ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಎಲ್.ಎಸ್. ಶಿವಯೋಗಿ ನೂತನ ಅಧ್ಯಕ್ಷ

KannadaprabhaNewsNetwork |  
Published : Nov 07, 2024, 12:43 AM IST
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ.ನೂತನ ಅಧ್ಯಕ್ಷರಾಗಿ ಎಲ್.ಎಸ್. ಶಿವಯೋಗಿ ಅವಿರೋಧ ಆಯ್ಕೆ | Kannada Prabha

ಸಾರಾಂಶ

ತರೀಕೆರೆ, ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಲ್.ಎಸ್.ಶಿವಯೋಗಿ ಅವರನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಅಭಿನಂದಿಸಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಲ್.ಎಸ್.ಶಿವಯೋಗಿ ಅವರನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಅಭಿನಂದಿಸಿದರು.

ಟಿಎಂಪಿಎಂಎಸ್ ಮಾಜಿ ಅಧ್ಯಕ್ಷ ಸುಧಾಕರ್ ಮಾತನಾಡಿ ನಮ್ಮೆಲ್ಲರ ಸಹಕಾರ ಖಂಡಿತ ಇರುತ್ತದೆ. ಸಹಕಾರ ಸಂಘ ಉನ್ನತ ಸ್ಥಾನವನ್ನು ತಲುಪಲಿ ಎಂದು ಹೇಳಿದರು.ಸಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ಟಿ.ಎಚ್.ಎಲ್.ರಮೇಶ್ ಮಾತನಾಡಿ ನೂತನ ಅಧ್ಯಕ್ಷ ಎಲ್.ಎಸ್.ಶಿವಯೋಗಿ ರಾಜಕೀಯವಾಗಿ ಹೆಚ್ಚು ಅನುಭವ ಪಡೆದಿದ್ದಾರೆ. ಹಲವಾರು ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ರೈತರಿಗೆ ಹೆಚ್ಚಿನ ಉಪಯೋಗ ವಾಗುವಂತೆ ಕೃಷಿ ಉಪಕರಣಗಳನ್ನು ಸಹಕಾರ ಸಂಘದಿಂದ ಒದಗಿಸಲು ಪ್ರಯತ್ನಿಸಬೇಕು. ಸಹಕಾರ ಸಂಘದ ಉದ್ದೇಶವನ್ನು ಈಡೇರಿಸಬೇಕು ಎಂದು ಸಲಹೆ ಮಾಡಿದರು.ಸಂಘದ ನಿರ್ದೇಶಕ ಎಂ.ನರೇಂದ್ರ ಮಾತನಾಡಿ ನೂತನ ಅಧ್ಯಕ್ಷರಿಗೆ ಹೆಚ್ಚು ಅವಕಾಶ ಇದೆ. ಸಹಕಾರ ಸಂಘದಲ್ಲಿ ಗೋದಾಮು ಇದೆ. ರೈತರಿಗೆ ಕೃಷಿಗೆ ಹೆಚ್ಚು ಉಪಯೋಗವಾಗುವ ಪರಿಕರಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡುವ ದಾಸ್ತಾನು ಕೇಂದ್ರ ಪ್ರಾರಂಭಿಸಬೇಕು. ಇದರಿಂದ ರೈತರ ಕೃಷಿ ಅಭಿವೃದ್ಧಿಗೆ ನೆರವಾಗುತ್ತದೆಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ ನೂತನ ಅಧ್ಯಕ್ಷ ಎಲ್.ಎಸ್.ಶಿವಯೋಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ರೈತರ ಪರವಾಗಿ ಕೆಲಸ ಮಾಡಬೇಕು. ಸಹಕಾರಿ ಚಳುವಳಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಸಹಕಾರ ಸಂಘವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲಿ ಎಂದರು. ನೂತನ ಅಧ್ಯಕ್ಷರು ಎಲ್.ಎಸ್.ಶಿವಯೋಗಿ ಮಾತನಾಡಿ ಸಹಕಾರ ಸಂಘವನ್ನು ತಮ್ಮ ಕೈಲಾದಷ್ಟು ಮಟ್ಟಿಗೆ ಅಭಿವೃದ್ಧಿ ಪಡಿಸುತ್ತೇನೆ. ರೈತರಿಗೆ ಕೃಷಿ ಚಟುವಟಿಕೆಗೆ ಮತ್ತು ಹನಿ ನೀರಾವರಿ, ಅಡಕೆ, ಭತ್ತದ ಬೆಳೆಗಾರರಿಗೆ ಹಾಗೂ ವಾಣಿಜ್ಯ ಬೆಳೆಗಳಿಗೆ ಅಗತ್ಯವಾದ ಉಪಕರಣಗಳು, ಗೊಬ್ಬರ, ಔಷಧ, ಪೈಪುಗಳು, ಸಹಕಾರ ಸಂಘದಿಂದ ಉತ್ತಮ ಗುಣಮಟ್ಟದ ಪರಿಕರಗಳು ದೊರೆಯುವ ಹಾಗೆ ಪ್ರಯತ್ನಿಸುವುದಾಗಿ ತಿಳಿಸಿದ ಅವರು ಅವಿರೋಧ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಪದ್ಮ, ಮಾಜಿ ಅಧ್ಯಕ್ಷ ವಸಂತಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಶಂಭೈನೂರು ಆನಂದಪ್ಪ, ಎಲ್.ಟಿ. ಹೇಮಣ್ಣ, ರಮೇಶ್, ಶಶಿಕುಮಾರ್ ಮತ್ತಿತರರು ಮಾತನಾಡಿದರು.ಟಿಎಪಿಸಿಎಂಎಸ್‌ ಸಹಕಾರ ಸಂಘದ ನಿರ್ದೇಶಕರು,ನೀರು ಬಳಕೆದಾರರ ಸಂಘದ ಅಧ್ಯಕ್ಷರು ಹರಿ, ಎಸ್.ಕೃಷ್ಣಮೂರ್ತಿ, ವಿ.ಎಸ್.ಎನ್.ಎನ್. ಉಪಾಧ್ಯಕ್ಷ ನಾಗರಾಜ್, ಜಯರಾಮ್, ಕಾರ್ಯದರ್ಶಿ ನಿತೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.6ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ತಾಲೂಕು ವ್ಯವಸಾಯ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆವಿರೋಧವಾಗಿ ಆಯ್ಕಾಯಾದ ಎಲ್.ಎಸ್.ಶಿವಯೋಗಿ ಅವರನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಅಭಿನಂದಿಸಿದರು. ಪುರಸಭೆ ಅಧ್ಯಕ್ಷ ವಸಂತ ಕುಮಾರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ - ಸುಮಲತಾ ಪರ ನಾರಾಯಣಗೌಡ ಬ್ಯಾಟಿಂಗ್‌
ಮಂಗಳೂರು ಲಿಟ್‌ಫೆಸ್ಟ್ ಪ್ರಶಸ್ತಿಗೆ ಮೀನಾಕ್ಷಿ ಜೈನ್‌ ಆಯ್ಕೆ