ತರೀಕೆರೆ: ಸ್ವಾಮಿ ವಿವೇಕಾನಂದ ಕಾಲೇಜು ವಿದ್ಯಾರ್ಥಿ ಶಶಾಂಕ್ ತಾಲೂಕಿಗೆ ಟಾಪರ್

KannadaprabhaNewsNetwork | Published : Apr 14, 2024 1:57 AM

ಸಾರಾಂಶ

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಟಿ. ವಿ ಶಶಾಂಕ್ ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು ೬೦೦ ಅಂಕಗಳಿಗೆ ೫೮೦ ಅಂಕದೊಂದಿಗೆ ಶೇ.೯೭ ಫಲಿತಾಂಶ ಪಡೆದು ತರೀಕೆರೆ ಅಜ್ಜಂಪುರ ತಾಲೂಕಿಗೆ ಮತ್ತು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

೧೨ ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ ಮತ್ತು ೨೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಟಿ. ವಿ ಶಶಾಂಕ್ ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು ೬೦೦ ಅಂಕಗಳಿಗೆ ೫೮೦ ಅಂಕದೊಂದಿಗೆ ಶೇ.೯೭ ಫಲಿತಾಂಶ ಪಡೆದು ತರೀಕೆರೆ ಅಜ್ಜಂಪುರ ತಾಲೂಕಿಗೆ ಮತ್ತು ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಕನ್ನಡ ೯೭, ಇಂಗ್ಲೀಷ್ ೯೧ ಭೌತಶಾಸ್ತ್ರ ೯೭, ರಸಾಯನ ಶಾಸ್ತ್ರ ೯೯, ಗಣಿತ ೯೮, ಜೀವಶಾಸ್ತ್ರ ೯೮ ಅಂಕ ಪಡೆದಿದ್ದು, ಪಟ್ಟಣದ ಕೋಟೆಕ್ಯಾಂಪಿನ ವಿರೂಪಾಕ್ಷ ಮತ್ತು ಪ್ರೇಮಾ ದಂಪತಿ ಪುತ್ರ ಶಶಾಂಕ್‌ ಮುಂದೆ ಡಾಕ್ಟರ್ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಮಂಜುನಾಥ ಮತ್ತು ಆಶಾ ದಂಪತಿ ಪುತ್ರಿ ಕಾವ್ಯ ಟಿ.ಎಂ ಒಟ್ಟು ೬೦೦ ಅಂಕಗಳಿಗೆ ೫೭೮ ಅಂಕದೊಂದಿಗೆ ಶೇ ೯೬ ಫಲಿತಾಂಶ ಪಡೆದು ತರೀಕೆರೆ ಅಜ್ಜಂಪುರ ತಾಲೂಕಿಗೆ ಮತ್ತು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಕನ್ನಡ ೯೬, ಹಿಂದಿ ೯೭ ಭೌತಶಾಸ್ತ್ರ ೯೨, ರಸಾಯನ ಶಾಸ್ತ್ರ ೯೭, ಗಣಿತ ೯೭, ಜೀವಶಾಸ್ತ್ರ ೯೯ ಅಂಕ ಪಡೆದಿದ್ದಾರೆ. ತರೀಕೆರೆಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಬಾರಿಗೆ ದ್ವಿತೀಯ ಪಿಯುಸಿಯಲ್ಲಿ ಒಟ್ಟು ೫೬ ವಿದ್ಯಾರ್ಥಿಗಳಿದ್ದು ೧೨ ವಿದ್ಯಾರ್ಥಿಗಳು ಅತ್ಯುನ್ನತ (ಡಿಸ್ಟಿಂಕ್ಷನ್) ಶ್ರೇಣಿಯಲ್ಲಿ ಮತ್ತು ೨೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.ಕಾಲೇಜಿನ ಉತ್ತಮ ಫಲಿತಾಂಶ ಗಳಿಸಲು ಕಾರಣರಾದ ಕಾಲೇಜಿನ ಉಪನ್ಯಾಸಕರಿಗೆ, ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಟಿ. ಜಿ. ಶಶಾಂಕರವರು, ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಕಾರ್ತಿಕೇಯನ್, ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆ ಮುಖ್ಯಶಿಕ್ಷಕ ಎಂ. ಪಿ ಪ್ರಶಾಂತ್‌ ಅಭಿನಂದಿಸಿದ್ದಾರೆ.13ಕೆಟಿಆರ್.ಕೆ.1ಃ ಟಿ.ವಿ.ಶಶಾಂಕ್

13ಕೆಟಿಆರ್.ಕೆ.2ಃ ಕಾವ್ಯ ಟಿ.ಎಂ.

Share this article