ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Oct 03, 2026, 02:15 AM IST
ಸವಣೂರು ತಾಲೂಕಿನ ತೆವರಮಳ್ಳಿಹಳ್ಳಿ ಗ್ರಾಮದಲ್ಲಿ ೪೦ನೇ ವರ್ಷದ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವರಾಜೇಂದ್ರ ಸ್ವಾಮೀಜಿ ಭಾಗಿಯಾಗಿ ಮಾತನಾಡಿದರು. | Kannada Prabha

ಸಾರಾಂಶ

ತೆವರಮಳ್ಳಿಹಳ್ಳಿ ಗ್ರಾಮದಲ್ಲಿ ೪೦ನೇ ವರ್ಷದ ಗಣೇಶ ಉತ್ಸವದ ಅಂಗವಾಗಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸವಣೂರು: ತಾಲೂಕಿನ ತೆವರಮಳ್ಳಿಹಳ್ಳಿ ಗ್ರಾಮದಲ್ಲಿ ೪೦ನೇ ವರ್ಷದ ಗಣೇಶ ಉತ್ಸವದ ಅಂಗವಾಗಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಕುಂದಗೋಳದ ಕಲ್ಯಾಣಪುರ ಮಠದ ಅಭಿನವ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾತಂತ್ರ‍್ಯ ಹೋರಾಟದ ಕಾಲದಲ್ಲಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚಲು ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಸ್ಮರಿಸಿದರು.

ಆ ಕಾಲದಲ್ಲಿ ಇಬ್ಬರು-ಮೂವರು ಒಂದೆಡೆ ಸೇರುವುದೂ ಕಷ್ಟವಾಗಿತ್ತು. ಅಂತಹ ಸನ್ನಿವೇಶದಲ್ಲಿ ಜನರನ್ನು ಒಗ್ಗೂಡಿಸಲು ಗಣೇಶ ಪ್ರತಿಷ್ಠಾಪನೆ ಸಹಕಾರಿಯಾಯಿತು. ಸಂಘಟನೆಯ ಉದ್ದೇಶದಿಂದ ಆರಂಭವಾದ ಈ ಉತ್ಸವ ಇಂದು ದ್ವೇಷ ಭಾವನೆಗೆ ದಾರಿಯಾಗದಂತೆ ಎಚ್ಚರ ವಹಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದೆಯೂ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಕಿವಿಮಾತನ್ನಾಡಿದರು.

ಗ್ರಾಮದ ಪ್ರಮುಖ ರಾಜಶೇಖರ ಹಲಸೂರ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವವನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಂಘಟನೆಯ ಜೊತೆಗೆ ಭಕ್ತಿಭಾವದಿಂದ ಆಚರಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ರುದ್ರಪ್ಪ ಹಲಸೂರ, ಬಿ. ಎಲ್. ಪೂಜಾರ, ಯಲ್ಲಪ್ಪ ನಾಯಕನೂರ, ಮೂಕಪ್ಪ ಸೂರಗೊಂಡ, ಗದಿಗೆಪ್ಪ ಹಲಸೂರ, ಮಂಜುನಾಥ ದೇಸಾಯಿ, ಬಸವಣ್ಣ ಹಲಸೂರ, ಮಾದೇವಪ್ಪ ಹಲಸೂರ, ರುದ್ರಗೌಡ ಮರಿಗೌಡ್ರ, ಚಂದ್ರಣ್ಣ ಕ್ಷತ್ರಿಯ, ಸಿದ್ದಪ್ಪ ದೊಡ್ಡಮನಿ, ಹಜರೇಸಾಬ್ ನದಾಫ್, ಚನ್ನವೀರಪ್ಪ ಕೊಪ್ಪದ, ವೀರೇಶ ಸುಂಕದ, ಸುರೇಶ ಹಲಸೂರ, ವೆಂಕಟೇಶ ಪೇಟಕರ್, ಹನುಮಂತರ ರಸಾಳಕರ, ಬಾಬುಸಾಬ್ ನದಾಫ್, ರವಿ ಬಾರ್ಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹಲಸೂರ ಕುಟುಂಬಸ್ಥರು ಕಾರ್ಯಕ್ರಮವನ್ನು ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ