ಜಾತಿ ನಿಂದನೆ ಮಾಡುವವರಿಗೆ ತಕ್ಕ ಪಾಠ ಕಲಿಸಿ

KannadaprabhaNewsNetwork |  
Published : Oct 22, 2025, 01:03 AM IST
ಯಮಕನಮರಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಯಮಕನಮರಡಿ ಇಡೀ ಮನುಕುಲಕ್ಕೆ ರಾಮಾಯಣ ರಚಿಸಿ ಬದುಕುವ ದಾರಿ ತೋರಿಸಿದ ಶ್ರೀ ಮಹರ್ಷಿ ವಾಲ್ಮೀಕಿಯವರ ಸಮುದಾಯದಲ್ಲಿ ಜನಿಸಿದ ಮುಗ್ಧ ಜನರ ಜಾತಿ ನಿಂದನೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂದು ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ ಹೇಳಿದರು.

  ಯಮಕನಮರಡಿ :  ಇಡೀ ಮನುಕುಲಕ್ಕೆ ರಾಮಾಯಣ ರಚಿಸಿ ಬದುಕುವ ದಾರಿ ತೋರಿಸಿದ ಶ್ರೀ ಮಹರ್ಷಿ ವಾಲ್ಮೀಕಿಯವರ ಸಮುದಾಯದಲ್ಲಿ ಜನಿಸಿದ ಮುಗ್ಧ ಜನರ ಜಾತಿ ನಿಂದನೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂದು ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ ಹೇಳಿದರು.

ಹತ್ತರಗಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರೋಧಿಗಳ ಟೀಕೆ, ಟಿಪ್ಪಣಿಗಳಿಗೆ ಕಿವಿಗೊಡದೆ ಸಚಿವ ಸತೀಶ ಜಾರಕಿಹೊಳಿಯವರು ಎಲ್ಲ ಸಮುದಾಯದವರ ಹಿತಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ವಿರೋಧಿಗಳು ಟೀಕೆ ಮಾಡದೆ ಜನಪರ ಕಾರ್ಯ ಮಾಡಬೇಕು. ವಾಲ್ಮೀಕಿ ಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಕರೆ ನೀಡಿದರು.

ಹತ್ತರಗಿ ಹರಿ ಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿಯವರು ಮಹಾಜ್ಞಾನಿಗಳು. ಅವರು ರಚಿಸಿರುವ ರಾಮಾಯಣ ಮಹಾಗ್ರಂಥ ಮನುಷ್ಯರು ಬದುಕಲು ಅವಶ್ಯವಿರುವ ಆದರ್ಶ ಮೌಲ್ಯಗಳನ್ನು ಒಳಗೊಂಡಿದೆ ಎಂದು ಹೇಳಿದರು. ಎಂದು ಹೇಳಿದರು. ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಯುವ ಧುರೀಣ ರವೀಂದ್ರ ಜಿಂಡ್ರಾಳಿ ಮಾತನಾಡಿ, ಮಹರ್ಷಿಗಳ ಜಯಂತಿಯು ಆಚರಣೆಗೆ ಸೀಮಿತವಾಗಿರದೆ ಪ್ರತಿನಿತ್ಯ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದು ಆದರ್ಶ ಮೌಲ್ಯಗನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಶೇ.3ರಷ್ಟುಇದ್ದ ಮೀಸಲಾತಿಯು ಸಚಿವ ಸತೀಶ ಜಾರಕಿಹೊಳಿಯವರ ಪ್ರಯತ್ನದಿಂದ ವಾಲ್ಮೀಕಿ ಸಮುದಾಯಕ್ಕೆ ಶೇ.7 ಸಿಕ್ಕಿದೆ ಎಂದು ಹೇಳಿದರು. ಆನಂದ ಪಾಟೀಲ ಮಾತನಾಡಿದರು.

ಇದೇ ವೇಳೆ ಬೀದಿ ವ್ಯಾಪಾರಿಗಳಿಗೆ ಸತೀಶ ಫೌಂಡೇಶನ್‌ ವತಿಯಿಂದ ಛತ್ರಿಗಳು ಮತ್ತು ನರೇಗಾ ಕೂಲಿ ಕಾರ್ಮಿಕರಿಗೆ ಕ್ಯಾಪ್‌ಗಳು ವಿತರಿಸುವುದರ ಜೊತೆಗೆ ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಹುಕ್ಕೇರಿ ತಾಪಂ ಮಾಜಿ ಅಧ್ಯಕ್ಷ ದಸ್ತಗಿರ ಬಸಾಪುರಿ, ವಿಠ್ಠಲ ಕಡಗಾಂವಿ, ಸಿದ್ದಣ್ಣ ಹಾಲದೇವರಮಠ, ಮಂಜುನಾಥ ದೇಶಪ್ಪಗೋಳ, ರಾಯಣ್ಣ ಗುಳ್ಳಿ, ಸಂಜೀವ ಮುಂಡಳಿ, ಇಮಾಮ ಹುಸೇನ್ ನದಾಫ, ಅಶೋಕ ಪಾಟೀಲ, ಪರುಶುರಾಮ ಜಿಂಡ್ರಾಳಿ, ಉದಯ ಹಿರೇಮಠ, ಮಲ್ಲೇಶ ಗುರವ, ಸಂಜು ಗೊಂದಳಿ, ಮಹಾತೆಂಶ ಕರಗುಪ್ಪಿ, ನಾಗರಾಕಂಠಿ, ರಸೂಲ್ ನದಾಫ, ಮಹಾತೆಂಶ ಸಾರಾಪುರಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಲದ ಸದ್ಯಸರು, ಗ್ರಾಮಸ್ಥರು ಇದ್ದರು.

PREV
Read more Articles on

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ