ಯುವಶಕ್ತಿಯಿಂದ ಬಸವ ಜಯಂತಿ 2026ಕ್ಕೆ ಹೊಸ ಚೈತನ್ಯ

KannadaprabhaNewsNetwork |  
Published : Apr 17, 2026, 03:00 AM IST
17 | Kannada Prabha

ಸಾರಾಂಶ

ಸಮಗ್ರ ಯೋಜನೆ, ಕಾರ್ಯಪದ್ಧತಿ ಹಾಗೂ ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಂಡಂತೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರುತಾಲೂಕು ಯುವ ಘಟಕ ಸಮಿತಿ ವತಿಯಿಂದ ಬರಡನಪುರ ಗ್ರಾಮದ ಮಹಾಂತೇಶ್ವರ ಮಠದಲ್ಲಿ ಬಸವ ಜಯಂತಿ 2026 ಅಂಗವಾಗಿ ಸಭೆ ನಡೆಯಿತು. ತಾಲೂಕು ಮಟ್ಟದ ಪದಾಧಿಕಾರಿಗಳು ಹಾಗೂ ಜಯಪುರ ಹೋಬಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತುಬಸವ ಜಯಂತಿ ಅಧ್ಯಕ್ಷರ ಸಮ್ಮುಖದಲ್ಲಿ ಯುವ ಘಟಕದ ಅಧ್ಯಕ್ಷ ಬೀರಿಹುಂಡಿ ಸೋಮಶೇಖರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಸಂಘಟನಾ ಚಟುವಟಿಕೆಗಳಿಗೆ ಹೊಸ ಚೈತನ್ಯವನ್ನು ನೀಡಿತು.ಸಭೆಯಲ್ಲಿ ಅಧ್ಯಕ್ಷ ಎಂ. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಪಿ. ವಿರೂಪಾಕ್ಷ, ಕೆ.ವಿ. ಮಲ್ಲೇಶ್ ಹಾಗೂ ಶಿವಮೂರ್ತಿ ಕಾನ್ಯ ಸೇರಿದಂತೆ ಪ್ರಮುಖರು ಭಾಗವಹಿಸಿ, ಬಸವ ಜಯಂತಿ 2026 ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.ಸಮಗ್ರ ಯೋಜನೆ, ಕಾರ್ಯಪದ್ಧತಿ ಹಾಗೂ ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಂಡಂತೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.ಜಿಲ್ಲಾ ಸಾಮಾಜಿಕ ಮಾಧ್ಯಮ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್ ಯುವಕರಿಗೆ ಮಹತ್ವದ ಸಂದೇಶ ನೀಡಿದರು. ಸಂಘಟನೆಯ ಬಲ ಯುವಕರಾಗಿದ್ದು, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರುಫೇಸ್ಬುಕ್, ವಾಟ್ಸಪ್ ಹಾಗೂ ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯಕ್ರಮದ ಪ್ರಚಾರವನ್ನು ವ್ಯಾಪಕವಾಗಿ ನಡೆಸುವಂತೆ ಅವರು ಸಲಹೆ ನೀಡಿದರು.ಚಂಚುರಾಯನ ಹುಂಡಿ ಶಿವಶಂಕರ್, ಶಿವಮೂರ್ತಿ ಚಿಕ್ಕಕಾನ್ಯ, ಯಡಹಳ್ಳಿ ಷಣ್ಮುಖ, ಸುನಿಲ್ ಕುಮಾರ್, ಇಲವಾಲ ನವೀನ, ಬೊಮ್ಮನಹಳ್ಳಿ ಮಹದೇವಸ್ವಾಮಿ, ಬೋಗಾದಿ ನಾಗರಾಜು, ಅನಗಹಳ್ಳಿ ನಾಗರಾಜು, ಶೆಟ್ಟನಾಯಕನಹಳ್ಳಿ ಗಿರೀಶ್, ಮುರುಡಗಳ್ಳಿ ನಟರಾಜ್, ರಾಘವೇಂದ್ರ, ಯೋಗೇಶ್, ಶಿವ ಮಲ್ಲಿಕಾರ್ಜುನ, ಬರಡನಪುರ ಮಹೇಶ್, ಗಿರೀಶ್, ಮಂಜು, ಗುರು ಮಲ್ಲಪ್ಪ ಹಾಗೂ ಮಂಕರಾಜು ಬೊಮ್ಮನಹಳ್ಳಿ ಶಂಕರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ
ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಅಂತ್ಯಕ್ರಿಯೆ