- 190 ಅಂಗಡಿಗಳ ಮಾಲೀಕರ ಸಂಘ: ತಾಲೂಕು ಅಧ್ಯಕ್ಷ ಜಗದೀಶ್
ಚನ್ನಗಿರಿ: ತಾಲೂಕು ಶಾಮಿಯಾನ ಸೌಂಡ್ಸ್, ಡೆಕೋರೇಷನ್ ಹಾಗೂ ದೀಪಾಲಂಕಾರ ಸಂಘ ಉದ್ಘಾಟನಾ ಸಮಾರಂಭ ಆ.5ರಂದು ಪಟ್ಟಣದ ಶ್ರೀ ವಿಠಲ ರುಕ್ಕುಮಾಯಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಸಿ.ಬಿ.ಜಗದೀಶ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವ ನಾವುಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕಾಗಿದೆ. ಆ ನಿಟ್ಟಿನಲ್ಲಿ ತಾಲೂಕಿನಲ್ಲಿರುವ 190 ಶಾಮಿಯಾನ ಸೌಂಡ್ಸ್, ಡೆಕೋರೇಷನ್ ಹಾಗೂ ದೀಪಾಲಂಕಾರದ ಅಂಗಡಿಗಳ ಮಾಲೀಕರು ಒಗ್ಗಟ್ಟಾಗಿ ಈ ಸಂಘ ಸ್ಥಾಪಿಸಲಾಗಿದೆ ಎಂದರು.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ, ಮಾಜಿ ಶಾಸಕ ವಡ್ನಾಳ್ ರಾಜಣ್ಣ ನೆರವೇರಿಸುವರು.
ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಕನ್ನಡಾಂಬೆಯ ಭಾವಚಿತ್ರವನ್ನು ಅಲಂಕೃತ ಸಾರೋಟಿನಲ್ಲಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಮಾರಂಭ ನಡೆಯುವ ಸ್ಥಳಕ್ಕೆ ತಲುಪಲಾಗುವುದು ಎಂದು ತಿಳಿಸಿದರು.
- - -
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಶಾಮಿಯಾನ, ಸೌಂಡ್ಸ್, ಡೆಕೋರೇಷನ್, ದೀಪಾಲಂಕಾರ ಸಂಘದ ತಾಲೂಕು ಅಧ್ಯಕ್ಷ ಸಿ.ಬಿ.ಜಗದೀಶ್ ಮಾತನಾಡಿದರು.