಿಐ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪರೀಕ್ಷೆ ಪಡೆದ, ತಾ. ಕುರುಬ ಸಮುದಾಯದ ಮಕ್ಕಳಿಗೆ ಜೂನ್ ೧೫ನೇ ಭಾನುವಾರ ಕನಕ ಭವನದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕು ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂನ್ ೧೫ರ ಭಾನುವಾರ ಪಟ್ಟಣದ ಕನಕ ಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಎಂ.ವಿ.ದಾಶರಥಿ ತಿಳಿಸಿದರುಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾ. ಕುರುಬರ ಸಂಘ ಮತ್ತು ತಾ. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾಲುಮತ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪ - ೨೦೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ ೮೦ % ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನವೋದಯ ಪ್ರವೇಶ ಪರೀಕ್ಷೆ ೨೦೨೫ನೇ ಸಾಲಿನಲ್ಲಿ ಉತ್ತೀರ್ಣರಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ೨೦೨೪ನೇ ಸಾಲಿನಲ್ಲಿ ಐಟಿಐ ಪ್ರವೇಶ ಪರೀಕ್ಷೆ ಬರೆದು ಪ್ರವೇಶ ಪರೀಕ್ಷೆ ಪಡೆದ, ತಾ. ಕುರುಬ ಸಮುದಾಯದ ಮಕ್ಕಳಿಗೆ ಜೂನ್ ೧೫ನೇ ಭಾನುವಾರ ಕನಕ ಭವನದಲ್ಲಿ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅರ್ಹ ಅಭ್ಯರ್ಥಿಗಳು ಕೆಳಕಂಡ ದಾಖಲೆಗಳನ್ನು ಸಲ್ಲಿಸಲು ಕೋರಿದೆ ದಾಖಲೆಗಳನ್ನು ಸಲ್ಲಿಸಲು ಜೂನ್ ೫ ಕಡೇ ದಿನವಾಗಿರುತ್ತದೆ. ದಾಖಲೆಗಳು ಸ್ವಯಂ ದೃಢೀಕೃತ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ನಕಲು ಪ್ರತಿಗಳು ಹಾಗೂ ೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು, ಎಚ್.ಬಿ. ಮನೋಜ್ ವ್ಯವಸ್ಥಾಪಕರು ಕನಕ ಭವನ ಮೊ.ಸಂಖ್ಯೆ ೭೯೭೫೧೦೫೮೮೯ ಹಾಗೂ ಬಿ.ಕೆ. ವಕೀಲರು ಸಿಂಗ್ರೀ ಗೌಡರ ಸರ್ಕಲ್, ಮೊ. ನಂಖ್ಯೆ ೭೬೭೬ ೯೦೮೬೦೬ ಇವರಿಗೆ ಸಲ್ಲಿಸಲು ಕೋರಲಾಗಿದೆ.

ವಕೀಲರಾದ ಬಿ.ಕೆ. ಪುಟ್ಟರಾಜು ಮತ್ತು ಹಾಲುಮತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಹಾಗೂ ಉಪನ್ಯಾಸಕ ಆರ್‌ ಉಮೇಶ್ ಚಿಕ್ಕನಹಳ್ಳಿ ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ