ದಾವಣಗೆರೆ ಹಸಿರೀಕರಣಕ್ಕೆ ಟ್ಯಾಪ್ ಆನ್ ಕಾರ್ಡ್ಸ್ ಯೋಜನೆ ಪೂರಕ: ಡಾ.ಪ್ರಭಾ

KannadaprabhaNewsNetwork | Published : Oct 19, 2024 12:29 AM

ಸಾರಾಂಶ

ಕ್ಲೌಡ್ ಸ್ಟೇಜ್ ಸಂಸ್ಥೆಯ ಟ್ಯಾಪ್ ಆನ್ ಕಾರ್ಡ್ಸ್ ಯೋಜನೆಯಡಿ ಭಾರತ ದೇಶಾದ್ಯಾಂತ 100 ಕೋಟಿ ಸಸಿ ನೆಡುವ ಮಹತ್ವದ ಯೋಜನೆಗೆ ಹಾಗೂ ವೈಯಕ್ತಿಕ ವಿವರ ಮಾಹಿತಿ ಹೊಂದಿರುವ ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ ಅನ್ನು ಬುಧವಾರ ಬಿಡುಗಡೆ ಮಾಡಿ, ಸಸಿ ನೆಡುವ ಯೋಜನೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

- ದೇಶಾದ್ಯಂತ ನೂರು ಕೋಟಿ ಸಸಿ ನೆಡುವ ಯೋಜನೆಗೆ ಚಾಲನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಕ್ಲೌಡ್ ಸ್ಟೇಜ್ ಸಂಸ್ಥೆಯ ಟ್ಯಾಪ್ ಆನ್ ಕಾರ್ಡ್ಸ್ ಯೋಜನೆಯಡಿ ಭಾರತ ದೇಶಾದ್ಯಾಂತ 100 ಕೋಟಿ ಸಸಿ ನೆಡುವ ಮಹತ್ವದ ಯೋಜನೆಗೆ ಹಾಗೂ ವೈಯಕ್ತಿಕ ವಿವರ ಮಾಹಿತಿ ಹೊಂದಿರುವ ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ ಅನ್ನು ಬುಧವಾರ ಬಿಡುಗಡೆ ಮಾಡಿ, ಸಸಿ ನೆಡುವ ಯೋಜನೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.

ಈ ವೇಳೆ ಸಂಸದೆ ಡಾ. ಪ್ರಭಾ ಮಾತನಾಡಿ, ಒಂದು ಟ್ಯಾಪ್ ಆನ್ ಕಾರ್ಡ್ ಪಡೆದರೆ ಅದರ ಜೊತೆ ಒಂದು ಸಸಿ ನೆಟ್ಟು ಪೋಷಣೆ ಮಾಡುವುದು. ಜಾಗತಿಕ ಪರಿಸರ ಸಂರಕ್ಷಣೆ ಮಹತ್ವದ ಜವಾಬ್ದಾರಿಯನ್ನು ಕ್ಲೌಡ್ ಸ್ಟೇಜ್ ಸಂಸ್ಥೆ ತೆಗೆದುಕೊಂಡಿರುವುದು ಸಾಮಾನ್ಯ ವಿಷಯವಲ್ಲ. ಇದೊಂದು ದೂರದೃಷ್ಠಿಯ ಮಹತ್ವದ ಯೋಜನೆಯಾಗಿದೆ. ದಾವಣಗೆರೆ ಜಿಲ್ಲೆಯನ್ನು ಹಸಿರೀಕರಣ ಮಾಡುವ ನನ್ನ ಕನಸಿಗೆ ಇದು ಒಂದು ಪೂರಕ ಕಾರ್ಯಕ್ರಮವಾಗಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಕ್ಲೌಡ್ ಸ್ಟೇಜ್ ನಿರ್ದೇಶಕಿ ಕಾವ್ಯಶ್ರೀ ಮಾತನಾಡಿ, ಇತ್ತೀಚಿಗೆ ಅರಣ್ಯ ನಾಶವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕಾಡನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆ ನಮ್ಮ ಸಂಸ್ಥೆ ವತಿಯಿಂದ ಟ್ಯಾಪ್ ಆನ್ ಕಾರ್ಡ್ಸ್ ಪರಿಚಯಿಸುವ ಜೊತೆಗೆ 100 ಕೋಟಿ ಸಸಿ ನೆಡುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದರು.

ಸಂಸ್ಥೆ ನಿರ್ದೇಶಕ ಸಚಿನ್ ಮಾತನಾಡಿ, ಈ ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ ಪಡೆದರೆ ನಾವೇ ಒಂದು ಸಸಿ ನೆಟ್ಟು ಅದರ ಪೋಷಣೆಯನ್ನು ಮಾಡುತ್ತೇವೆ. ಸಸಿ ನೆಡುವ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಜೊತೆ ಚರ್ಚೆ ಕೂಡ ಮಾಡಲಾಗಿದೆ. ಈ ಮೂಲಕ ಭಾರತವನ್ನು ಹಸಿರೀಕರಣ ಮಾಡುತ್ತೇವೆ. ತಾಪಮಾನ ವೈಪರೀತ್ಯದಿಂದ, ಪರಿಸರ ನಾಶದಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಕಾರಣ ಟ್ಯಾಪ್ ಆನ್ ಕಾರ್ಡ್ಸ್ ಮೂಲಕ ಮರುಅರಣ್ಯೀಕರಣ ಮಾಡುವುದು ನಮ್ಮ ಸಂಸ್ಥೆ ಉದ್ದೇಶವಾಗಿದೆ. ಇದರ ಯಶಸ್ವಿಗೆ ಸಂಘ ಸಂಸ್ಥೆ ಸೇರಿದಂತೆ ಎಲ್ಲರೂ ಕೈ ಜೋಡಿಸಬಹುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಲೌಡ್ ಸ್ಟೇಜ್‌ ನಿರ್ದೇಶಕಿ ಶ್ರೀದೇವಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

- - -

-16ಕೆಡಿವಿಜಿ35ಃ:

ದಾವಣಗೆರೆಯಲ್ಲಿ ಕ್ಲೌಡ್ ಸ್ಟೇಜ್ ಸಂಸ್ಥೆಯ ಟ್ಯಾಪ್ ಆನ್ ಡಿಜಿಟಲ್ ಕಾರ್ಡ್ಸ್ ಅನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು.

Share this article