ಟಿಎಪಿಸಿಎಂಎಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

KannadaprabhaNewsNetwork |  
Published : Oct 19, 2025, 01:00 AM IST
18ಎಚ್ಎಸ್ಎನ್13 : ಚನ್ನರಾಯಪಟ್ಟಣ  ತಾಲೂಕು ಟಿ ಎಪಿಎಂಎಸ್ ಚುನಾವಣೆ ಅಕ್ಟೋಬರ್ 19ರಂದು ನಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ  ಅಭ್ಯರ್ಥಿಗಳು  ಬಾಗೂರು  ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣ ತಾಲೂಕು ಟಿಎಪಿಸಿಎಂಎಸ್ ನಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಹಾಗೂ ಇತರರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಲಿ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್ ಮಾತನಾಡಿ, ಹಿಂದೆ ನಷ್ಟದಲ್ಲಿದ್ದ ಟಿಎಪಿಸಿಎಂಎಸ್ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿಎನ್ ಮಂಜುನಾಥ್ ಅವರ ಸಹಕಾರದಿಂದ ಇಂದು ಪ್ರಸ್ತುತ ಲಾಭದಲ್ಲಿದೆ. ಮುಂಬರುವ ದಿನಗಳಲ್ಲೂ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲು ಪುನಃ ಜೆಡಿಎಸ್ ಪಕ್ಷದ ನಿರ್ದೇಶಕರು ಆಡಳಿತ ಮಂಡಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡರೆ ಸಾಧ್ಯವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗೂರು

ಇಂದು(ಭಾನುವಾರ) ನಡೆಯುವ ಚನ್ನರಾಯಪಟ್ಟಣ ತಾಲೂಕು ಟಿಎಪಿಸಿಎಂಎಸ್ ನಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.ಈಗಾಗಲೇ 14 ಸ್ಥಾನಗಳ ಪೈಕಿ 7 ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದೆ. ಇನ್ನುಳಿದ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಹಾಗೂ ಇತರರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಲಿ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್ ಮಾತನಾಡಿ, ಹಿಂದೆ ನಷ್ಟದಲ್ಲಿದ್ದ ಟಿಎಪಿಸಿಎಂಎಸ್ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿಎನ್ ಮಂಜುನಾಥ್ ಅವರ ಸಹಕಾರದಿಂದ ಇಂದು ಪ್ರಸ್ತುತ ಲಾಭದಲ್ಲಿದೆ. ಮುಂಬರುವ ದಿನಗಳಲ್ಲೂ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲು ಪುನಃ ಜೆಡಿಎಸ್ ಪಕ್ಷದ ನಿರ್ದೇಶಕರು ಆಡಳಿತ ಮಂಡಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡರೆ ಸಾಧ್ಯವಾಗುತ್ತದೆ ಎಂದರು.ಜೆಡಿಎಸ್ ಯುವ ಮುಖಂಡ ಮುರಗೂರು ಅನಿಲ್ ಕುಮಾರ್ ಮಾತನಾಡಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಸಂಘದ ಮೂಲಕ ಪಡಿತರ ಧಾನ್ಯ ವಿತರಣೆ ಹಾಗೂ ರೈತರಿಗೆ ಯೂರಿಯಾ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಉತ್ತಮ ಆಡಳಿತ ದೃಷ್ಟಿಯಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಮರಗೂರು ಅನಿಲ್ ಕುಮಾರ್, ನಂಜುಂಡೇಗೌಡ, ಬಿಸಿಎಂ ಬಿ ಕ್ಷೇತ್ರದಿಂದ ಕುಂಬಾರ ಹಳ್ಳಿ ರಮೇಶ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಮಮತಾ ಬೋರ್ವೆಲ್ ಜಯಣ್ಣ, ಎಂ ತಾರಾಮಣಿ ಸಿ ಎನ್ ಆನಂದ್, ಬಿಸಿಎಂಎ ಕ್ಷೇತ್ರದಿಂದ ಮೀಸೆ ಜಗದೀಶ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕುಂಬಾರಹಳ್ಳಿ ಕೆ ಆರ್‌ ರವಿಕುಮಾರ್‌, ಉಳಿದಿರುವ 7 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿಹೆಚ್ ಶಿವಣ್ಣ, ಬಾಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೇಗೌಡ, ಟಿಎಪಿಸಿಎಂಎಸ್ ನೂತನ ನಿರ್ದೇಶಕರುಗಳಾದ ಪರಮ ಕೃಷ್ಣೆಗೌಡ, ತೋಟಿ ನಾಗರಾಜ್, ಶಿವಶಂಕರ ಕುಂಟೆ, ರಾಮಚಂದ್ರು, ಬೋರ್ವೆಲ್ ಜಯಣ್ಣ , ಮುಖಂಡರಾದ ಮನು, ಚಂದ್ರೇಗೌಡ, ಕಾಂತರಾಜ್, ಗೋವಿನಕೆರೆ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ