ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿ ಸಿ.ಸಿ.ಪಾಂಡ್ 15 ರಿಂದ 20 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, 5-6 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಇದರಿಂದ ಕಾಡಿನಲ್ಲಿರುವ ಮೂಕ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆಯಾಗಲಿದೆ.
ಚಿಂಚೋಳಿ ವನ್ಯಜೀವಿ ವಲಯದ ಶೇರಿಬಿಕನಳ್ಳಿ, ಯಾಕತಪೂರ, ಸೋಮಲಿಂಗದಳ್ಳಿ ಹಾಗೂ ನೇಚರ್ಲಾ ಅರಣ್ಯ ಪ್ರದೇಶದಲ್ಲಿ ತಲಾ 2 ಮತ್ತು ಅಂತಾವರಂ ಹಾಗೂ ಬುರುಗದೊಡ್ಡಿ ವಲಯದಲ್ಲಿ ತಲಾ 1 ಸೇರಿ ಒಟ್ಟು 10 ಸಿ.ಸಿ.ಪಾಂಡ್ ನಿರ್ಮಿಸಲಾಗಿದೆ.ಸಿ.ಸಿ.ಪಾಂಡ್ ಗೆ ಬೇಸಿಗೆ ಅವಧಿಯಲ್ಲಿ ನಿಯಮಿತವಾಗಿ ನೀರು ಪೂರೈಕೆ ಮಾಡುವ ಮೂಲಕ ಕಾಡು ಪ್ರಾಣಿ- ಪಕ್ಷಿಗಳ ನೀರಿನ ದಾಹ ನೀಗಿಸಲು ಇಲಾಖೆ ಮುಂದಾಗಿದೆ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಹೇಳಿದ್ದಾರೆ.
ಇಲ್ಲಿನ ವನ್ಯಜೀವಿಗಳ ವಲಯದಲ್ಲಿ ನರಿ, ತೋಳ, ಜಿಂಕೆ, ತರಹೇವಾರಿ ಹಾವುಗಳು, ನಾನಾ ರೀತಿಯ ಪಕ್ಷಿಗು, ನೀಲ್‌ಗಾಯ್‌ನಂತಹ ಅಪರೂಪದ ಪ್ರಾಣಿಗಳು ಇಲ್ಲಿವೆ. ಹೀಗಾಗಿ ಈ ವಲಯದಲ್ಲಿನ ವನ್ಯಜೀವಿಗಳ ರಕ್ಷಣೆಗೆ ಇಲಾಖೆ ತೋರುತ್ತಿರುವ ಮುತುವರ್ತಿ ಗಮನ ಸೆಳೆದಿದೆ.