ಕನ್ನಡಪ್ರಭ ವಾರ್ತೆ ಭದ್ರಾವತಿ
ಮಹೋತ್ಸವಕ್ಕೆ ಆಗಮಿಸಿದ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಂತರ ನಡೆದ ಆರೋಗ್ಯ ಮತ್ತು ಸಮಾಜ ವಿಷಯ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯ, ಮಕ್ಕಳ ತಜ್ಞ, ಡಾ.ಧನಂಜಯ ಸರ್ಜಿ, ಭದ್ರಾವತಿಯ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ನಮ್ಮ ಜೀವನದ ಮೌಲ್ಯಗಳನ್ನು ನೆನಪಿಸುವ ಒಂದು ಮಹತ್ವದ ಸಾಮಾಜಿಕ ಸಂದರ್ಭವೂ ಹೌದು. ತರಳಬಾಳು ಶ್ರೀಗಳು ಕರ್ನಾಟಕದ ಆಧುನಿಕ ಭಗೀರಥರಾಗಿದ್ದಾರೆ ಎಂದರು.ಆರೋಗ್ಯವಂತ ವ್ಯಕ್ತಿಯಿಂದಲೇ ಆರೋಗ್ಯವಂತ ಸಮಾಜ, ಸುಸಂಸ್ಕೃತ ರಾಷ್ಟ್ರ ಸಾಧ್ಯ, ಮಾನವ ಜೀವನದಲ್ಲಿ ಆರೋಗ್ಯವೆಂಬುದು ಕೇವಲ ದೇಹದ ಸೌಖ್ಯವಲ್ಲ. ಅದು ಮನಸ್ಸಿನ ಸಮತೋಲನ, ಸಮಾಜದ ಒಳಿತಿನ ಚಿಂತನೆ ಮತ್ತು ಸಂಸ್ಕಾರದ ಪ್ರತಿಬಿಂಬವಾಗಿದೆ. ಆರೋಗ್ಯವನ್ನು ವ್ಯಕ್ತಿಗತ ಸಮಸ್ಯೆಯಾಗಿ ಮಾತ್ರ ನೋಡದೆ ಸಮಾಜದ ಒಟ್ಟಾರೆ ಹೊಣೆಗಾರಿಕೆಯಾಗಿ ನೋಡಬೇಕಿದೆ ಎಂದರು.
ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ, ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಮುಖ್ಯಸ್ಥ ಮತ್ತು ಲೀಡ್ ಲನ್ಸಲ್ಟೆಂಟ್ ಡಾ.ಸಿ.ಎನ್.ಪಾಟೀಲ್ ಮಾತನಾಡಿದರು.
ಸಿರಿಗೆರೆಯ ಅಕ್ಕನ ಬಳಗದಿಂದ ವಚನಗೀತೆ, ತೋಟಪ್ಪ ಉತ್ತಂಗಿ ಅವರಿಂದ ಸಂಗೀತ ಕಾರ್ಯಕ್ರಮ, ತರಳಬಾಳು ಸ್ಪೋರ್ಟ್ಸ್ ಅಕಾಡೆಮಿಯಿಂದ ಯೋಗಾಸನ, ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನವರಿಂದ ಕಿರು ನಾಟಕ, ನಲ್ಲೂರು ತರಳಬಾಳು ಶಾಲೆಯಿಂದ ವಚನ ನೃತ್ಯ, ಶ್ರೀಮತಿ ಕಲ್ಲಮ್ಮ ಪ್ರೌಢಶಾಲೆಯಿಂದ ಸೋಲಿಗರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಭದ್ರಾವತಿ: ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್ ಆವರಣದಲ್ಲಿ ಆಯೋಜಿಸಲಾಗಿರುವ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠ ತರಳಬಾಳು ಹುಣ್ಣಿಮೆ ಮಹೋತ್ಸವದ ೨ನೇ ದಿನ ಭಾನುವಾರ ಕಬಡ್ಡಿ ಪಂದ್ಯಾವಳಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸ್ಪರ್ಧೆ ಆಯೋಜಿಸಲಾಗಿತ್ತು.
ಭಜನೆ: