ಕನ್ನಡಪ್ರಭ ವಾರ್ತೆ ಬೀಳಗಿ
ತಾಲೂಕಿನ ಸುನಗ ಗ್ರಾಮದಲ್ಲಿ ಕಂದಾಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಸುನಗ ಎಲ್.ಟಿ 1,ಎಲ್.ಟಿ. 2, ಕುಂದರಗಿ ಎಲ್.ಟಿ ಗ್ರಾಮಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಾರು ವರ್ಷಗಳಿಂದ ತಾಂಡಾಗಳು ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿತ್ತು. ಸದ್ಯ ಅಂತಹ ತಾಂಡಾಗಳ ನಿವಾಸಿಗಳಿಗೆ ಸರ್ಕಾರದಿಂದ ಹಕ್ಕುಪತ್ರ ನೀಡಲಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಕಂದಾಯ ಇಲಾಖೆ ನೀಡುವ ಸಲಹೆಯಂತೆ ನೋಂದಣಿ ಮಾಡಿಸಿಕೊಳ್ಳಿ ಎಂದ ಅವರು, ಎಂದ ಅವರು, ತಾಂಡಾಗಳ ಯುವಕರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಶಿಕ್ಷಣ ಪಡೆದು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಲಹೆ ನೀಡಿದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇನ್ಮುಂದೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಾಗುತ್ತೇವೆ. ಶಾಸಕರ ನಿಯಂತ್ರಣವಿಲ್ಲ ಎಂದುಕೊಳ್ಳಬೇಡಿ. ನಿಮ್ಮ ಕಾರ್ಯವೈಖರಿಯನ್ನು ಪ್ರತಿಕ್ಷಣವೂ ಗಮನಿಸುತ್ತಿರುತ್ತೇನೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಎಂದು ಪಿಡಿಒ ಡಿ.ಆರ್. ಅಡವಿ ಅವರಿಗೆ ಕಿವಿಮಾತು ಹೇಳಿದರು.
ಗ್ರಾಮದ ಮುಖಂಡ ಶಂಕರ ಕಾರಬಾರಿ ಮಾತನಾಡಿ, ಇಲ್ಲಿಯವರೆಗೆ ತಾಂಡಾಗಳಿಗೆ ಯಾವುದೆ ದಾಖಲಾತಿ ಇರಲಿಲ್ಲ. ಶಾಸಕರ ಮುತುವರ್ಜಿಯಿಂದ ಸರ್ಕಾರ ಹಕ್ಕುಪತ್ರ ವಿತರಿಸಿದ್ದು, ಸಂತಸವುಂಟು ಮಾಡಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಪವಿತ್ರಾ ದಳವಾಯಿ ಹಾಗೂ ಅನಗವಾಡಿ ಗ್ರಾಮ ಪಂಚಾಯತಿ ಸದಸ್ಯರಾದ ರಸೂಲ್ ಮುಜಾವರ, ಸಂಗಪ್ಪ ಕಂದಗಲ್ಲ, ಸಿದ್ದಪ್ಪ ದಳವಾಯಿ, ಕುಮಾರ ಲಮಾಣಿ, ರವಿ ಲಮಾಣಿ, ನಾರಾಯಣ ಲಮಾಣಿ, ಮಂಜುನಾಥ ಧರೆಗೊಂಡ, ಪಿಡಿಒ ಡಿ.ಆರ್.ಅಡವಿ ಇತರರು ಇದ್ದರು. ನನ್ನ ಅಧಿಕಾರವಧಿಯ ಉಳಿದ ಮೂರು ವರ್ಷಗಳಲ್ಲಿ ಅಧಿಕಾರಿಗಳೊಂದಿಗೆ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನುಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸಲು ಪ್ರಯತ್ನಿಸುವೆ. ಕಂದಾಯ ಇಲಾಖೆ, ತಾಪಂ ಇಒ ಅವರ ತಂಡ ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ರೇಷನ್ ಕಾರ್ಡ್, ಹಕ್ಕುಪತ್ರ , ಸೌಲಭ್ಯಗಳ ಕುರಿತಾಗಿ ಪರಿಶೀಲನೆ ಮಾಡಲಿದ್ದಾರೆ.
ಜೆ.ಟಿ. ಪಾಟೀಲ ಶಾಸಕರು ಬೀಳಗಿ