ಮಂಚೀಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲ್ಲಾಪುರ
ಹಾಸಣಗಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಮಂಚಿಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಾಸಣಗಿ ಗ್ರಾಪಂ ಅಧ್ಯಕ್ಷೆ ವಿನೋದ ಬಿಲ್ಲವ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಫಲಪ್ರದವಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಬಿ.ಆರ್.ಸಿ. ಸಮನ್ವಯಾಧಿಕಾರಿ ಸಂತೋಷ ಜಿಗಳೂರ ಹಾಸಣಗಿ ಮಾತನಾಡಿ, ಇಂತಹ ಚಿಕ್ಕ ಊರಿನಲ್ಲಿ ಪ್ರತಿಭಾ ಕಾರಂಜಿ ಇಷ್ಟೊಂದು ವಿಜೃಂಭಣೆಯಿಂದ ನಡೆಯುತ್ತಿರುವುದು ಬಹಳ ಸಂತೋಷವನ್ನುಂಟು ಮಾಡಿದೆ ಎಂದರು.ಶಿರಸಿ ಡಯಟ್ ಹಿರಿಯ ಉಪನ್ಯಾಸಕ ಈಶ್ವರ ನಾಯ್ಕ ಮಾತನಾಡಿ, ಮಕ್ಕಳಿಗೆ ಕೇವಲ ಪಠ್ಯ ಚಟುವಟಿಕೆಗಳಿಂದ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಆಗುವುದಿಲ್ಲ. ಪ್ರತಿಭಾ ಕಾರಂಜಿಯಂತಹ ಪಕ್ಷೇತರ ಚಟುವಟಿಕೆಗಳು ಮಕ್ಕಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ಹಾಸಣಗಿ ಶಾಲೆಯ ಅಧ್ಯಕ್ಷ ಡಾ. ವಸಂತ್ ಶಾಸ್ತ್ರಿ ಮಾತನಾಡಿ, ಯಾವುದೇ ವ್ಯಕ್ತಿ ಎಷ್ಟೇ ದೊಡ್ಡವನಾಗಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಆತನ ಬೆಳವಣಿಗೆಗೆ ಪ್ರಾಥಮಿಕ ಶಿಕ್ಷಣವೇ ಮೂಲ ಬನಾದಿ. ಹಳ್ಳಿಯ ಶಾಲೆಗಳು ಇಂದಿಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಶಿಕ್ಷಣ ಸಂಯೋಜಕ ಪ್ರಶಾಂತ ಜಿ.ಎನ್, ಬಿ.ಆರ್.ಪಿ ಸುಲೋಚನಾ ಹೆಗಡೆ, ಸಿ.ಆರ್.ಪಿ.ಗಳಾದ ವಿಷ್ಣು ಭಟ್ಟ, ದೀಪಾ ಶೆಟ್ಟಿ ಮುಂತಾದವರಿದ್ದರು. ಮಂಚಿಕೇರಿ ಸಿ.ಆರ್.ಪಿ. ಕೆ.ಆರ್. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ನಾಗರಾಜ ನಾಯ್ಕ, ಗಾಯತ್ರಿ ಭಾಗ್ವತ್ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಗಿರಿಜಾ ಭಟ್ಟ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ ಮಾತನಾಡಿ, ಇಲ್ಲಿ ಅರಳಿದ ಪ್ರತಿಭೆಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲೂ ಬೆಳಗುವಂತಾಗಲಿ ಎಂದು ಹಾರೈಸಿದರು.ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ವಿಜೇತ ಮಕ್ಕಳಿಗೆ ಶುಭ ಹಾರೈಸಿದರು. ಸಂಯೋಜಕ ಸುಧಾಕರ್ ನಾಯಕ, ಸಿ.ಆರ್.ಪಿ.ಗಳಾದ ಅರವಿಂದ ನಾಯ್ಕ ಹಾಗೂ ಚಂದ್ರಹಾಸ ನಾಯ್ಕ ಮತ್ತಿತರರಿದ್ದರು. ಶಿರನಾಲ ಶಾಲೆಯ ಶಿಕ್ಷಕ ಸತೀಶ್ ಶೆಟ್ಟಿ ನಿರ್ವಹಿಸಿದರು.
ಮಂಚಿಕೇರಿ ಕ್ಲಸ್ಟರ್ ವ್ಯಾಪ್ತಿಯ ೧೦ ಶಾಲೆಗಳ ಸುಮಾರು ೨೦೦ ವಿದ್ಯಾರ್ಥಿಗಳು ೨೮ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ವಿತರಿಸಲಾಯಿತು.