ಕಾಂಗ್ರೆಸ್‌ಗೆ ಭಾರಿ ಮುಖಭಂಗ । ಮಾಜಿ ಶಾಸಕ ಶ್ರೀನಿವಾಸಗೌಡಗೆ ಜಯ
ಕೋಲಾರ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟವು ಜಯ ಸಾಧಿಸಿದೆ.ಕನ್ನಡಪ್ರಭ ವಾರ್ತೆ ಕೋಲಾರ
ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯ ತಾಲೀಮು ಎಂದೇ ಭಾವಿಸಲಾಗಿದ್ದ ಕೋಲಾರ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಮೈತ್ರಿಕೂಟವು ಜಯ ಸಾಧಿಸಿದೆ.ಟಿಎಪಿಸಿಎಂಎಸ್ ಮೇಲೆ ಕಾಂಗ್ರೆಸ್ ಪಕ್ಷದ ಹಿಡಿತ ಸಾಧಿಸಲು ಕಳೆದ ೧೦-೧೫ ದಿನಗಳಿಂದ ಕಸರತ್ತು ನಡೆಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಎಂ.ಎಲ್.ಅನಿಲ್‌ಕುಮಾರ್ ಮುಖಭಂಗ ಅನುಭವಿಸಿದ್ದಾರೆ.
ಕಳೆದ ೪೦ ವರ್ಷದಿಂದ ಅವಿರೋಧ ಆಯ್ಕೆಯಾಗುತ್ತಿದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುವಂತಾಗಿ ೧೨ ಮತ ಪಡೆದು ಜಯ ಸಾಧಿಸಿದ್ದಾರೆ.
ಎ ವರ್ಗದ ಸೊಸೈಟಿಗಳ ಕ್ಷೇತ್ರದ ೪ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಶ್ರೀನಿವಾಸಗೌಡ ಹಾಗೂ ಇತರ ಮೂವರು ಜಯ ಸಾಧಿಸಿದ್ದಾರೆ.
ಇದಕ್ಕೂ ಮೊದಲು ಮೂರು ಸ್ಥಾನಗಳಿಗೆ ನಡೆದಿದ್ದ ಅವಿರೋಧ ಆಯ್ಕೆಯಲ್ಲಿ ಇಬ್ಬರು ಮೈತ್ರಿಕೂಟ ಮತ್ತು ಒಬ್ಬ ಕಾಂಗ್ರೆಸ್ ಅಭ್ಯರ್ಥಿ ಚುನಾಯಿತರಾಗಿದ್ದಾರೆ. ಹೀಗಾಗಿ ಮೈತ್ರಿಕೂಟಕ್ಕೆ ೯ ಮತ್ತು ಕಾಂಗ್ರೆಸ್‌ಗೆ ೫ ಸ್ಥಾನಗಳು ದಕ್ಕಿವೆ.ಅವಿರೋಧ ಆಯ್ಕೆಯಾದವರುಬಿ ವರ್ಗದ ಸಂಸ್ಥೆಗಳ ಮತಕ್ಷೇತ್ರದಲ್ಲಿ ಬಿಸಿ-ಬಿಯಿಂದ ನಿರ್ಗಮಿತ ಅಧ್ಯಕ್ಷ ಕಾಂಗ್ರೆಸ್‌ನ ನಾಗನಾಳ ಸೋಮಣ್ಣ, ಬಿಸಿ-ಎದಿಂದ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಂಬಿಹಳ್ಳಿ ಮುನಿಯಪ್ಪ ಮತ್ತು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಕ್ಕೆ ಬೆಳಮಾರನಹಳ್ಳಿ ಕೆ.ವಿ.ಸುರೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್‌ಗೆ ಸಂಸದರ ಭೇಟಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಜಯಬೇರಿಯ ಸುದ್ದಿ ತಿಳಿಯುತ್ತಿದ್ದಂತೆ ಭಾನುವಾರ ರಾತ್ರಿ ೯ ಗಂಟೆ ವೇಳೆಗೆ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಇದೇ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಒಳಗೆ ಕಾಲಿರಿಸಿದರು. ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರೊಂದಿಗೆ ವಿಜಯೋತ್ಸವದ ಫೋಟೋ ಸೆಷನ್‌ಗಾಗಿ ಮುನಿಸ್ವಾಮಿ ಡಿಸಿಸಿ ಬ್ಯಾಂಕ್‌ಗೆ ಬಂದರು.
೮ಕೆಎಲ್‌ಆರ್-೫.......ಕೋಲಾರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ವಿಜಯಿಗಳ ಜತೆಗೆ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಸಂಸದ ಮುನಿಸ್ವಾಮಿ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ವಿಜಯೋತ್ಸವ ಆಚರಿಸಿದರು.