ಹೊಸ ವರ್ಷದ ಸಂಭ್ರಮ
ನಾಡಿನಲ್ಲಿ ಕನ್ನಡ ಸಾಹಿತ್ಯ ಉಳಿದು, ಬೆಳಗಬೇಕಾದರೆ ಬೇರುಮಟ್ಟದ ಶಿಕ್ಷಣದಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಆಗ ಕನ್ನಡ ಭಾಷೆಗೆ ಘನತೆ ಬರಲು ಸಾಧ್ಯ ಎಂದು ಕನ್ನಡನಾಡು ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಹೇಳಿದರು. ಚನ್ನಗಿರಿಯಲ್ಲಿ 2025ರ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಪಟ್ಟಣದ ಕನ್ನಡನಾಡು ಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಬುಧವಾರ ಸಂಜೆ 2025ರ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಪರಸ್ಪರ ಶುಭಾಶಯ ಕೋರಿ ಮಾತನಾಡಿದರು.ವರ್ಷದಿಂದ ವರ್ಷಕ್ಕೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳು ಮಕ್ಕಳ ಹಾಜರಾತಿ ಕೊರತೆಯಿಂದಾಗಿ ಮುಚ್ಚುತ್ತಿವೆ. ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ದಾಖಲಾಗುವಂತಹ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೂ, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕೊರತೆ ಎದುರಾಗಿ, ಶಾಲೆ ಮುಚ್ಚುತ್ತಿರುವುದು ದೊಡ್ಡ ದುರಂತ ಎಂದು ಅತಂಕ ವ್ಯಕ್ತಪಡಿಸಿದರು.
ನಗರ ಘಟಕ ಅಧ್ಯಕ್ಷ ನಟರಾಜ ರಾಯ್ಕರ್, ತಾಲೂಕು ಸಮಿತಿ ಅಧ್ಯಕ್ಷ ಅಣ್ಣೋಜಿರಾವ್, ಮಹಿಳಾ ನಗರ ಘಟಕ ಅಧ್ಯಕ್ಷೆ ಶಶಿಕಲಾ, ಗೌರವ ಅಧ್ಯಕ್ಷೆ ನಾಗರತ್ನಮ್ಮ, ಕುಮಾರಪ್ಪ, ಸಚಿನ್ ಭಾಗವಹಿಸಿದ್ದರು.