ವನ್ಯಜೀವಿಗಳ ಸಂರಕ್ಷಣೆ ಅಗತ್ಯ: ಯೋಗೇಶ ಸಿ.ಕೆ.

KannadaprabhaNewsNetwork |  
Published : Oct 03, 2026, 02:15 AM IST
ಕಾರ್ಯಕ್ರಮವನ್ನು ನ್ಯಾಯಾಧೀಶೆ ರೂಪಾ ಶೆಟ್ಟಿ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ನಮ್ಮ ಭೂಮಿಯ ಮೇಲಿನ ಮನುಷ್ಯರೂ ಸೇರಿದಂತೆ ಜೀವಿಗಳ ಉಳಿವಿಗೆ ಪರಿಸರ ಸಂರಕ್ಷಣೆ ಮಾಡುವುದು ತೀರಾ ಅಗತ್ಯ.

ಭಟ್ಕಳ: ಅರಣ್ಯ ಇಲಾಖೆಯ ಕೆನರಾ ವೃತ್ತದ ಹೊನ್ನಾವರ ವಿಭಾಗದಿಂದ ಏರ್ಪಡಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ರೂಪಾ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವನ್ಯಜೀವಿ ಸಪ್ತಾಹದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೊನ್ನಾವರ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ. ಅವರು ಮಾತನಾಡಿ, ನಮ್ಮ ಭೂಮಿಯಲ್ಲಿ ಮಾತ್ರ ಜೀವಿಗಳಿವೆ. ನಾವು ಬುದ್ಧಿವಂತ ಜೀವಿಗಳು, ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ಪರಿಸರ ರಕ್ಷಣೆ ಮಾಡಲು ಸಹ ಅಗತ್ಯದ ಕಾನೂನು ಮಾಡಲಾಗಿದೆ. ಆದರೆ ನಾವು ಅಂತಹ ಕಾನೂನನ್ನು ಮರೆತುಬಿಟ್ಟು ಕೇವಲ ಸ್ವಾರ್ಥಕ್ಕಾಗಿ ಮಾತ್ರ ಕೆಲಸ ಮಾಡುತ್ತೇವೆ. ನಮ್ಮ ಭೂಮಿಯ ಮೇಲಿನ ಮನುಷ್ಯರೂ ಸೇರಿದಂತೆ ಜೀವಿಗಳ ಉಳಿವಿಗೆ ಪರಿಸರ ಸಂರಕ್ಷಣೆ ಮಾಡುವುದು ತೀರಾ ಅಗತ್ಯ ಎಂದರು.

ನಾವು ಪರಿಸರದ ಕುರಿತು ಜಾಗೃತೆ ವಹಿಸಿದರೆ ನಮ್ಮ ಕುಟುಂಬದವರು, ಸುತ್ತಮುತ್ತಲಿನವರು, ಸಮಾಜ ಜಾಗೃತವಾಗುತ್ತದೆ ಎಂದರು.

ರಸ್ತೆಬದಿಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ದುಷ್ಪರಿಣಾಮ ಜಾಸ್ತಿ ಎಂದ ಅವರು, ಅದರಿಂದ ರಸ್ತೆಯಲ್ಲಿ ಹೋಗುವ ವಾಹನ ಸವಾರರಿಗೂ ತೊಂದರೆ, ಪ್ರಾಣಿಗಳಿಗೂ ತೊಂದರೆಯೇ ವಿನಾ ಉಪಕಾರವಾಗುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅರ್ಪಿತಾ ವನ್ಯಜೀವಿ ಸಪ್ತಾಹದ ಕಾರ್ಯಕ್ರಮ ಅ. ೨ರಿಂದ ೮ನೇ ತಾರೀಕಿನ ತನಕ ನಡೆಯುತ್ತದೆ. ಸಪ್ತಾಹ ಅ. ೨ರಂದು ಗಾಂಧಿ ಜಯಂತಿಯಾದ್ದರಿಂದ ಗಾಂಧೀಜಿಯವರ ಅಹಿಂಸಾವಾದ, ಪ್ರಾಣಿಗಳ ಮೇಲಿನ ಪ್ರೀತಿಯಿಂದ ಇದೇ ದಿನಾಂಕವನ್ನು ಆಯ್ಕೆಮಾಡಲಾಯಿತು ಎಂದರು. ಮುಖ್ಯ ಅತಿಥಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ, ವನ್ಯಜೀವಿ ಸಪ್ತಾಹವನ್ನು ಅರಣ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದೆ. ಯುವ ಜನರನ್ನು, ಸಂಘ ಸಂಸ್ಥೆಗಳನ್ನು ಕಾರ್ಯಕ್ರಮದಲ್ಲಿ ಭಾಗಿಗಳಾಗುವಂತೆ ಮಾಡುವುದು ಸೂಕ್ತವಾಗಿದೆ ಎಂದರು. ನಿವೃತ್ತ ಹಿರಿಯ ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್. ನಾಯ್ಕ ಮಾತನಾಡಿ, ಪರಿಸರ ರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು. ಭಟ್ಕಳ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಮಾತನಾಡಿ, ಇದೊಂದು ಉತ್ತಮ ವನ್ಯಜೀವಿ ವಿಭಾಗವಾಗಿದ್ದು, ಕಡಲ ತೀರವೂ ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿವೆ ಎಂದರು. ವೇದಿಕೆಯಲ್ಲಿ ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ, ಹೊನ್ನಾವರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್, ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ದೀಪಾ ಅರಳಗುಂಡಿ ಉಪಸ್ಥಿತರಿದ್ದರು. ಶಿಕ್ಷಕ ನಾರಾಯಣ ನಾಯ್ಕ ನಿರ್ವಹಿಸಿದರು. ಡಿಆರ್‌ಎಫ್‌ಒ ಮಾದೇವ ಮಡ್ಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ