ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜಿಪಂ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿ, ಸಮಾಜ ಮಹಿಳೆಯರನ್ನು ಸದಾ ಗೌರವದಿಂದ ಕಾಣಬೇಕು ಎಂದ ಅವರು, ಮಹಿಳಾ ಸಬಲೀಕರಣ, ಮಹಿಳಾ ಹಕ್ಕುಗಳು ಮತ್ತು ಸವಲತ್ತುಗಳ ಕುರಿತು ಸ್ವ-ಸಹಾಯ ಸಂಘದ ಮಹಿಳೆಯರಿಗೆ, ಒಕ್ಕೂಟದ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಪಂ ಇಒ ಪ್ರಕಾಶ ದೇಸಾಯಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು. ಸಮಾಜದ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ ಎಂದರು.ಎನ್‌ಆರ್‌ಎಲ್‌ಎಂನ ಜಿಲ್ಲಾ ವ್ಯವಸ್ಥಾಪಕ ವಿಶ್ವನಾಥ ಶಹಪುರ ಮಾತನಾಡಿ, ಗ್ರಾಮ ಮಟ್ಟದಲ್ಲಿ ಮಹಿಳೆಯರು ಸ್ವ-ಸಹಾಯ ಸಂಘದ ಮೂಲಕ ಆದಾಯ ಉತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕು. ಉದ್ಯೋಗಕ್ಕೆ ಮೌಲ್ಯ ಸರಪಳಿಯನ್ನು ಬೆಳೆಸುವದರ ಜೊತೆಗೆ ಉದ್ಯೋಗವನ್ನು ಬ್ರಾಂಡ್ ಮಾಡಿಕೊಳ್ಳುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷ ಬನ್ನೆಪ್ಪ ಡೋಣೂರ, ಸದಸ್ಯ ಶ್ರೀಶೈಲ ಚಾಂದಕವಟೆ, ಒಕ್ಕೂಟದ ಅಧ್ಯಕ್ಷ ಗಂಗಾಬಾಯಿ ಚಾಂದಕವಟೆ, ಶಿಕ್ಷಕ ಎ.ಎಲ್.ಗಂಗೂರ ಇತರರು ಇದ್ದರು. ಸ್ವ-ಸಹಾಯ ಸಂಘದ ಮೇಲ್ವಿಚಾರಕಿ ಶಾಂತಮ್ಮ ಸಾಸನೂರ ಸ್ವಾಗತಿಸಿ, ನಿರೂಪಿಸಿದರು. ಸ್ವ-ಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಲಾಯಿತು.