ತರೀಕೆರೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿ ಸಂಪೂರ್ಣ ಅಭಿವೃದ್ಧಿ: ಕೇಂದ್ರ ರೈಲ್ವೆ ಸಚಿವ ಸೋಮಣ್ಣ

KannadaprabhaNewsNetwork |  
Published : Sep 27, 2024, 01:18 AM IST
ಗತಿಶಕ್ತಿ ಯೋಜನೆಯಲ್ಲಿ ತರೀಕೆರೆ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿ ಸಂಪೂರ್ಣ ಅಭಿವೃದ್ದಿಃ ಕೇಂದ್ರ  ರೈಲ್ವೆ ಸಚಿವ ಸೋಮಣ್ಣ | Kannada Prabha

ಸಾರಾಂಶ

ತರೀಕೆರೆ, ಗತಿಶಕ್ತಿ ಯೋಜನೆಯಲ್ಲಿ ತರೀಕೆರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಗತಿಶಕ್ತಿ ಯೋಜನೆಯಲ್ಲಿ ತರೀಕೆರೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಹೇಳಿದ್ದಾರೆ.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಮತ್ತು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಮನವಿ ಸ್ವೀಕರಿಸಿ ಮಾತ ನಾಡಿದರು. ತರೀಕೆರೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷಣಾ ಕೊಠಡಿ ಇತ್ಯಾದಿ ಅನುಕೂಲ ಕಲ್ಪಿಸಲು ₹ 2 ಕೋಟಿ ಯಿಂದ 24 ಕೋಟಿ ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿಗೆ ಕ್ರೀಯಾಯೋಜನೆ ತಯಾರಿಸಲಾಗುವುದು. ನಂತರ ಶೀಘ್ರ ರೈಲು ನಿಲ್ದಾಣದ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್ ಹಾಗೂ ಸಾರ್ವಜನಿಕರು ಸಮೀಪದ ಉಪ್ಪಾರ ಬಸವನ ಹಳ್ಳಿ ಗ್ರಾಮಕ್ಕೆ ಸಂಚಾರ ವ್ಯವಸ್ಥೆ ಕುರಿತು ಸಚಿವರ ಗಮನಕ್ಕೆ ತಂದಾಗ ಸಚಿವ ಸೋಮಣ್ಣ, ಪಟ್ಟಣ ಸಮೀಪದ ಉಪ್ಪಾರ ಬಸವನಹಳ್ಳಿ ಗ್ರಾಮಕ್ಕೆ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಕೆಳ ಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸ ಲಾಗುವುದು ಎಂದು ತಿಳಿಸಿದರು.ಗತಿಶಕ್ತಿ ಯೋಜನೆಯಡಿ ₹2000 ಕೋಟಿ ಗಳಲ್ಲಿ ರಾಜ್ಯದಲ್ಲಿ 70 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಧ್ಯಕ್ಷ ಎ.ಎಸ್.ಸಾಯಿಕುಮಾರ್, ಕಾರ್ಯದರ್ಶಿ ಮುರುಳಿ ಮತ್ತು ಪದಾಧಿಕಾರಿಗಳು ತರೀಕೆರೆ ರೈಲ್ವೆ ನಿಲ್ದಾಣ ಅಭಿವೃದ್ಧಿ, ಚಿಕ್ಕಾನವಂಗಲ, ಜಲದೀಹಳ್ಳಿ ಅತ್ತಿಗಟ್ಟೆ ಸಿದ್ದಾಪುರ, ಕೆಂಚಾಪುರ ಗ್ರಾಮಗಳ ಗ್ರಾಮಸ್ಥರು ಏತ ನೀರಾವರಿ ಯೋಜನೆ ಮೂಲಕ ವಿವಿಧ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವಂತೆ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಎಚ್. ಮಹೇಂದ್ರ, ಮುಖಂಡರಾದ ಶಂಭೈನೂರು ಆನಂದಪ್ಪ, ಟಿ.ಎಸ್.ಯಶೋಧರಮೂರ್ತಿ, ಮಂಜುನಾಥ್, ಸಿ.ಎಂ.ರಾಜಪ್ಪ, ಬುಜೇಂದ್ರ, ಡಾ.ಮಲ್ಲೇಶಪ್ಪ, ಕೆ.ಸಿ.ಶಿವಮೂರ್ತಿ, ಸಿ.ಎಂ.ಪರಮೇಶ್ವರಪ್ಪ, ವಿಶ್ವನಾಥ್, ನವೀನ್ ಮತ್ತಿತರರು ಭಾಗವಹಿಸಿದ್ದರು.

26ಕೆಟಿಆರ್.ಕೆ4ಃ

ತರೀಕೆರೆಯಲ್ಲಿ ಕೇಂದ್ರ ರೈಲ್ವೆ ಸಚಿವ ಸೋಮಣ್ಣ ಸಾರ್ವಜನಿಕರು, ಗ್ರಾಮಸ್ಥರು ಮತ್ತು ಲಯನ್ ಕ್ಲಬ್ ಮನವಿ ಸ್ವೀಕರಿಸಿ ಮಾತನಾಡಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ