ಮಕ್ಕಳ ಪ್ರತಿಭೆ ವೇದಿಕೆಗೆ ಪ್ರತಿಭಾ ಕಾರಂಜಿ: ನಿರೇಟಿ

KannadaprabhaNewsNetwork | Published : Sep 24, 2024 1:45 AM

ಸಾರಾಂಶ

Talent Fountain for Children's Talent Forum: Nireti

-ಗುರುಮಠಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ

------

ಕನ್ನಡಪ್ರಭ ವಾರ್ತೆ ಗುರುಮಠಕಲ್

ಮಕ್ಕಳ ಪ್ರತಿಭೆಗೆ ವೇದಿಕೆಯಾಗಿ ಹಾಗೂ ಶಿಕ್ಷಕರ ಪ್ರತಿಭೆಯನ್ನು ಮಕ್ಕಳ ಕಡೆಯಿಂದ ಹೊರಗೆ ಹಾಕಿಸಲು ಪ್ರೇರಣೆ ನೀಡುವ ವೇದಿಕೆಯಾಗಿ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಸಂತೋಷ್ ಕುಮಾರ ನಿರೇಟಿ ಹೇಳಿದರು.

ಶಾಂತಿನಿಕೇತನ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ನಡೆದ ಗುರುಮಠಕಲ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳ ಪಠ್ಯ ಚಟುವಟಿಕೆಗಳಿಕ್ಕಿಂತ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿ ಮಕ್ಕಳ ನಿಜವಾದ ಪ್ರತಿಭೆಗೆ ಅವಕಾಶ ನೀಡಿ, ಅವರ ಅಭಿರುಚಿಗಳನ್ನು ಶಿಕ್ಷಕರು ಅರ್ಥಮಾಡಿಕೊಂಡು ಅದರಂತೆ ವಿದ್ಯಾರ್ಥಿಗಳನ್ನು ಪ್ರತಿಭೆ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದರು.

ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ನಾರಾಯಣರೆಡ್ಡಿ ಮಾತನಾಡಿ, ಮಕ್ಕಳ ಪ್ರತಿಭಾ ಕಾರಂಜಿಯನ್ನು ವಿಜಯಭಾಸ್ಕರ್ ಅವರು ಚಾಲನೆ ನೀಡಿದ್ದು, ಅವರನ್ನು ಸ್ಮರಿಸಬೇಕು. ಅವರ ಯೋಜನೆಯಿಂದ ಮಕ್ಕಳ ಪ್ರತಿಭೆ ಕಾರಂಜಿ ಮೂಡಿತ್ತಿದೆ ಎಂದರು.

ಜಿಲ್ಲಾ ವಿಷಯ ಶಿಕ್ಷಕ ತಜ್ಞ ಹಣಮಂತು ಮಾತನಾಡಿ, ವಿದೇಶಗಳಲ್ಲಿ ಮಕ್ಕಳಿಗೆ ಬ್ಯಾಗ್ ರಹಿತ ಶಿಕ್ಷಣ ನೀಡಲಾಗುತ್ತದೆ. ಪಠ್ಯಗಳಿಕ್ಕಿಂತ ಆಟ ಆಡುತ್ತಾ, ಕಲಿಯಲಾಗುತ್ತದೆ. ಓದು-ಬರಹ ದೀರ್ಘಕಾಲಿಕವಾಗಿ ಉಳಿಯಲು ಮತ್ತು ಪ್ರತಿಭೆ ತೋರಿಸಲು ಹೊಸ ಸಂಶೋಧನೆಗೆ ಎಡೆಮಾಡಿಕೊಡುತ್ತದೆ ಎಂದರು. ಸಿಆರ್‌ಪಿ ಬಾಲಪ್ಪ ಸಿರಿಗೆಂ ಮಾತನಾಡಿದರು. ವಿಜಯಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಣಮಂತರಾವ ಗೋಂಗ್ಲೆ, ಬಿಆರ್‌ಪಿ ಚಂದು ಜಾಧವ, ಶಿಕ್ಷಣ ಸಂಯೋಜಕ ರವಿಂದ್ರ ಚವ್ಹಾಣ, ಯಾದಗಿರಿ ಸಿಆರ್‌ಪಿ ಸಯ್ಯದ್ ಬಾಬಾ, ಕಿಷ್ಟರೆಡ್ಡಿ, ಚೆನ್ನಾರೆಡ್ಡಿ, ಮಹ್ಮದ್ ನದೀಮ, ಚಂದ್ರಶೇಖರ ಪಾಟೀಲ್, ಡಾ. ಮಾಲತಿ, ಶಿವರಾಜ, ಶಿವರಾಜಪ್ಪ, ಯಲಪ್ಪ ಯಾದವ, ಮಹೇಶ ಕಲಾಲ್, ಭೀಮರೆಡ್ಡಿ ಉಡಮುಲಗಿದ್ದ, ಲಿಂಗಾನಂದ ಗೋಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

-----

22ವೈಡಿಆರ್8: ಗುರುಮಠಕಲ್ ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂತೋಷ್ ಕುಮಾರ ನಿರೇಟಿ ಉದ್ಘಾಟಿಸಿದರು.

Share this article