ಅದ್ಭುತ ಟೆಕ್ನಾಲಜಿಗಳು ಮನುಷ್ಯನ ಜೀವನ ಬದಲಿಸಲಿವೆ

KannadaprabhaNewsNetwork |  
Published : Sep 23, 2025, 01:03 AM IST
50 | Kannada Prabha

ಸಾರಾಂಶ

ಮುಂದಿನ ದಿನಗಳಲ್ಲಿ ಚಾಲಕನಿಲ್ಲದ ಸ್ವಯಂಚಾಲಿತ ವಾಹನಗಳು ಬರಲಿವೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಂದಿನ 10-15 ವರ್ಷಗಳಲ್ಲಿ ನ್ಯಾನೊ ಟೆಕ್ನಾಲಜಿ, ಬಯೊಟೆಕ್ನಾಲಜಿ, ಅರ್ಟಿಫಿಷಿಯಲ್ ಟೆಕ್ನಾಲಜಿ ಎಂಬ ಮೂರು ಅದ್ಭುತ ಟೆಕ್ನಾಲಜಿಗಳು ಮನುಷ್ಯನ ಜೀವನವನ್ನು ಬದಲಿಸಲಿವೆ ಎಂದು ಧಾರವಾಡ ಐಐಟಿಯ ಹಿರಿಯ ವಿಜ್ಞಾನಿ ಡಾ.ಎಸ್.ಎಂ. ಶಿವಪ್ರಸಾದ್ ಹೇಳಿದರು.

ತಾಲೂಕಿನ ತಾಂಡವಪುರ ಎಂಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಚಾಲಕನಿಲ್ಲದ ಸ್ವಯಂಚಾಲಿತ ವಾಹನಗಳು ಬರಲಿವೆ, ಬಯೊಟೆಕ್ನಾಲಜಿ ಮುಂದುವರೆದು ಮನುಷ್ಯನ ಆಯಸ್ಸನ್ನು ಹೆಚ್ಚಿಸಿ ಸಾವನ್ನು ಮುಂದೂಡಬಹುದಾಗಿದೆ, ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳಿಂದಾಗಿ ಮುಂದಿನ ಜೀವನಮ ಅಧ್ಬುತಗಳನ್ನು ಸೃಷ್ಠಿಸಲಿದೆ, ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಕಲಿಯಬೇಕು, ವಿದ್ಯಾರ್ಥಿಗಳು ತಮ್ಮ ಜೀವನದ ನಾಲ್ಕು ವರ್ಷಗಳಲ್ಲಿ ಕಲಿಯಲು ಮುತುವರ್ಜಿ ವಹಿಸಿದರೆ ವಿತಂತ್ರಜ್ಞಾನದ ಮೂಲಕ ವಿಶ್ವದ ಬದಲಾವಣೆಗೆ ಕಾರಣರಾಗಲಿದ್ದಾರೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣಮಠದ ಸರ್ವಜಯನಂದಜೀ ಸ್ವಾಮೀಜಿ ಮಾತನಾಡಿ, ಇಂದಿನ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ವ್ಯಾಪರೀಕರಣಗೊಂಡಿದೆ, ಉಪನ್ಯಾಸಕರೆ ಕೂಡಿ ಕಟ್ಟಿರುವ ಎಂಐಟಿ ಕಾಲೇಜು ಅಪರೂಪದ ಶಿಸ್ತು ,ಸೇವಾ ಮನೋಭಾವನೆಯನ್ನು ಹೊಂದಿದೆ,ಇಲ್ಲಿನ ಉಪನ್ಯಾಸಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ತುಡಿತ ಹೊಂದಿದ್ದಾರೆ, ವಿದ್ಯಾರ್ಥಿಗಳು ಓದಿನ ಜೊತೆಗೆ ನಮ್ಮ ಭಾರತೀಯ ಹೃದಯದಲ್ಲಿಟ್ಟು ಪೋಷಿಸಬೇಕು, ತನ್ಮೂಲಕ ದೇಶದ ಸಂಸ್ಕೃತಿಯನ್ನು ಬೆಳಗಬೇಕು ಎಂದು ಹೇಳಿದರು.

ಪ್ರಾಂಶುಪಾಲ ವೈ.ಟಿ. ಕೃಷ್ಣೇಗೌಡ ಮಾತನಾಡಿ, ಕಾಲೇಜು ನಮ್ಮ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಟೈ-ಮೈಸೂರು ಸಂಸ್ಥೆಯ ಸಹಯೋಗದೊಂದಿಗೆ ಸ್ವಂತವಾಗಿ ಉದ್ಯಮ ಸ್ಥಾಪಿಸಲು ತರಬೇತಿ ಕಾರ್ಯಕ್ರಮ ರೂಪಿಸಿದೆ, 50 ಮಂದಿ ವಿದ್ಯಾರ್ಥಿಗಳನ್ನು ಮದ್ರಾಸ್ ನ ಐಐಟಿಗೆ ಕಳುಹಿಸಿ ತರಬೇತಿ ನೀಡಿಸುತ್ತಿದ್ದೇವೆ, ಕಾಲೇಜಿನ 7 ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳ ಅರ್ದ ಫೀಜನ್ನು ಹಿಂತಿರುಗಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ, ವಿದ್ಯಾರ್ಥಿಗಳು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಪೂರೈಸಿ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.ಪಿಎಚ್.ಡಿ ಪದವಿ ಪಡೆದ ಉಪನ್ಯಾಸಕರು ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಡಾ.ಬಿ.ಜಿ. ನರೇಶ್ ಕುಮಾರ್, ಉಪಾಧ್ಯಕ್ಷ ಡಾ.ಜಿ. ಹೇಮಂತ್ ಕುಮಾರ್, ಡಿ.ಎಸ್. ಗುರು, ಎಸ್. ಮುರುಳಿ, ಟಿ. ವಾಸುದೇವ್, ಅನಂತ್ ಆರ್. ಕೊಪ್ಪಾರ್, ಡಾ.ಎಚ್.ಕೆ. ಚೇತನ್, ಪ್ರೊ. ಸಲಾಮತ್ ಇದ್ದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ