ವಿದ್ಯಾಭ್ಯಾಸದ ಜತೆ ಮಕ್ಕಳಿಗೆ ಕೃಷಿ ಹೇಳಿಕೊಡಿ

KannadaprabhaNewsNetwork |  
Published : Jan 07, 2026, 02:45 AM IST
ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 1986-87ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಗುರುವಂದನೆ, ಸ್ನೇಹಸಮ್ಮಿಲನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಇತ್ತೀಚಿನ ಯುವಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ ಎನ್ನುವುದು ಖೇದಕರ ಸಂಗತಿ.

ಮರಿಯಮ್ಮನಹಳ್ಳಿ: ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡುವ ಧಾವಂತದಲ್ಲಿರುವ ಎಲ್ಲರಿಗೂ ಈಗ ಕೃಷಿ ಮಾಡುವ ಬಯಕೆ ಇಲ್ಲದಾಗಿರುವುದು ಖೇದದ ಸಂಗತಿ. ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕೃಷಿ ಚಟುವಟಿಕೆ ಕಲಿಸಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಬಿ.ಎಂ.ಎಸ್. ಚೆನ್ನವೀರಯ್ಯ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ (ಪ್ರೌಢಶಾಲೆ) ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 1986-87ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಅವರು ಮಾತನಾಡಿದರು. ನಮ್ಮ ದೇಶ ಕೃಷಿ ಪ್ರಧಾನವಾಗಿದ್ದು, ಇತ್ತೀಚಿನ ಯುವಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲ ಎನ್ನುವುದು ಖೇದಕರ ಸಂಗತಿ. ಉನ್ನತ ಶಿಕ್ಷಣ ಪಡೆದ ಪದವೀಧರರು ತಮ್ಮ ಕೆಲಸದ ಜತೆಗೆ ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ಕೃಷಿಗೆ ಮತ್ತೆ ಜೀವ ಬಂದಿದೆ. ಭೂಮಿಗೆ ಬೆಲೆ ಬಂದಿದೆ. ಉನ್ನತ ಶಿಕ್ಷಣ ಕಲಿಯುವ ಜತೆಗೆ ಕೃಷಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನಿವೃತ್ತ ಶಿಕ್ಷಕಿ ಪದ್ಮಬಾಯಿ ಮಾತನಾಡಿ, ನಾವು ನೀಡಿದ ಶಿಕ್ಷಣದಿಂದ ನಮಗೆ ಸಿಕ್ಕ ತೃಪ್ತಿ ಇದು ಎಂದು ಹೇಳಿದರು. ನಿವೃತ್ತ ಶಿಕ್ಷಕಿ ಸೂರ್ಯಕುಮಾರಿ ಮಾತನಾಡಿ, ಮಕ್ಕಳಿಗೆ ಮೊದಲು ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕಾಗಿದೆ ಎಂದರು. ಉಪಪ್ರಚಾರ್ಯ ಕಾಶಿಂಸಾಹೇಬ್ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಶಿವಶಂಕರ ಬಣಗಾರ, ಡಾ. ಎರಿಸ್ವಾಮಿ, ಜಿ. ವೆಂಕಟರಮೇಶ್ ಶೆಟ್ಟಿ, ಪೂಜಾರಿ ಬಸವರಾಜ, ಪರಮೇಶ್ವರ, ಏಕಾಂಬರೀಶ್ ನಾಯ್ಕ್, ಗೌತಮ್ ಜೈನ್‌, ಲಿಂಗರಾಜ ಲಿಂಬೇಕಾಯಿ, ತ್ಯಾವರನಾಯ್ಕ್, ಭರತ್‌, ಹನುಮಂತ, ಎಚ್‌. ರೇಖಾ, ಮಂಜುಳಾ, ಎಚ್‌. ಸರೋಜಾ, ಇಂದಿರಾ ಕಲಾಲ್‌, ಶ್ಯಾಮಲಾ, ಕೆ. ಸುಲೋಚನಾ, ಎ. ಇಂದಿರಾ, ಯಶೋದಾ, ಪ್ರಮೀಳಾ, ಸಾವಿತ್ರಿ, ಮೋಹಿನಿ, ಎಚ್‌. ಪುಷ್ಪಲತಾ, ಎಚ್‌. ಗೀತಾ, ಎಚ್‌. ಲಲಿತಾ, ನಾಗರಾಜ, ರಾಜಣ್ಣ ಸಾ, ಖಾಜಮೋದೀನ್‌, ನಾಗರಾಜ, ರಾಜಲಿಂಗಪ್ಪ, ಕರಿಯಪ್ಪ, ಕೆ. ಬಾಬು ಸೇರಿದಂತೆ ಹಲವರು ತಮ್ಮ ವಿದ್ಯಾರ್ಥಿ ಜೀವನದ ಘಟನೆಗಳನ್ನು, ತಮ್ಮ ಮಕ್ಕಳ ಸಾಧನೆ ಹಾಗೂ ಬದುಕಿನ ಘಟನೆಗಳನ್ನು ಹಂಚಿಕೊಂಡರು.

ಗುರುವಂದನೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರ ಪಾದಪೂಜೆ ನೆರವೇರಿಸಿ, ನಮಿಸಿದರು. ಎಚ್‌. ರೇಖಾ, ಮೋಹಿನಿ ಪ್ರಾರ್ಥಿಸಿದರು. ರಾಜಲಿಂಗಪ್ಪ ಸ್ವಾಗತಿಸಿದರು. ಪರಮೇಶ್ವರ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ತ್ಯಾವರನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ