ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ಪಟ್ಟಣದ ಬಾಹುಬಲಿ ಭವನದಲ್ಲಿ ತಾಲೂಕು ವೀರ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಮಡಿವಾಳ ಮಾಚಿದೇವರು ಸರ್ವರಿಗೂ ಸಮಬಾಳು ಎನ್ನುವ, ಮನುಷ್ಯನನ್ನು ಗೌರವಿಸುವ ಹಾಗೂ ಎಲ್ಲರಲ್ಲೂ ಸಮಾನತ್ವ ಸಮಾಜದ ಪರಿಕಲ್ಪನೆ ನೀಡಿದ್ದಾರೆ. ಇಂತಹ ಅನೇಕ ಮಹಾನಿಯರ ತತ್ವ, ಸಿದ್ದಂತಾ, ಆದರ್ಶಗಳನ್ನು ಹಾಗೂ ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ನಾವು ಮಹಾನಿಯರಿಗೆ ಗೌರವಿಸಿದಂತೆ ಎಂದು ಹೇಳಿದರು.ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ನಾಶಪಡಿಸಲು ಉದ್ದೇಶಿಸಿರುವ ಶಕ್ತಿಗಳ ವಿರುದ್ಧ ಹೋರಾಡಿದ್ದವರು. ಹಲವಾರು ಶಾಸನಗಳು ಮಡಿವಾಳ ಮಾಚಿದೇವರು ಹೆಸರನ್ನು ಉಲ್ಲೇಖಿಸುತ್ತವೆ. ಅವರು 354 ವಚನಗಳು ಗೌರವಿಸುವ ಹಾಗೂ ಎಲ್ಲರಲ್ಲೂ ಸಮಾನತ್ವ ಕಲಿದೇವರದೇವ ಎಂಬ ಹಸ್ತಾಕ್ಷರದೊಂದಿಗೆ ದೊರೆತಿವೆ ಎಂದರು.
ಹಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಮುಖಂಡರ ಮನವಿಯಂತೆ ದೇಗುಲಕ್ಕೆ 3 ಲಕ್ಷ ರೂ. ಅನುದಾನ ಹಾಗೂ ತಾಲೂಕು ಕೇಂದ್ರಲ್ಲಿ ಭವನ ನಿರ್ಮಿಸಲು ಎಲ್ಲಾ ರೀತಿಯಲ್ಲೂ ಸಹಕಾರ ಮಾಡುವುದಾಗಿ ಅವರು ಭರವಸೆ ನೀಡಿದರು.
ಈ ವೇಳೆ ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಎಚ್. ರವಿಕುಮಾರ್, ಕೆ.ಆರ್. ನಗರ ತಾಲೂಕು ಅಧ್ಯಕ್ಷ ಸಿದ್ದನಕೊಪ್ಪಲು ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಹರ್ಷವರ್ಧನ್, ಹಿರಿಯ ಮುಖಂಡ ಗೋಪಣ್ಣ, ಗ್ರಾಪಂ ಅಧ್ಯಕ್ಷೆ ಫಾತಿಮಾ ಉನ್ನೀಸ್, ತಹಸೀಲ್ದಾರ್ ನರಗುಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ನಗರ ಅಧ್ಯಕ್ಷ ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಡೇರಿ ಮಾದು, ಸತೀಶ್, ಆಪ್ತ ಸಹಾಯಕ ನವೀನ್, ಪುನೀತ್ ಮೊದಲಾದವರು ಇದ್ದರು.