ಕಂಪ್ಲಿ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ. ಮುಸ್ಲಿಂ ಓಲೈಕೆಗೆ ಟಿಪ್ಪು ಜಯಂತಿ ಮಾಡಿದ್ದು, ಮೈಸೂರಲ್ಲಿ ಜನರು ಸೋಲಿಸಿದರೂ ಬುದ್ಧಿ ಕಲಿಯುತ್ತಿಲ್ಲ. ಸಿದ್ದರಾಮಯ್ಯ ಪದೇಪದೇ ದೇವರಾಜ್ ಅರಸುವಿನಂತೆ ನಾನು ಎನ್ನುತ್ತಾರೆ. ಅರಸು ಭೂಮಿ ನೀಡಿದರೆ ಇವರು ಭೂಮಿ ಕಿತ್ತು ಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದ್ದಾರೆ..
ಮುಸ್ಲಿಂ ಬಾಹುಳ್ಯ ಎಲ್ಲೆಲ್ಲಿ ಇದಾವೋ ಆ ದೇಶಗಳು ಮುಳುಗಿ ಹೋಗುತ್ತಿವೆ. ಮುಸ್ಲಿಂ 15 ಪರ್ಸೆಂಟ್ ಆದ ಕೂಡಲೇ ಭೂಮಿ ಕಬಳಿಸುತ್ತಿದ್ದಾರೆ. 25 ಪರ್ಸೆಂಟ್ ಆದರೆ ಉಳಿಗಾಲವಿಲ್ಲ. ಮುಸ್ಲಿಂ, ಕ್ರಿಶ್ಚನ್ ಒಂದಾದಂತೆ ಹಿಂದೂಗಳು ಒಂದಾಗಬೇಕು ಎಂದರು.
ಪಿತ್ರಾರ್ಜಿತ ಆಸ್ತಿ ಮಕ್ಕಳು, ಮೊಮ್ಮಕ್ಕಳಿಗೆ ಬರುತ್ತದೆ. ಆದರೆ ತಲತಲಾಂತರದಿಂದ ಹಿಂದೂಗಳಿಗೆ ಸೇರಿದ ಆಸ್ತಿ ರಾತ್ರಿ ಬೆಳಗಾಗುವುದರಲ್ಲಿ ವಕ್ಫ ಆಸ್ತಿ ಆಗುವುದು ಹೇಗೆ?, ಅವರು ಬಂದು ವಕ್ಫ್ ಆಸ್ತಿ ನಮ್ಮದು ಎನ್ನುತ್ತಿದ್ದಾರೆ ಎಂದು ಪ್ರತಾಪ ಸಿಂಹ ಹೇಳಿದರು.ಮೊದಲ ಹಂತದ ಹೋರಾಟ ಬಳಿಕ ಜೆಪಿಸಿ ಜೊತೆಗೆ ಕೇಂದ್ರ ಸಚಿವರ ಜೊತೆಗೆ ಮಾತನಾಡಿ ಬಂದಿದ್ದೇವೆ. ಭಾಷಣ ಕೊಡುವ ಹೋರಾಟ ನಮ್ಮದಲ್ಲ. ಬಡವರಿಗೆ ನ್ಯಾಯ ಕೊಡಿಸುವುದು ನಮ್ಮ ಉದ್ದೇಶವಾಗಿದೆ. ಚುನಾವಣಾ ಹಿನ್ನೆಲೆ ಮಾಡುತ್ತಿರುವ ಹೋರಾಟ ನಮ್ಮದಲ್ಲ. ಚುನಾವಣಾ ಇನ್ನು ಮೂರೂವರೆ ವರ್ಷ ಇದೆ. ಅದಕ್ಕೆ ನಾವು ಹೋರಾಟ ಮಾಡುತ್ತಿಲ್ಲ. ಡೋಂಗಿ ರಾಜಕಾರಣಿಗಳು ನಾವಲ್ಲ. ಕೃಷಿಭೂಮಿ, ಮಠಗಳ ಭೂಮಿ ಕಬಳಿಸುವ ಯತ್ನದಲ್ಲಿ ನೋಟಿಸ್ ಕೊಡುತ್ತಿದ್ದಾರೆ.
ಕುಮಾರ್ ಬಂಗಾರಪ್ಪ ಮಾತನಾಡಿ, ಪಹಣಿಯಲ್ಲಿನ ವಕ್ಫ್ ಹೆಸರು ತಿದ್ದುಪಡಿಗೆ ಮುಖ್ಯಮಂತ್ರಿಯಾಗಲಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಗೆ ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ರಾಜ್ಯದ ಜನತೆಗೆ ವಕ್ಫ್ ಹೆಸರು ತೊಲಗಿಸಿ ನ್ಯಾಯ ಒದಗಿಸಬೇಕೆಂದರೆ ಕಾಂಗ್ರೆಸ್ ವಕ್ಫ್ ತಿದ್ದುಪಡಿಗೆ ಬೆಂಬಲಿಸಬೇಕು. ರಾಜ್ಯದಲ್ಲಿ 65 ಸಾವಿರ ಆಸ್ತಿ, ಬಳ್ಳಾರಿಯಲ್ಲಿ 3658 ಆಸ್ತಿಗಳು ವಕ್ಫ್ ಹೆಸರಿನಲ್ಲಿವೆ. ಈ ಕುರಿತು ಜನರನ್ನು ಜಾಗೃತಗೊಳಿಸಲು ಹೋರಾಟ ನಡೆಸುತ್ತಿದ್ದೇವೆ. ಈ ಹೋರಾಟ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ ಎಂದರು.