ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭ: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork |  
Published : May 21, 2024, 12:38 AM IST
ಮ | Kannada Prabha

ಸಾರಾಂಶ

ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭವಾಗಿದ್ದು, ಶಿಕ್ಷಕರಿಂದ ಸರಿಯಾದ ಮಾರ್ಗದರ್ಶನ ಜೀವನದ ಗುರಿಗಳನ್ನು ತಲುಪುವಂತೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಬ್ಯಾಡಗಿ: ಶಿಕ್ಷಣಕ್ಕೆ ಜಗತ್ತನ್ನು ಬದಲಾಯಿಸಬಲ್ಲ ಶಕ್ತಿಯಿದ್ದು, ಶಿಕ್ಷಣ ಜ್ಞಾನದ ಸಾಧನವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು ದೇಶದ ಆಧಾರ ಸ್ತಂಭವಾಗಿದ್ದು, ಶಿಕ್ಷಕರಿಂದ ಸರಿಯಾದ ಮಾರ್ಗದರ್ಶನ ಜೀವನದ ಗುರಿಗಳನ್ನು ತಲುಪುವಂತೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.

ಪ್ರಸಕ್ತ ವರ್ಷದ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಪಟ್ಟಣದ ಬಿಇಎಸ್ ಪ್ರೌಢಶಾಲೆ ವಿದ್ಯಾರ್ಥಿ ಹೇಮಂತ ಛತ್ರದ, ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ತರುಣ ಹಿರೇಮಠ, ಕದರಮಂಡಲಗಿ ಗ್ರಾಮದ ಸ್ಪಂದನಾ ಶಾಲೆಯ ನಿಖಿಲ್ ಬೆಳವಿಗಿ ಅವರುಗಳ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಶಿಕ್ಷಣವು ಖಡ್ಗಕ್ಕಿಂತ ಹರಿತವಾದ ಅಸ್ತ್ರವೆಂದು ಜಗತ್ತು ಬಲವಾದ ನಂಬಿಕೆಯನ್ನು ಹೊಂದಿದೆ. ಶಿಕ್ಷಕರು ಶೈಕ್ಷಣಿಕ ಬದುಕಿನ ಅತ್ಯುತ್ತಮ ಒಡನಾಡಿಗಳು, ನಮ್ಮನ್ನು ಅಜ್ಞಾನದ ಪ್ರಪಂಚದಿಂದ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಪಡೆಯುವ ಅಂಕಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದರಲ್ಲಿ ಶಿಕ್ಷಕರ ಮೌಲ್ಯಮಾಪನವು ಕೂಡ ಆಗಲಿದೆ ಎಂದರು.

ಕಲಿಕೆ ಸಮಯದಲ್ಲಿ ಶೈಕ್ಷಣಿಕ ಸಾಧನೆ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕಿದೆ. ಶೈಕ್ಷಣಿಕ ವ್ಯವಸ್ಥೆ ಸಾಕಷ್ಟು ಬದಲಾವಣೆಯಾಗಿದ್ದು, ತಾಂತ್ರಿಕತೆ ಹಾಗೂ ಹೊಸ ಶಿಕ್ಷಣ ನೀತಿ ನಿಯಮಗಳನ್ನು ಅರಿತು ವಿದ್ಯಾರ್ಥಿಗಳು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು, ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದು, ಬಂಗಾರದಂತಹ ಶೈಕ್ಷಣಿಕ ಸಮಯವನ್ನು ವ್ಯರ್ಥಮಾಡದೇ, ಗುಣಮಟ್ಟದ ಶಿಕ್ಷಣ ಪಡೆಯುವಂತೆ ತಿಳಿಸಿದರು.

ಕಷ್ಟಪಟ್ಟಾದರೂ ತಮ್ಮ ಮಕ್ಕಳಿಗೆ ಕನಿಷ್ಠ ಪದವಿಶಿಕ್ಷಣ ಕೊಡಿಸಬೇಕೆನ್ನುವ ಮನಸ್ಥಿತಿಯೂ ಜನರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಮೂರ್ನಾಲ್ಕು ದಶಕದಿಂದೀಚೆಗೆ ಶಿಕ್ಷಣವಂತರ ಸಂಖ್ಯೆ ಹೆಚ್ಚಳವಾಗಿದೆ. ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆ. ಕಾಂಗ್ರೆಸ್ ಸರ್ಕಾರ ಕೂಡಾ ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ನಿರಂತವಾಗಿ ಶ್ರಮಿಸುತ್ತಿದೆ ಎಂದರು.

ಈ ವೇಳೆ ರೈತ ಮುಖಂಡ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಮುಖಂಡರಾದ ಶೇಖರಗೌಡ್ರ ಪಾಟೀಲ, ಬೀರಪ್ಪ ಬಣಕಾರ, ಚಿಕ್ಕಪ್ಪ ಹಾದೀಮನಿ, ಮುನಾಫ್‌ಸಾಬ್ ಎರೇಶಿಮಿ, ಸೋಮಣ್ಣ ಸಂಕಣ್ಣನವರ, ರಮೇಶ ಸುತ್ತಕೋಟಿ, ಗಿರೀಶ ಇಂಡಿಮಠ, ರಾಜು ಶಿಗ್ಲಿ, ಅಶೋಕ ಮಾಳೇನಹಳ್ಳಿ, ದುರ್ಗೇಶ ಗೋಣೆಮ್ಮನವರ, ಬಸವರಾಜ ಬಳ್ಳಾರಿ, ಡಾ.ಪಿ.ಟಿ.ಲಕ್ಕಣ್ಣನವರ, ವಿ.ಸಿ. ಹಾವೇರಿಮಠ, ನಾಗರಾಜ ಕಡಗಿ, ಮಂಜಣ್ಣ ಎಲಿ, ಪುಟ್ಟನಗೌಡ ಪಾಟೀಲ, ಹನುಮಂತಪ್ಪ ತರೇದಹಳ್ಳಿ, ಗುಡ್ಡಪ್ಪ ಹೊಂಬರಡಿ, ಮಹದೇವಪ್ಪ ಎಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಸಮನ್ವಾಧಿಕಾರಿ ಎಂ.ಎಫ್. ಹುಲ್ಯಾಳ, ನೌಕರರ ಸಂಘದ ಅಧ್ಯಕ್ಷ ಎಂ.ಎಫ್. ಕರೆಣ್ಣನವರ (ಮಾಸಣಗಿ) ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!