ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜ.೧೨ ರ ಘಟನೆಗೆ ಅನಗತ್ಯ ಹಾಗೂ ತಪ್ಪಾದ ಕಥೆ ಜೋಡಿಸಿ ಹರಿಯ ಬಿಟ್ಟಿದ್ದಾರೆ. ಎಲ್ಲಾ ರಾಜ್ಯಗಳ ಪ್ರಯಾಣಿಕರು ಹಾಗೂ ವಾಹನಗಳ ಸುರಕ್ಷತೆ, ಭದ್ರತೆ ಹಾಗೂ ಗೌರವ ಕಾಪಾಡಲು ತಮಿಳುನಾಡಿನ ಪೊಲೀಸ್ ಇಲಾಖೆ ದೃಢವಾಗಿ ಬದ್ಧವಾಗಿದೆ. ಈ ಪ್ರತ್ಯೇಕ ಘಟನೆಯನ್ನು ಅಂತರ ರಾಜ್ಯ ಸಮಸ್ಯೆಯಂತೆ ಬಿಂಬಿಸಲು ಹೊರಟ ಯಾವುದೇ ಪ್ರಯತ್ನವು ವಾಸ್ತವಿಕವಾಗಿ ತಪ್ಪು ಮತ್ತು ದಾರಿ ತಪ್ಪಿಸುವಂತಾದ್ದು ಎಂದಿದ್ದಾರೆ.
ಇದು ಸಾಮಾನ್ಯ ಸಂಚಾರ ಅಪಘಾತದಿಂದ ಉಂಟಾದ ಒಂದು ಘಟನೆ ಮಾತ್ರವಾಗಿದೆ. ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿ ಮತ್ತು ಪಕ್ಷಪಾತವಿಲ್ಲದೆ ತಮಿಳುನಾಡಿನ ಪೊಲೀಸರು ಕೆಲಸ ನಿರ್ವಹಿಸಿದ್ದಾರೆ.ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸಲಹೆ ನೀಡಲಾಗಿದೆ. ವಿಷಯವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲಾಗಿದೆ. ವಾಸ್ತವಿಕ ಸ್ಥಿತಿಯನ್ನು ಸ್ಪಷ್ಟಪಡಿಸುವ ಮತ್ತು ತಪ್ಪು ಮಾಹಿತಿಯಿಂದ ಅನಗತ್ಯ ಗೊಂದಲ ಉಂಟಾಗದಂತೆ ತಡೆಯುವ ಉದ್ದೇಶದಿಂದ ಈ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ವ್ಯಾನ್‌ಗೆ ಉಂಟಾದ ಸಣ್ಣ ಹಾನಿಯಾದ ಹಿನ್ನಲೆ ತಮಿಳುನಾಡಿನ ಡಿಕ್ಕಿ ಹೊಡೆದ ಲಾರಿ ಚಾಲಕನಿಂದ ವ್ಯಾನ್ ಚಾಲಕನಿಗೆ ₹1000 ಪಾವತಿಯಾಗಿದೆ. ಅಪಘಾತದ ಸಂಬಂಧ ಯಾವುದೇ ದೂರು ಎರಡು ಕಡೆಯವರಿಂದ ದೂರು ಬಾರದ ಕಾರಣ ಸ್ವಯಂ ಪ್ರೇರಣೆಯಿಂದ ಅಲ್ಲಿನ ಪೊಲೀಸರು ಕೇಸು ದಾಖಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದಾರೆ.
ನ್ಯಾಯ ಸಮ್ಮತ ದೃಷ್ಠಿಯಿಂದ ಘಟನಾ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಪಾತ್ರ ಮತ್ತು ವರ್ತನೆ ಕುರಿತು ತನಿನೆ ಕೂಡ ನಡೆಸಲು ಥೇನಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸ್ನೇಹ ಪ್ರಿಯಾ ಆದೇಶಿಸಿದ್ದಾರೆ. ಅಂದಿನ ಘಟನೆ ಸಂಬಂಧ ಅಗತ್ಯವಿದ್ದಲ್ಲಿ ಇಲಾಖಾ ನಿಯಮಾವಳಿ ಪ್ರಕಾರ ಕಟ್ಟು ನಿಟ್ಟಾದ ಆಡಳಿತಾತ್ಮಕ ಕ್ರಮವನ್ನು ಖಂಡಿತ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.ಕನ್ನಡ ಭಾವುಟಕ್ಕೆ ಅಹಿತಕರ ಘಟನೆ ನಡೆದಿಲ್ಲ:ಜ.೧೨ ರಂದು ತಮಿಳುನಾಡಿನಲ್ಲಿ ನಮಗೆ ಹಾಗೂ ಕನ್ನಡ ಭಾವುಟಕ್ಕೆ ಅಹಿತಕರ ಘಟನೆ ನಡೆದಿಲ್ಲ ಎಂದು ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಚಿಕ್ಕಮಾದಶೆಟ್ಟಿ,ಸಿದ್ದರಾಜು, ಸಿದ್ದಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಗ್ರಾಮದಿಂದ ೨೪೩ ಮಂದಿ ಶಬರಿ ಮಲೆ ಯಾತ್ರೆಗೆ ತೆರಳಿ ವಾಪಸ್ ಬರುವಾಗ ಜ.೧೨ ರ ಮಧ್ಯಾಹ್ನ ೩.೩೦ ರ ಸಮಯದಲ್ಲಿ ತಮಿಳುನಾಡಿನ ಲಾರಿಯೊಂದು ನಮ್ಮ ಜೊತೆಗೆ ತೆರಳುತ್ತಿದ್ದ ಟಿಟಿಗೆ ಡಿಕ್ಕಿ ಹೊಡೆದು ಇಂಡಿಕೇಟರ್ ಹಾನಿಯಾಯಿತು ಎಂದಿದ್ದಾರೆ.