ತರೀಕೆರೆ: ಸುವರ್ಣ ನುಡಿ ಸಂಭ್ರಮ ಕಾರ್ಯಕ್ರಮಗಳಿಂದ ಪ್ರತಿಭೆಗಳು ಅನಾವರಣಗೊಳ್ಳುತ್ತವೆ ಎಂದು ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಮನಸ್ಸುಗಳನ್ನು ಬೆಸೆಯುತ್ತದೆ. ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಸಂದೇಶವನ್ನು ಕೊಡುತ್ತದೆ. ಗಾದೆ, ಸಂಗೀತ, ಕವನ ವಾಚನ ಮನಸ್ನನ್ನು ಅರಳಿಸುತ್ತದೆ. ಇಂತಹ ಸಂದೇಶಗಳು ಮುಂದಿನ ಪೀಳಿಗೆಯನ್ನು ತಲುಪಬೇಕು ಎಂದರು.
ಹಿರಿಯ ಲೆಕ್ಕ ಪರಿಶೋಧಕರಾದ ಆರ್.ಎನ್.ಶ್ರೀನಿವಾಸ್ ಮಾತನಾಡಿ, ಸುವರ್ಣ ನುಡಿ ಸಂಭ್ರಮ ಬಹಳ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳು ನೆಡೆಯಬೇಕು ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಸುವರ್ಣ ನುಡಿ ಸಂಭ್ರಮ ಕಾರ್ಯಕ್ರಮದಿಂದ ಮನಸ್ಸು ಅಹ್ಲಾದಕರವಾಗುತ್ತದೆ, ನವೆಂಬರ್ ತಿಂಗಳು ಪೂರ್ಣ ಸುವರ್ಣ ನುಡಿ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಸಂಚಾಲಕರಾದ ಇಮ್ರಾನ್ ಅಹಮದ್ ಬೇಗ್, ಕನ್ನಡ ಶ್ರೀ ಬಿ.ಎಸ್.ಭಗವಾನ್ ಮಾತನಾಡಿದರು.
ಹರ್ಷಿಣಿ ಕುಮಾರ್ ಅವರು ಕವನ ವಾಚಿಸಿದರು. ಮಂಜುನಾಥ್, ಶಂಕರಪ್ಪ, ಚಂದ್ರಶೇಖರ್ ಲತಾ ಗೋಪಾಲಕೃಷ್ಣ, ಸುನಿತ ಕಿರಣ್ ಕುಮಾರ್, ರೋಹಿಣಿ ನರಸಿಂಹಮೂರ್ತಿ, ಉಮಾ ಪ್ರಕಾಶ್ ಅವರು ಗೀತೆಗಳನ್ನು ಹಾಡಿದರು.ಸಿವಿಲ್ ಇಂಜಿನಿಯರ್ ಎಚ್.ಸಿ.ಗೋಪಾಲಕೃಷ್ಣ, ಜಿಲ್ಲಾ ಕ.ಜಾ.ಪ.ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಎಂ.ಎಸ್.ವಿಶಾಲಾಕ್ಷಮ್ಮ, ಕಸಾಪ ಹಿರಿಯ ಸದಸ್ಯ ಶಿವಣ್ಣ, ಮರುಳುಸಿದ್ದಯ್ಯ ಪಟೇಲ್, ಲೇಖಕ ತ.ಮ.ದೇವಾನಂದ್, ಸಯದ್ ಮುಹೀಬ್, ಡಾ.ಬಿ.ಎಚ್.ಕುಮಾರಸ್ವಾಮಿ, ಉಮಾಶಂಕರ್, ಕುಸುಮ ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.