ಇಂದಿನಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

KannadaprabhaNewsNetwork | Published : Sep 20, 2024 1:42 AM

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಕ್ರೀಡಾ ಇಲಾಖೆ ಶುಕ್ರವಾರದಿಂದ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಯನ್ನು ಕ್ರೀಡಾ ಇಲಾಖೆ ಶುಕ್ರವಾರದಿಂದ ಹಮ್ಮಿಕೊಂಡಿದೆ.

ಮಡಿಕೇರಿ ತಾಲೂಕಿನವರಿಗೆ ಶುಕ್ರವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ (ಹಾಕಿ ಆಯ್ಕೆ ಸೆ.21 ರಂದು ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಡೆಯುವುದು) ಕ್ರೀಡಾಕೂಟ ನಡೆಯಲಿದೆ. ಕುಶಾಲನಗರ ತಾಲೂಕಿನವರಿಗೆ ಶನಿವಾರ ಕೂಡಿಗೆ ಕ್ರೀಡಾ ಶಾಲೆ ಮೈದಾನ (ಮಡಿಕೇರಿ ಮತ್ತು ಕುಶಾಲನಗರ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಕ್ರೀಡಾಶಾಲೆ ಮೈದಾನದಲ್ಲಿ ನಡೆಯಲಿದೆ).

ಸೋಮವಾರಪೇಟೆ ತಾಲೂಕಿನವರಿಗೆ 22ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನ (ಸೋಮವಾರಪೇಟೆಯ ಹಾಕಿ ಕ್ರೀಡಾಪಟುಗಳಿಗೆ ಹಾಕಿ ಆಯ್ಕೆ ಪ್ರಕ್ರಿಯೆ ಕ್ರೀಡಾ ಶಾಲೆ ಮೈದಾನ, ಕೂಡಿಗೆಯಲ್ಲಿ ನಡೆಯಲಿದೆ)ದಲ್ಲಿ ಕ್ರೀಡಾಕೂಟ ನಡೆಯಲಿದೆ.

ಪೊನ್ನಂಪೇಟೆ ತಾಲೂಕಿನವರಿಗೆ 23ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ (ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ). ವಿರಾಜಪೇಟೆ ತಾಲೂಕಿನವರಿಗೆ 24 ರಂದು ಅರಣ್ಯ ಮಹಾವಿದ್ಯಾಲಯ ಹಾಗೂ ಜೂನಿಯರ್ ಕಾಲೇಜು ಆಟದ ಮೈದಾನ ಪೊನ್ನಂಪೇಟೆ (ಹಾಕಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ).

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ 27ರಂದು ಕೂಡಿಗೆ ಕ್ರೀಡಾ ಶಾಲೆ ಮೈದಾನದಲ್ಲಿ ನಡೆಯಲಿದೆ. (ಟೇಬಲ್ ಟೆನ್ನಿಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ).

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಮಡಿಕೇರಿ ತಾಲೂಕು ಮಹಾಬಲ 9980887499, ಮನು 9480032712, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವೆಂಕಟೇಶ್ 9844326007 ಹಾಗೂ ಮಂಜುನಾಥ್ 9342563014, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕು ಸುಬ್ಬಯ್ಯ 8197790350 ಹಾಗೂ ಗಣಪತಿ 8951287301 ನ್ನು ಸಂಪರ್ಕಿಸಬಹುದು.

ಆಯಾಯ ತಾಲೂಕುಗಳ ಕ್ರೀಡಾಪಟುಗಳು ತಮ್ಮ ತಾಲೂಕುಗಳ ಕ್ರೀಡಾ ಕೂಟದಲ್ಲಿ ಮಾತ್ರ ಭಾಗವಹಿಸಬೇಕು. ಒಂದು ತಾಲೂಕಿನಲ್ಲಿ ಭಾಗವಹಿಸಿದ ಕ್ರೀಡಾ ಪಟುಗಳಿಗೆ ಮತ್ತೊಂದು ತಾಲೂಕಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಹಾಗೆ ಕಂಡು ಬಂದಲ್ಲಿ ಅಂತಹ ತಂಡವನ್ನು ಅನರ್ಹಗೊಳಿಸಲಾಗುವುದು. ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಆಯಾಯ ದಿನಗಳಂದು ಬೆಳಗ್ಗೆ 9.30ರೊಳಗೆ ಕಡ್ಡಾಯವಾಗಿ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.

ಸೂಚನೆ:

ತಾಲೂಕು ಮಟ್ಟದಲ್ಲಿ ನಡೆದ ಅಥ್ಲೆಟಿಕ್ಸ್ (ವೈಯಕ್ತಿಕ ಸ್ಪರ್ಧೆ), ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಮಾತ್ರ ಅವಕಾಶ. ಜಿಲ್ಲಾ ಮಟ್ಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಹಾಗೂ 2 ಭಾವಚಿತ್ರ ಕಡ್ಡಾಯವಾಗಿ ತರಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.

Share this article