ಈ ಸರ್ಕಾರಕ್ಕೆ ಕಿವಿಯೂ ಇಲ್ಲ ಕಣ್ಣೂ ಇಲ್ಲ

KannadaprabhaNewsNetwork |  
Published : Oct 19, 2025, 01:00 AM IST
18ಎಚ್ಎಸ್ಎನ್20 :  | Kannada Prabha

ಸಾರಾಂಶ

ಈ ಕಾಂಗ್ರೆಸ್ ಸರಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲದಂತಾಗಿದ್ದು, ಒಂದು ರೀತಿ ಇದು ಬಾಯಿಬಡುಕ ಸರಕಾರವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಹುಟ್ಟುಕಾಣದ, ಹುಟ್ಟುಕಿವುಡರಿಗೆ ಅಧಿಕಾರ ಕೊಟ್ಟಿದ್ದರೂ ಜನರ ಕಷ್ಟ ಗೊತ್ತಾಗುತ್ತಿತ್ತು. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನರ ಸಮಸ್ಯೆ ಬಿಟ್ಟು ಮೀಡಿಯಾ ಮುಂದೆ ಬಂದು ಸಂಬಂಧವಿಲ್ಲದ ವಿಷಯಗಳಲ್ಲಿ ಬಾಯಿ ಬಡಿದುಕೊಳ್ಳುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಕಾಂಗ್ರೆಸ್ ಸರಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲದಂತಾಗಿದ್ದು, ಒಂದು ರೀತಿ ಇದು ಬಾಯಿಬಡುಕ ಸರಕಾರವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಅಧಿದೇವತೆ ಹಾಸನಾಂಬ ದೇವಿ ದರ್ಶನವನ್ನು ಕುಟುಂಬ ಸಮೇತರಾಗಿ ದೇವಿ ದರ್ಶನ ಪಡೆದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಶೈಲಿಯನ್ನು ಕಟುವಾಗಿ ಟೀಕಿಸಿದರು. ಈ ಸರ್ಕಾರದಲ್ಲಿ ಅಭಿವೃದ್ಧಿ ಎನ್ನುವುದು ಕೇವಲ ಮರೀಚಿಕೆ. ಎಲ್ಲ ರಂಗಗಳಲ್ಲೂ ವೈಫಲ್ಯ ಕಂಡ ಸರ್ಕಾರ ಇದು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಅನ್ಯ ವಿಷಯಗಳಲ್ಲಿ ತಲೆಕೆಡಿಸಿಕೊಂಡಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನೆಲೆಗೆ ಬಂದಿಲ್ಲ. ನೂರಾರು ಸಮಸ್ಯೆಗಳ ನಡುವೆಯೂ ಸರ್ಕಾರ ಕಿವಿಗೊಡದೆ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹುಟ್ಟುಕಾಣದ, ಹುಟ್ಟುಕಿವುಡರಿಗೆ ಅಧಿಕಾರ ಕೊಟ್ಟಿದ್ದರೂ ಜನರ ಕಷ್ಟ ಗೊತ್ತಾಗುತ್ತಿತ್ತು. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನರ ಸಮಸ್ಯೆ ಬಿಟ್ಟು ಮೀಡಿಯಾ ಮುಂದೆ ಬಂದು ಸಂಬಂಧವಿಲ್ಲದ ವಿಷಯಗಳಲ್ಲಿ ಬಾಯಿ ಬಡಿದುಕೊಳ್ಳುತ್ತದೆ ಎಂದರು.

ಸರ್ಕಾರಿ ನೌಕರರ ಆತ್ಮಹತ್ಯೆ ಪ್ರಕರಣಗಳ ವಿಷಯದಲ್ಲಿಯೂ ಅವರು ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಇತ್ತಿಚಿನ ಚಾಮರಾಜನಗರ ಘಟನೆಯು ಸರ್ಕಾರದ ಮಾನವೀಯತೆ ಇಲ್ಲದ ಆಡಳಿತದ ಸಾಕ್ಷಿಯಾಗಿದೆ. ೧೮ ಕ್ಕೂ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ ಎಂದರು. ಗುತ್ತಿಗೆದಾರರ ಪಾವತಿ ಸಮಸ್ಯೆ ಕುರಿತೂ ಆಕ್ರೋಶ ವ್ಯಕ್ತಪಡಿಸಿದ ಅವರು, ಗುತ್ತಿಗೆದಾರರು ೩೩ ಸಾವಿರ ಕೋಟಿ ಬಾಕಿ ಇದೆ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಸರ್ಕಾರಕ್ಕೆ ಗಡುವು ಕೊಡುವ ಪರಿಸ್ಥಿತಿ ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕಂಡಿದೆ. ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದಲ್ಲಿ ಎಂದಿಗೂ ನೋಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದು ಅಭಿವೃದ್ಧಿ ಮರೆತ, ದಲಿತರ ವಿರೋಧಿ, ೮೦% ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ. ವೈಫಲ್ಯಗಳನ್ನು ಮರೆಮಾಚಲು ಅಪ್ರಸ್ತುತ ವಿಷಯಗಳನ್ನು ಮುಂದಿಟ್ಟು ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.ಪ್ರೀಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿ, ಕಲ್ಬುರ್ಗಿಯಲ್ಲಿ ಜನರು ಕೂಲಿ ಕೆಲಸವಿಲ್ಲದೆ ವಲಸೆ ಹೋಗುತ್ತಿದ್ದಾರೆ. ನಿಮ್ಮ ಆದ್ಯತೆ ಏನು? ನಿಮ್ಮ ಜಿಲ್ಲೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನಕ್ಕಿಳಿದಿದೆ? ಅದಕ್ಕೆ ನಿಮ್ಮ ಕೊಡುಗೆ ಏನು? ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಿಧಿಗಳು ಅನುಷ್ಠಾನವಾಗಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆ ಕೋಮಾ ಸ್ಥಿತಿಯಲ್ಲಿದೆ. ಒಂದು ರುಪಾಯಿ ಸಹ ಬಿಡುಗಡೆ ಆಗಿಲ್ಲ ಎಂದು ಪ್ರಶ್ನಿಸಿದರು. ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಅವರು ಹೇಳಿದರು, ಆರ್‌ಎಸ್‌ಎಸ್‌ನ ತತ್ವ ತಿಳಿಯದವರು ಅಪ್ರಬುದ್ಧತೆಯಿಂದ, ಮೂರ್ಖತನದಿಂದ ಮಾತಾಡುತ್ತಿದ್ದಾರೆ. ರುಚಿಯೇ ಗೊತ್ತಿಲ್ಲದವರು ಅದರ ಶಕ್ತಿಯನ್ನ ಅರಿಯಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆಯಂತಹ ಅಪ್ರಬುದ್ಧರಿಗೆ ಪ್ರತಿಕ್ರಿಯೆ ನೀಡುವುದಕ್ಕೂ ಅರ್ಥವಿಲ್ಲ ಎಂದು ವ್ಯಂಗ್ಯವಾಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ