ಹೊಸಪೇಟೆ: ತುಂಗಭದ್ರಾ ಮಂಡಳಿ ನೌಕರರಿಗೆ ಎರಡು ತಿಂಗಳ ವೇತನ ಮತ್ತು ಪಿಂಚಣಿ ಬಾಕಿ ಉಳಿಸಿಕೊಂಡಿರುವುದನ್ನು ವಿರೋಧಿಸಿ, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಟಿ.ಬಿ.ಬೋರ್ಡ್ ವರ್ಕ್ ಚಾರ್ಜ್ಡ್ ನೌಕರರ ಸಂಘದಿಂದ ಇಲ್ಲಿನ ಟಿಬಿ ಬೋರ್ಡ್ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
165 ನೌಕರರಿಗೆ ವೇತನ ಬಾಕಿ ಉಳಿದಿದ್ದು, ಕಾರಣ ಏನೆಂದು ಗೊತ್ತಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು. ನೌಕರರ ವೇತನ ಬಿಡುಗಡೆ ಮಾಡಿ ಆತಂಕ ದೂರವಾಗಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಟಿಬಿ ಬೋರ್ಡ್‌ನ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಹಾಗೂ ನೌಕರರು ಇದ್ದರು.
ಹೊಸಪೇಟೆಯ ತುಂಗಭದ್ರಾ ಮಂಡಳಿ ಕಚೇರಿ ಎದುರು ನಡೆದ ಪ್ರತಿಭಟಡನೆಯನ್ನುದ್ದೇಶಿಸಿ ಮಾಜಿ ಸಚಿವ ದಿವಾಕರಬಾಬು ಮಾತನಾಡಿದರು.